ನರಗುಂದದಲ್ಲಿ ಅಪರೂಪದ ಹಕ್ಕಿರೆಕ್ಕೆ ಚಿಟ್ಟೆ; ­ಬಹುದೂರ, ಎತ್ತರ ಹಾರುವ ಸಾಮರ್ಥ್ಯ

­ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಪತ್ತೆ; ­ಈ ಚಿಟ್ಟೆಯ ಜೀವಿತಾವಧಿ ಕೇವಲ 19 ದಿವಸ

Team Udayavani, Oct 4, 2022, 3:38 PM IST

14

ನರಗುಂದ: ಪಟ್ಟಣದ ಗುಡ್ಡದ ವಾರೆಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಪ್ಯಾಪಿಲಿಯೋನಿಡೇ ಕುಟುಂಬಕ್ಕೆ ಸೇರಿದ ಕಾಮನ್‌ ಬರ್ಡ್‌ವಿಂಗ್‌(ಟ್ರಾಯ್ಡ್ಸ್ ಹೆಲೆನಾ)ಅಪರೂಪದ ಚಿಟ್ಟೆ ಪತ್ತೆಯಾಗಿದೆ. ನಮ್ಮ ದೇಶದಲ್ಲಿ ಅತಿ ದೊಡ್ಡ ಚಿಟ್ಟೆಯ ಜಾತಿಯ ಚಿಟ್ಟೆಗಳಲ್ಲಿ ಇದು ಒಂದು. ಇದರ ರೆಕ್ಕೆಗಳು 140 ರಿಂದ170 ಮಿಮೀ ಅಗಲವಾಗಿರುತ್ತವೆ. ಮುಂದಿನ ರೆಕ್ಕೆಗಳು ಕಪ್ಪಾಗಿದ್ದು, ಹಿಂದಿನ ರೆಕ್ಕೆಗಳು ಹಳದಿ ಬಣ್ಣದಿಂದ ಕೂಡಿದ್ದು ಕಪ್ಪುಚುಕ್ಕೆ ಇರುತ್ತವೆ. ಕಪ್ಪು-ಹಳದಿ ವರ್ಣದಿಂದ ಕೂಡಿದ್ದರಿಂದ ಈ ಚಿಟ್ಟೆ ನೋಡಲು ಆಕರ್ಷಕವಾಗಿರುತ್ತದೆ.

ಇತರೆ ಜಾತಿಯ ಚಿಟ್ಟೆಗಳ ಹಾರಾಟ ಹೋಲಿಸಿದರೆ ಈ ಚಿಟ್ಟೆ ಬಹುದೂರ ಮತ್ತು ಬಹು ಎತ್ತರ ಹಾರುವ ಸಾಮರ್ಥಯ ಹೊಂದಿದೆ. ಈ ಚಿಟ್ಟೆಗೆ ಬರ್ಡ್‌ವಿಂಗ್‌ ಚಿಟ್ಟೆ(ಹಕ್ಕಿರೆಕ್ಕೆ ಚಿಟ್ಟೆ)ಎಂದೇ ಕರೆಯುತ್ತಾರೆ. ಇದರ ಜೀವಿತಾವಧಿ 19 ದಿವಸವಾಗಿರುತ್ತದೆ. ಈ ಚಿಟ್ಟೆ ಸಾಮಾನ್ಯವಾಗಿ ಭಾರತದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಅರಿಸ್ಟ್ಲೋಕಿಯಾ ಜಾತಿಯ ಸಸ್ಯಗಳು ಈ ಚಿಟ್ಟೆಯ ಲಾರ್ವಾಗಳಿಗೆ ಆತಿಥ್ಯ ಸಸ್ಯವಾಗಿದ್ದು, ಪ್ರಬುದ್ಧ ಚಿಟ್ಟೆಗಳು ಕ್ಲಿರೆಡೆಂಡ್ರಾನ್‌, ಅಕೇಶಿಯಾ ಮತ್ತು ರಥಪುಷ್ಪ ಜಾತಿ ಸಸ್ಯಗಳ ಹೂವಿನ ಮಕರಂದ ಸೇವಿಸುತ್ತವೆ. ಚಿಟ್ಟೆಗಳು ಪರಾಗಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸಸ್ಯಗಳ ಸಂತತಿ ವೃದ್ಧಿಸುತ್ತವೆ. ಪಶ್ಚಿಮಘಟ್ಟದ ಸದರ್ನ್ ಬರ್ಡ್‌ವಿಂಗ್‌ ಚಿಟ್ಟೆಯನ್ನು 2019ರಲ್ಲಿ ಕರ್ನಾಟಕದ ರಾಜ್ಯ ಚಿಟ್ಟೆಯೆಂದು ಅಧಿಕೃತವಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬರ್ಡ್‌ವಿಂಗ್‌ ಪ್ರಭೇದದ ಚಿಟ್ಟೆಗಳು ಸಹಾ ಐಯುಸಿಎನ್‌ ಪ್ರಕಾರ ಸಂರಕ್ಷಣೆ ಪಡೆದಿರುತ್ತವೆ.

ಜೀವವೈವಿಧ್ಯತೆ ಸೌಂದರ್ಯ ಹೆಚ್ಚಿಸುವುದಲ್ಲದೆ ಚಿಟ್ಟೆಗಳು ಸಹ ಆರೋಗ್ಯ ಪರಿಸರದ ಸೂಚಕಗಳಾಗಿವೆ. ಚಿಟ್ಟೆಗಳ ಸಂರಕ್ಷಣೆಗೆಂದೇ ಕರ್ನಾಟಕ ಅರಣ್ಯ ಇಲಾಖೆ ರಾಜ್ಯದ ಹಲವೆಡೆ ಚಿಟ್ಟೆ ಪಾರ್ಕ್‌ ನಿರ್ಮಿಸಿದೆ.

ಪಕ್ಷಿ, ಹಲ್ಲಿ ಇನ್ನಿತರೆ ಕೀಟಗಳಿಗೆ ಚಿಟ್ಟೆ ಮತ್ತು ಚಿಟ್ಟೆ ಲಾರ್ವಾ ಆಹಾರ ಪೂರೈಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಣ್ಯನಾಶ, ನಗರೀಕರಣ, ಮಿತಿಮೀರಿದ ಕೀಟನಾಶಕ ಬಳಕೆ ಮತ್ತು ಪರಿಸರ ಮಾಲಿನ್ಯದಿಂದ ಅದೆಷ್ಟೋ ಚಿಟ್ಟೆಗಳು ಅಳಿವಿನಂಚಿಗೆ ತಲುಪಿವೆ.  –ಮಂಜುನಾಥ ಎಸ್‌. ನಾಯಕ್‌, ಜೈವಿಕ ವೈವಿಧ್ಯ ಸಂಶೋಧಕರು, ನರಗುಂದ

„ಸಿದ್ಧಲಿಂಗಯ್ಯ ಮಣ್ಣೂರಮಠ

ಟಾಪ್ ನ್ಯೂಸ್

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.