![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Feb 10, 2021, 5:18 PM IST
ಬ್ಯಾಡಗಿ: “ಜನಸೇವೆಯೇ ಜನಾರ್ದನ ಸೇವೆ’ ಎಂಬ ಘೋಷವಾಕ್ಯದೊಂದಿಗೆ 7.87.200 ಲಕ್ಷ ರೂ.ಉಳಿತಾಯದೊಂದಿಗೆ 19.19 ಕೋಟಿ ರೂ. ಗಾತ್ರದ 2021-22ನೇ ಸಾಲಿನ ಪುರಸಭೆಯ ಬಜೆಟ್ ಅನ್ನು ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ ಮಂಗಳವಾರ ಮಂಡಿಸಿದರು.
ಈ ವೇಳೆ ಮಾತನಾಡಿದ ಅವರು, ಜಗತ್ತಿನ ವೇಗಕ್ಕೆ ಭಾರತವನ್ನು ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೇರಿತರಾಗಿ ಕ್ಯಾಶ್‌ಲೆಸ್‌ಗೆ ಮನ್ನಣೆ ನೀಡಿರುವುದರಿಂದ ಪುರಸಭೆಯಲ್ಲಿ ಹಣಕಾಸಿನ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಸ್ವತ್ಛತೆಯೇಸೌಭಾಗ್ಯ, ಆರೋಗ್ಯ ಭಾಗ್ಯ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಂದೋಲನರೂಪದಲ್ಲಿ ನಡೆಸಲು ಇಚ್ಛಿಸಿದ್ದೇನೆ ಎಂದರು. ಪಟ್ಟಣದಲ್ಲಿ ದಿನದ 24 ಗಂಟೆ ಕುಡಿಯುವ ನೀರು ಸೌಲಭ್ಯ ಹಾಗೂ ಒಳಚರಂಡಿ ವ್ಯವಸ್ಥೆ ಜಾರಿಯ ಹಂತದಲ್ಲಿದೆ. ಪ್ರತಿ 200 ಮೀ.ಗೆ ಒಂದರಂತೆ ವಿದ್ಯುತ್ ದೀಪ ಅಳವಡಿಸಲಾಗಿದ್ದು, ಪಟ್ಟಣವನ್ನು ಮಾದರಿಯನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದರು.
19.19 ಕೋಟಿ ಆದಾಯ ನೀರೀಕ್ಷೆ: 15ನೇ ಹಣಕಾಸು, ಮಳಿಗೆ ಬಾಡಿಗೆ, ಆಸ್ತಿ ತೆರಿಗೆ, ನೀರಿನ ಕರ, ಖಾತೆ ಬದಲಾವಣೆ, ಸಂತೆ ಹರಾಜು, ಮೇಲ್ವಿಚಾರಣೆ ಫೀ ಕಟ್ಟಡ ಪರವಾನಗಿ, ವಿದ್ಯುತ್ ಅನುದಾನ, ಘನ ತ್ಯಾಜ್ಯ ನಿರ್ವಹಣೆ, ಸಕ್ಕಿಂಗ್ ಮಿಶಿನ್ ಬಾಡಿಗೆ, ಸ್ಟಾಂಪ್ ಡ್ನೂಟಿ ಸೇರಿದಂತೆ ಪುರಸಭೆಗೆ ಬರುವ ಸರಕಾರದ ವಿವಿಧ ಅನುದಾಗಳನ್ನೊಳಗೊಂಡಂತೆ ಒಟ್ಟು 19.19,46,700 ಕೋಟಿ ಆದಾಯ ನೀರಿಕ್ಷೆ ಇದೆ. ಇದರಲ್ಲಿ 19.11,59,500 ವ್ಯಯ ಮಾಡಿ ಒಟ್ಟು 7.87,200 ಮೊತ್ತದ ಉಳಿತಾಯ ಮಾಡಲಾಗುತ್ತಿದೆ ಎಂದರು.
200 ಕೋಟಿ ಅನುದಾನ ತರುವೆ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬಿಜೆಪಿ ಅಧಿಕಾರ ಹಿಡಿದ ದಿನದಿಂದ ಬ್ಯಾಡಗಿ ಕ್ಷೇತ್ರಕ್ಕೆ ಯಡಿಯೂರಪ್ಪನವರು ಒಟ್ಟು 625 ಕೋಟಿ ಅನುದಾನ ನೀಡಿದ್ದಾರೆ. ಇದೇ ರೀತಿ ಮುಂದಿನ ಮೂರು ತಿಂಗಳಿನಲ್ಲಿ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು 200 ಕೋಟಿ ಅನುದಾನ ತರುವುದಾಗಿ ಭರವಸೆ ನೀಡಿದರು.ಸಂತೆ ಮಾರುಕಟ್ಟೆ ನಡೆಸಿ: ಸದಸ್ಯ ಬಸವರಾಜ ಛತ್ರದ ಮಾತನಾಡಿ, ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಚಿಕನ್, ಮಟನ್ ಸೇರಿದಂತೆ ತರಕಾರಿ ಹಾಗೂ ಇನ್ನಿತರ ವಸ್ತುಗಳ ಅಂಗಡಿಗಳನ್ನು ರಸ್ತೆ ಅಕ್ಕ ಪಕ್ಕದಲ್ಲಿ ಇಟ್ಟು ನಡೆಲಾಗುತ್ತಿದೆ.ಜನರ ಆರೋಗ್ಯದ ದೃಷ್ಟಿಯಿಂದ ಇದು ಮಾರಕವಾಗಿದೆ. ಆದ್ದರಿಂದ ವಾರಕ್ಕೆ ಎರಡು ದಿನ ಮಾತ್ರ ನಡೆಯುವ ಸಂತೆಯನ್ನು ಪ್ರತಿದಿನ ನಡೆಸಿದಲ್ಲಿ ಎಲ್ಲ ವಸ್ತುಗಳು ಒಂದೆಸೂರಿನಡಿಯಲ್ಲಿ ಸಿಗುತ್ತವೆ ಎಂದರು. ಎಲ್ಲ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ರು. ಸಭೆಯಲ್ಲಿ ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಪುರಸಭೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.