ಗ್ರಾಮೀಣ ಭಾಗದಲ್ಲಿ ಮಿನಿ ಎಟಿಎಂ ಸಹಕಾರಿ
Team Udayavani, Jul 26, 2019, 2:28 PM IST
ಶಿಗ್ಗಾವಿ: ವೆಬ್‌ಕಾಸ್ಟ್ ಮಿನಿ ಎಟಿಎಂ ಸೇವೆಗೆ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಚಾಲನೆ ನೀಡಿದರು.
ಶಿಗ್ಗಾವಿ: ಗ್ರಾಮೀಣ ಭಾಗದ ಜನತೆಗೆ ಹಣಕಾಸಿನ ವಹಿವಾಟಿಗೆ ವೆಬ್‌ಟಾಕ್ ಮಿನಿ ಎಟಿಎಂ ಸೇವೆ ಪ್ರಾರಂಭಿಸುವುದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲಕರವಾಗಲಿದೆ ಎಂದು ಪಟ್ಟಣದ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ರಾಜಶ್ರೀ ಚಲನಚಿತ್ರ ಮಂದಿರದ ಹತ್ತಿರವಿರುವ ಓಂಕಾರೇಶ್ವರ ಆಲೂರ ಅವರ ಮಳಿಗೆಯಲ್ಲಿ ವೆಬಾಟಾಕ್ ಮಿನಿ ಎಟಿಎಂ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರಕ್ಕಾಗಲಿ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕಗಳ ಮೂಲಕ ಎಟಿಎಂ ವ್ಯವಸ್ಥೆ ನೀಡಲು ಸಾಧ್ಯವಿಲ್ಲ. ಇಂತಹ ಸಮಸ್ಯೆಗಳನ್ನು ಮನಗಂಡು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸಲು ವಿಭಿನ್ನ ಸೇವೆ ಚಾಲನೆಗೊಳಿಸಲಾಗಿದೆ. ಸಾರ್ವಜನಿಕರ ಸೇವೆ ಜತೆಗೆ ಆರ್ಥಿಕವಾಗಿ ಸಬಲೀಕರಣ ಹೊಂದುವಂತಾಗಲಿ ಎಂದು ಖಾಸಗಿ ಕಂಪನಿಗಳು ಮುಂದೆ ಬಂದಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದರು.
ಕ್ಲಸ್ಟರ್ ವ್ಯವಸ್ಥಾಪಕ ರಾಘವೇಂದ್ರ ಎಂ. ಮಾತನಾಡಿ, ಇಂದಿನಿಂದ ಶಿಗ್ಗಾವಿ ಪಟ್ಟಣದಲ್ಲಿ ವೆಬ್‌ಕಾಸ್ಟ್ ಮಿನಿ ಎಟಿಎಂ ಸೇವೆಯನ್ನು ತಾಲೂಕಿನ ಮಣಕಟ್ಟಿ, ಹಿರೇಬೆಂಡಿಗೇರಿ, ಮುಗಳಿ, ಬೆಳಗಲಿ, ಕೋಣನಕೇರಿ, ಕುನ್ನೂರ ಗ್ರಾಮಗಳಲ್ಲಿ ಪ್ರಾರಂಭ ಮಾಡಿದ್ದು, ಇದರ ಸದುಪಯೋಗವನ್ನು ಹೆಚ್ಚು ಹೆಚ್ಚು ಗ್ರಾಮೀಣ ಪ್ರದೇಶದ ಜನರು ಇದರ ಲಾಭ ಪಡೆದುಕೊಳ್ಳಬೇಕು ಮತ್ತು ಯಾವುದೇ ಬ್ಯಾಂಕಿನ ಡೆಬಿಟ್ ಕಾರ್ಡ್‌ನಿಂದ ಹಣ ಪಡೆದುಕೊಳ್ಳಬಹುದು ಹಾಗೂ ಯಾವುದೇ ಬ್ಯಾಂಕಿನ ಖಾತೆಗೆ ಸುಲಭವಾಗಿ ಹಣ ಜಮೆ ಸಹ ಮಾಡಬುದು ಎಂದು ಹೇಳಿದರು. ಕಂಪನಿ ಸಿಬ್ಬಂದಿ ಶಶಿಕಾಂತ ತಡಸ, ಓಂಕಾರೇಶ್ವರ ಆಲೂರ, ರಾಜಶೇಖರ ಅಂಕಲಕೋಟಿ, ಈರಪ್ಪ ಮಂಟಗಣಿ, ರಂಗನಾಥ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.