ನಗರಸಭೆ ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧ
Team Udayavani, Feb 7, 2019, 9:55 AM IST
ಹಾವೇರಿ: ಬಹುವರ್ಷಗಳಿಂದ ‘ಕಾರಾಗೃಹ’ದಲ್ಲಿದ್ದ ಜಿಲ್ಲಾ ಕೇಂದ್ರ ಹಾವೇರಿ ನಗರಾಡಳಿತ ನೋಡಿಕೊಳ್ಳುವ ನಗರಸಭೆ, ಈಗ ಕಾರಾಗೃಹದಿಂದ ಹೊರಬಂದು ‘ಸ್ವತಂತ್ರ’ವಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದೆ!
ಹೌದು, ಅನೇಕ ವರ್ಷಗಳಿಂದ ಕಾರಾಗೃಹ ಕಟ್ಟಡದಲ್ಲಿದ್ದ ನಗರಸಭೆ ಕಚೇರಿ ಈಗ ಸ್ವಂತ ಕಟ್ಟಡ ಹೊಂದಿದ್ದು ಹೊಸ ಕಟ್ಟಡ ಪ್ರವೇಶಿಸಲು ಸಜ್ಜಾಗಿದೆ.
ನಗರದ ಹೃದಯ ಭಾಗದಲ್ಲಿರುವ 26.40 ಗುಂಟೆ ಜಾಗದಲ್ಲಿ ಮೂರಂತಸ್ತಿನ ಭವ್ಯ ಕಟ್ಟಡವು 5.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಕಟ್ಚಡದ ನೆಲಮಹಡಿಯ ಮುಖ್ಯದ್ವಾರದ ಎಡ ಮತ್ತು ಬಲ ಭಾಗದಲ್ಲಿ ಅಧ್ಯಕ್ಷರ, ಉಪಾಧ್ಯಕ್ಷರ ಪ್ರತ್ಯೇಕ ಕೊಠಡಿ, ಕಚೇರಿ ಸಿಬ್ಬಂದಿ ಕೊಠಡಿ, ರೆಕಾರ್ಡ್ ರೂಂ ಮತ್ತು ಸ್ಟೋರ್ ರೂಂ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಎಡ ಮತ್ತು ಬಲ ಭಾಗದ ಎರಡು ಕಡೆಗಳಲ್ಲಿ ಮೇಲಂತಸ್ತಿಗೆ ಹೋಗುವ ಮೆಟ್ಟಿಲು ಹೊಂದಿದೆ. ಮೊದಲ ಮಹಡಿಯಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಶಾಸಕರ ಪ್ರತ್ಯೇಕ ಕೊಠಡಿಗಳು, ಕಚೇರಿ ಸಿಬ್ಬಂದಿ ಕೊಠಡಿಗಳು, ರೆಕಾರ್ಡ್ ರೂಂ ಮತ್ತು ಸ್ಟೋರ್ ರೂಮ್, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.
ಎರಡನೇ ಮಹಡಿಯಲ್ಲಿ ಪೌರಾಯುಕ್ತರ ಕೊಠಡಿ, 150 ಆಸನವುಳ್ಳ ಸಭಾಭವನ, ಸ್ಟೋ ರೂಂ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಕಟ್ಟದ ಮುಂಭಾಗ ಅಕ್ಕಪಕ್ಕದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಸ್ಥಳ, ಸಾರ್ವಜನಿಕರ ವಿಶ್ರಾಂತಿಗೆ ಸ್ಥಳ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿದ್ದು ಕಟ್ಟಡ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ.
ಹೊಸಾಡಳಿತಕ್ಕೆ ಹೊಸ ಕಚೇರಿ: ನಗರಸಭೆ ಚುನಾವಣೆ ಮುಗಿದು ನಾಲ್ಕು ತಿಂಗಳ ಕಳೆದರು ಇನ್ನೂ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಇನ್ನೂ ಹೊಸ ಆಡಳಿತ ಮಂಡಳಿ ರಚನೆಯಾಗಿಲ್ಲ. ಎಲ್ಲ ಗೊಂದಲಗಳು ಬಗೆಹರಿದು ಹೊಸ ಆಡಳಿತ ಮಂಡಳಿ ರಚನೆಯಾದರೆ ಅವರ ಆಡಳಿತ ಹೊಸ ಕಚೇರಿಯಿಂದಲೇ ಆರಂಭವಾಗುವ ನಿರೀಕ್ಷೆ ಇದೆ.
ನಗರಸಭೆ ನೂತನ ಕಟ್ಟಡ ಕಾಮಗಾರಿ ಮುಗಿದಿದ್ದರೂ ಇನ್ನೂ ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ. ಅವುಗಳೆಲ್ಲ ಮುಗಿದ ಬಳಿಕ ಜಿಲ್ಲಾಧಿಕಾರಿಗಳ ಸಮ್ಮಖದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಟ್ಟಡವನ್ನು ಹಸ್ತಾಂತರಿಸಿಕೊಳ್ಳಲಾಗುವುದು.
•ಬಸವರಾಜ ಜಿದ್ದಿ, ಪೌರಾಯುಕ್ತರು, ನಗರಸಭೆ
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.