ಜಾನುವಾರುಗಳಿಗೆ ಲಸಿಕೆ ಹಾಕಿಸಿ: ಕಾಲುಬಾಯಿ ಬೇನೆ ನಿರ್ಮೂಲನಾ ಅಭಿಯಾನ


Team Udayavani, Oct 5, 2020, 6:40 PM IST

ಜಾನುವಾರುಗಳಿಗೆ ಲಸಿಕೆ ಹಾಕಿಸಿ: ಕಾಲುಬಾಯಿ ಬೇನೆ ನಿರ್ಮೂಲನಾ ಅಭಿಯಾನ

ಹಾವೇರಿ: ಜಾನುವಾರುಗಳಿಗೆ ಕಾಲುಬಾಯಿ ಬೇನೆ ರೋಗ ನಿರ್ಮೂಲನೆಗಾಗಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡಿರುವ, ಜಾನುವಾರುಗಳ ಕಾಲುಬಾಯಿ ಬೇನೆ ರೋಗ ನಿವಾರಕ ಲಸಿಕಾ ಕಾರ್ಯಕ್ರಮಕ್ಕೆ ಕರ್ಜಗಿ ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಚಾಲನೆ ನೀಡಿದರು.

ತಾಲೂಕಿನ ಕರ್ಜಗಿಯ ಪಶು ಆಸ್ಪತ್ರೆ ಆವರಣದಲ್ಲಿ ಗೋ ಪೂಜೆ ಮಾಡಿ ಜಾನುವಾರುಗಳಿಗೆ ಲಸಿಕೆ ವಿತರಣೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕಾಲುಬಾಯಿ ಬೇನೆ ರೋಗ ವೈರಾಣುವಿನಿಂದ ಬರುವಂತಹ ಕಾಯಿಲೆಯಾಗಿದೆ. ಇದರಿಂದ ಜಾನುವಾರುಗಳಿಗೆ ಹೆಚ್ಚಿನ ಜ್ವರ ಕಾಣಿಸಿಕೊಂಡು ಕಾಲು ಮತ್ತು ಬಾಯಿಯಲ್ಲಿ ಹುಣ್ಣಾಗಿ ಜೊಲ್ಲು ಸುರಿಸುತ್ತವೆ.

ಜಾನುವಾರುಗಳಲ್ಲಿ ಹಾಲಿನ ಇಳುವರಿ ಕಡಿಮೆಯಾಗಿ ಜಾನುವಾರುಗಳ ಉತ್ಪಾದನೆ ಹಾಗೂ ಉತ್ಪಾದಕತೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ರೈತ ಬಾಂಧವರು ಲಸಿಕೆ ಹಾಕಿಸುವಂತೆ ಮನವಿ ಮಾಡಿಕೊಂಡರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಮಾತನಾಡಿ, ಲಸಿಕಾ ಕಾರ್ಯಕ್ರಮದ ದೈನಂದಿನ ಪ್ರಗತಿ ವರದಿಗಳನ್ನು ಆನ್‌ಲೈನ್‌ನಲ್ಲಿ ತಾಲೂಕುವಾರು ದಾಖಲಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್‌ ಇಂಡಿಯಾದಡಿ ಜಿಲ್ಲೆಯ ಎಲ್ಲ ಜಾನುವಾರುಗಳಿಗೆ 12 ಸಂಖ್ಯೆ ವಿಶಿಷ್ಟ ರೀತಿಯ ಕಿವಿಯೋಲೆಗಳನ್ನು ಹಾಕುವ ಕಾರ್ಯಕ್ರಮವನ್ನು ಸಹ ಅನುಷ್ಟಾನಗೊಳಿಸಲಾಗಿತ್ತಿದೆ. ಈ ಕಿವಿಯೋಲೆ ಹಾಕಿದ ಜಾನುವಾರುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಸ ತಂತ್ರಾಂಶವಾದ ಇನಾಫ್‌ ಅಳವಡಿಸಲು ಜಿಲ್ಲೆಗೆ ಒಟ್ಟು 2,46,000 ಕಿವಿಯೋಲೆಗಳು ಸರಬರಾಜಾಗಿವೆ. ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕುವುದರ ಜೊತೆಗೆ ಬಾಕಿ ಇರುವ ಕಿವಿಯೋಲೆಗಳನ್ನು ಜಾನುವಾರುಗಳಿಗೆ ಅಳವಡಿಸಲು ಪಶುವೈದ್ಯಕೀಯ ಅಧಿ ಕಾರಿ ಹಾಗೂ ಸಿಬ್ಬಂದಿ ಶ್ರಮಿಸಬೇಕು ಎಂದರು.

ರೈತ ಬಾಂಧವರು ಆಸಕ್ತಿಯಿಂದ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಗೂ ಕಿವಿಯೋಲೆ ಹಾಕಿಸಲು ಮುಂದಾಗಬೇಕೆಂದು ಮನವಿ ಮಾಡಿದರು. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ರಾಜು ಕೂಲೇರ ಮಾತನಾಡಿ, ಜಿಲ್ಲಾದ್ಯಂತ ಅ.2ರಿಂದ ನವೆಂಬರ್‌ 15ರವರೆಗೆ 45 ದಿನಗಳ ಕಾಲ ಮೊದಲನೇ ಸುತ್ತಿನ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಅಭಿಯಾನ ಪಶುವೈದ್ಯಕೀಯ ಇಲಾಖೆ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಟಾಪ್ ನ್ಯೂಸ್

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri-Die

Haveri: ಡಾಬಾ ಬಂದಾಗ ದಿಢೀರ್‌ ಎಂದು ಕಣ್ಣು ಬಿಟ್ಟ ವ್ಯಕ್ತಿ ನಿಧನ!

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

12-haveri

Haveri: ಕೃಷ್ಣಮೃಗ ಅಭಯಾರಣ್ಯದಲ್ಲಿ “ಕಲ್ಲು ಗೌಜಲು’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.