ಹೊಸ ಸರ್ಕಾರ: ಹಲವು ನಿರೀಕ್ಷೆ

•ಮತ್ತೆ ಚಿಗುರೊಡೆದ ಹಳೆ ಬೇಡಿಕೆ ಸಾಕಾರಗೊಳ್ಳುವ ಕನಸು•ರೈತರ ಬೇಡಿಕೆಗೆ ಸ್ಪಂದಿಸುವ ಭರವಸೆ

Team Udayavani, Aug 6, 2019, 1:00 PM IST

haveri-tdy-1

ಹಾವೇರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೊಸದಾಗಿ ಆಡಳಿತಕ್ಕೆ ಬರುತ್ತಿದ್ದಂತೆ ಜಿಲ್ಲೆಯ ಬಹುದಿನಗಳ ಬೇಡಿಕೆಗಳು ಹೊಸ ಸರ್ಕಾರದ ಅವಧಿಯಲ್ಲಾದರೂ ಈಡೇರಬಹುದೇ ಎಂಬ ಆಸೆ ಚಿಗುರೊಡೆದಿದೆ.

ಜಿಲ್ಲೆಯಲ್ಲಿ ಬಹುಮುಖ್ಯವಾಗಿ ಬಹುವರ್ಷಗಳಿಂದ ಮೆಡಿಕಲ್ ಕಾಲೇಜು ಸ್ಥಾಪನೆ ಬೇಡಿಕೆ ಇನ್ನೂ ಬೇಡಿಕೆಯಾಗಿಯೇ ಉಳಿದಿದೆ. ಇದರ ಜತೆಗೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್‌ ಸ್ಥಾಪನೆ ಸೇರಿದಂತೆ ಹತ್ತು ಹಲವು ಬೇಡಿಕೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಾದರೂ ಈಡೇರಬಹುದು ಎಂದು ನಿರೀಕ್ಷಿಸಲಾಗಿದೆ.

ಸರ್ಕಾರಿ ವೈದ್ಯಕೀಯ ಕಾಲೇಜ್‌ 2013ರಲ್ಲಿ ಜಿಲ್ಲೆಗೆ ಮಂಜೂರಿ ಆಗಿಯೇ ಹೋಯಿತು ಎಂಬಷ್ಟರ ಮಟ್ಟಿಗೆ ಕಾಗದ ಪತ್ರಗಳ ವಹಿವಾಟು ನಡೆಯಿತು. ಆದರೆ, ಕೊನೆಯ ಘಳಿಗೆಯಲ್ಲಿ ಅದು ಕೈತಪ್ಪಿ ಬೇರೆ ಜಿಲ್ಲೆಗಳ ಪಾಲಾಯಿತು. 2017ರಲ್ಲಿ ಮತ್ತೆ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾಯಿತು. ಆದರೆ, ಆರ್ಥಿಕ ಇಲಾಖೆ ಅನುಮೋದನೆ ಮಾತ್ರ ಸಿಕ್ಕಿಯೇ ಇಲ್ಲ. ಈ ಹೊಸ ಸರ್ಕಾರದ ಅವಧಿಯಲ್ಲಾದರೂ ಜಿಲ್ಲೆಯ ಬಹುಮುಖ್ಯ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆ ಕನಸು ನನಸಾದೀತು ಎಂಬ ಆಶಾಭಾವ ಜನತೆ ಹೊಂದಿದೆ.

2016ರ ಬಜೆಟ್‌ನಲ್ಲಿ ಘೋಷಣೆಯಾದ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್‌ ಅನುಷ್ಠಾನ ಈಗಲಾದರೂ ಸಾಕಾರಗೊಳ್ಳಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. 2017ರ ಬಜೆಟ್‌ನಲ್ಲಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಕೋಟಿ ರೂ. ನೀಡಲಾಗಿದ್ದು, ಈ ವರ್ಷವಾದರೂ ಪ್ರಾಧಿಕಾರದ ಚಟುವಟಿಕೆಗೆ ಹೊಸ ಸರ್ಕಾರದಿಂದ ಚಾಲನೆ ಸಿಗಬಹುದು. ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಚಾಲನೆ ಸಿಗಬಹುದು. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರಗಳು ಅಧಿಕೃತವಾಗಿ ಕಾರ್ಯಾರಂಭಿಸುವಲ್ಲಿ ಹೊಸ ಸರ್ಕಾರ ನಿಗಾ ವಹಿಸಬಹುದು ಎಂದು ಆಶಿಸಲಾಗಿದೆ.

ನೀರು, ನೀರಾವರಿ: ಜಿಲ್ಲೆಯಲ್ಲಿ ತುಂಗಭದ್ರಾ, ಧರ್ಮಾ, ಕುಮದ್ವತಿ, ವರದಾ ಹೀಗೆ ನಾಲ್ಕು ನದಿಗಳು ಹರಿದಿವೆ. ಇವುಗಳನ್ನು ಬಳಸಿಕೊಂಡು ಹಾವೇರಿ ನೀರಾವರಿ ಜಿಲ್ಲೆಯಾಗಬೇಕೆಂಬ ಕನಸು ಇನ್ನೂ ಕನಸಾಗಿಯೇ ಇದೆ. ನಿರಂತರ ನೀರು ಯೋಜನೆ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲಿ ಅನುಷ್ಠಾನಗೊಳ್ಳಬೇಕು. ಜಿಲ್ಲಾ ಕೇಂದ್ರ ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಸ್ವಚ್ಛತೆ, ರಸ್ತೆ ಸೇರಿದಂತೆ ಮೂಲಸೌಲಭ್ಯ ಕೊರತೆ ಸಮಸ್ಯೆ ಕಾಡುತ್ತಿದ್ದು, ಇವುಗಳಿಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಬಹುದು ಎಂದು ಭಾವಿಸಲಾಗಿದೆ.

ಹಲವು ಬೇಡಿಕೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮೂಲಸೌಲಭ್ಯ ವಂಚಿತವಾಗಿದೆ. ಈ ಮಾರುಕಟ್ಟೆಗೆ ಉತ್ತೇಜನ ನೀಡುವ ಉದ್ದೇಶದಿಂದ ಏಳು ವರ್ಷಗಳ ಹಿಂದೆ ಘೋಷಣೆಯಾದ ಸ್ಪೈಸ್‌ ಪಾರ್ಕ್‌ ನಿರ್ಮಾಣಕ್ಕೆ ಈವರೆಗೂ ಚಾಲನೆ ಸಿಕ್ಕಿಲ್ಲ. ಈಗಲಾದರೂ ಸ್ಪೈಸ್‌ಪಾರ್ಕ್‌ ನಿರ್ಮಾಣವಾಗಬಹುದೇ ಎಂಬ ಮಹದಾಸೆ ಜನರದ್ದಾಗಿದೆ. ಒಟ್ಟಾರೆ ಹೊಸ ಸರ್ಕಾರದ ಅವಧಿಯಲ್ಲಾದರೂ ಜಿಲ್ಲೆಯ ಬಹುವರ್ಷಗಳ ಬೇಡಿಕೆ ಈಡೇರಬಹುದೇ ಎಂಬ ಕಾತರ ಜನತೆಯದ್ದಾಗಿದ್ದು ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

 

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.