ಹೆಲಿಕಾಪ್ಟರ್ ದುರಂತವನ್ನು ಸಂಭ್ರಮಿಸಿದವರನ್ನು ಯಾರೂ ಕ್ಷಮಿಸಬಾರದು: ಸಿಎಂ ಬೊಮ್ಮಾಯಿ
Team Udayavani, Dec 10, 2021, 11:56 AM IST
ಹಾವೇರಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲಯಲ್ಲಿ ಶಿಗ್ಗಾವಿ ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಸ್ಥಾಪಿಸಿದ್ದ ಮತದನಾದ ಕೇಂದ್ರದಲ್ಲಿ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ಅವರು ಮತದಾನ ಮಾಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಚುನಾವಣೆ ರಾಜ್ಯಾದ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದು, ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸುವ ವಿಶ್ವಾಸವಿದೆ ಎಂದರು.
ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು ಅಕಾಲಿಕ ಹೆಲಿಕಾಪ್ಟರ್ ದುರಂತದಿಂದ ವೀರ ಮರಣ ಹೊಂದಿದ್ದರು. ಈ ವೇಳೆ ಕನ್ನಡ ನಾಡಿನ ಜನರ ಪರವಾಗಿ ಹೃದಯದಾಳದಿಂದ ಗೌರವ ಸಲ್ಲಿಸುತ್ತೇನೆ. ಆದರೆ ಈ ದುರಂತದಲ್ಲಿ ವರುಣ್ ಸಿಂಗ್ ಅವರು ಬದುಕುಳಿದಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಹೋಗಿದ್ದೆ. ಪರಿಣಿತ ವೈದ್ಯರಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿಯಿಂದ ಅವರ ದೇಹಕ್ಕೆ ಗಾಯಗಳಾಗಿದ್ದು ಅವರು ಬೇಗನೆ ಗಣುಮುಖರಾಗಿ ಬರಲೆಂದು ಪ್ರಾರ್ಥನೆಯನ್ನು ಮಾಡುತ್ತೇನೆ ಎಂದರು.
ಇದನ್ನೂ ಓದಿ:ಜನರಲ್ ಬಿಪಿನ್ ರಾವತ್ ವೀರಮರಣ: ಮುಂದಿನ ಸಿಡಿಎಸ್ ಆಯ್ಕೆ ಹೇಗೆ?
ಈ ದುರಂತವನ್ನು ಕೆಲವು ವಿಕೃತ ಮನಸ್ಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಹಾಗೂ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದನ್ನು ಭಾರತೀಯರು ತೀವ್ರವಾಗಿ ಖಂಡನೆ ಮಾಡಬೇಕು. ನಾನು ಇದನ್ನು ತೀವ್ರ ಖಂಡನೆ ಮಾಡ್ತೇನಿ. ಬೇಜವಾಬ್ದಾರಿಯಿಂದ ಈ ಕಾರ್ಯ ಮಾಡಿದ್ದಾರೆ. ಇವತ್ತು ಅಂಥವರ ಮೇಲೆ ಪೊಲೀಸರು ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಯಾರು ಕ್ಷಮಿಸಬಾರದು ಎಂದರು.
ಮಹದಾಯಿ ಪ್ರಕರಣದ ಓಪನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಸ್ ಮರುತೆರೆಯಲಾಗುತ್ತಿಲ್ಲ. ಕೋರ್ಟ್ ಸಮನ್ಸ್ ಮಾಡಿದೆ ಅಷ್ಟೇ. ಆ ಪ್ರಕ್ರಿಯೆ ನಡಿಯುತ್ತಿದೆ ಎಂದರು.
ಬೆಳಗಾವಿಯ ಚಳಿಗಾಲ ಅಧಿವೇಶನ ಕುರಿತು ಪ್ರತಿಕ್ರಿಯಿಸಿ, ನಾವು ಈ ಭಾಗದ ಸಮಗ್ರ ಅಭಿವೃದ್ಧಿ ಮಾಡಬೇಕಾಗಿದೆ. ಜನರ ಸಮಸ್ಯೆಗಳಿಗೆ ಉತ್ತರ ಇರುತ್ತದೆ. ವಿರೋಧ ಪಕ್ಷದ ಅವರಿಗೂ ಉತ್ತರ ಕೊಡಲು ಸಜ್ಜಾಗಿದ್ದೇವೆ ಎಂದರು.
ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮೂರು ನಾಲ್ಕು ದಿನಗಳಿಂದ ಸಭೆ ಮಾಡಿದ್ದೇವೆ. ಲಸಿಕೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಮಕ್ಕಳಿಗೆ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿದ ಅವರು, ಕೇಂದ್ರದ ಪರಿಣತರು ಇದ್ದಾರೆ. ಈ ಕುರಿತು ಐಸಿಎಂಆರ್ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.