ಕುರುಬರು ಒಗ್ಗಟ್ಟಾಗಿ ಹೆಜ್ಜೆ ಹಾಕಿದರೆ ಪರಾಕ್
Team Udayavani, Jan 16, 2021, 6:23 PM IST
ಹಾವೇರಿ: ಕರ್ನಾಟಕದ ಕುರುಬರು ಒಗ್ಗಟ್ಟಾಗಿ ಹೆಜ್ಜೆ ಹಾಕಿದರೆ ಪರಾಕ್. ಇದು ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಕಾರ್ಣಿಕವಾಗಿದೆ. ಕನಕದಾಸರ ಕರ್ಮಭೂಮಿಯಲ್ಲಿ ಈ ವಾಕ್ಯ ನುಡಿದಿದ್ದೇನೆ. ಎಲ್ಲರೂ ಒಂದಾಗಲೇಬೇಕು. ಫೆ.7ರಂದು 10ಲಕ್ಷ ಜನ ಸೇರಿ ಹೋರಾಟ ನಡೆಸುತ್ತೇವೆ. ಆಗ ಕೇಂದ್ರ ಸರ್ಕಾರ ಈ ಕಡೆ ತಿರುಗಿ ನೋಡಿ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕೊಡಲು ಕರೆಯುತ್ತಾರೆಂದು ಕಾಗಿನೆಲೆಯ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಹೇಳಿದರು.
ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಪಡೆಯುವ ಹಿನ್ನೆಲೆಯಲ್ಲಿ ತಾಲೂಕಿನ ಕಾಗಿನೆಲೆಯಲ್ಲಿರುವ ಕನಕಗುರು ಪೀಠದ ನೇತೃತ್ವದಲ್ಲಿ ಹಮ್ಮಿಕೊಂಡ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿರುವ ನಾಲ್ವರು ಮಂತ್ರಿಗಳು ಕುರುಬ ಸಮುದಾಯವನ್ನು ಎಸ್‌ಟಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಬೇಕು. ಕೇಂದ್ರಕ್ಕೆ ಶಿಫಾರಸ್ಸು ಹೋದ ಬಳಿಕ ನಾಲ್ವರು ಮಂತ್ರಿಗಳು ಸೇರಿ ನಿಯೋಗ ಹೋಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಎಸ್‌ಟಿಗೆ ಸೇರಿಸುವಂತೆ ಒತ್ತಾಯ ಮಾಡಲಾಗುವುದು ಎಂದರು.
ಕಟ್ಟಕಡೆಯ ಕುರುಬ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಅಂತಹ ಕುರುಬರಿಗೆ ಸಾಮಾಜಿಕ ನ್ಯಾಯ ಒದಗಿಸುವ ಆಲೋಚನೆಯಿಂದ ಹೋರಾಟಕ್ಕೆ ಕೈಹಾಕಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹಾಲುಮತದ ಕುರಿಗಳನ್ನು ಮೇಕೆಗಳು ಇಷ್ಟು ದಿನ ದಾರಿ ತಪ್ಪಿಸಿವೆ. ಈಗ ಹಾದಿ ತಪ್ಪಿಸುವ ಅವಶ್ಯಕತೆ ಇಲ್ಲ. ಹಿಂದೆ-ಮುಂದೆ ಶ್ರೀಮಠದ ಸ್ವಾಮೀಜಿಗಳು ಇರ್ತಾರೆ ಎಂದರು. ಸಮುದಾಯಕ್ಕೆ ಏನಾದರೂ ಮಾಡಬೇಕು ಎಂಬ ಯೋಚನೆ ಎಲ್ಲ ಸ್ವಾಮೀಜಿಗಳಿಗಿದೆ. ಸಮುದಾಯದ ಋಣ ತೀರಿಸುವ ಅವಕಾಶ ಸಿಕ್ಕಿದೆ. ಹೀಗಾಗಿ, ಪಾದಯಾತ್ರೆಯಲ್ಲಿ ನಾವೂ 21ದಿನ ಹೆಜ್ಜೆ ಹಾಕ್ತಿವಿ ಎಂದು ಹೇಳಿದರು.
ತಪ್ಪಿನ ಅರಿವಾಗಿದೆ: ಮಾಜಿ ಸಂಸದ, ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ಎಸ್‌ಟಿ ವರ್ಗಕ್ಕೆ ಸೇರುವುದರಿಂದ ನಮ್ಮ ಮುಂದಿನ ನಿರ್ಧಾರ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಜೊಲ್ಲೆ
ಯಾವುದೇ ಅಪಸ್ವರವಿಲ್ಲ: ಬಸವರಾಜ ಶಿವಣ್ಣನವರ ಮಾತನಾಡಿ, ಈ ಪಾದಯಾತ್ರೆಗೆ ಯಾವುದೇ ಅಪಸ್ವರವಿಲ್ಲ. ನಾನು ಸೇರಿದಂತೆ ಸಮುದಾಯದ ಎಲ್ಲರೂ ಪಾಲ್ಗೊಳ್ಳಲ್ಲಿದ್ದೇವೆ. ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಾಣೇಹಳ್ಳಿಯ ಈಶ್ವರಾನಂದಶ್ರೀ, ಸಚಿವರಾದ ಎಂಟಿಬಿ ನಾಗರಾಜ್, ಆರ್. ಶಂಕರ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರು ಓಲೇಕಾರ, ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್, ಪಾದಯಾತ್ರೆ ಸಮಿತಿ ಖಜಾಂಚಿ ಕೆ.ಇ.ಕಾಂತೇಶ್, ಬಳ್ಳಾರಿ ಜಿಲ್ಲೆ ಮೈಲಾರದ ಗೊರವಯ್ಯ ರಾಮಣ್ಣ, ಪ್ರದೇಶ ಕುರುಬ ಸಂಘದ ಸಂಚಾಲಕ ಶಾಂತಪ್ಪ, ಕನಕ ಗುರುಪೀಠದ ಮಾಜಿ ಆಡಳಿತಾ ಧಿಕಾರಿ ಎಸ್‌ಎಫ್ ಎನ್ ಗಾಜೀಗೌಡ್ರ, ಶಂಕ್ರಣ್ಣ ಮಾತನವರ, ರಾಜೇಂದ್ರ ಹಾವೇರಣ್ಣನವರ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.