ಅಧಿಕಾರಿಗಳ ಭರವಸೆ: ಧರಣಿ ಕೈಬಿಟ್ಟ ನಗರಸಭಾ ಸದಸ್ಯರು
Team Udayavani, Oct 2, 2020, 5:58 PM IST
ರಾಣಿಬೆನ್ನೂರ: ಕಳಪೆಯಾಗಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ದುರಸ್ತಿ ಮಾಡಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳುಭರವಸೆ ನೀಡಿದ ಹಿನ್ನೆಲೆಯಲ್ಲಿ, ನಗರಸಭೆ ಕಚೇರಿ ಮುಂದೆ ನಗರಸಭಾ ಸದಸ್ಯರು ನಡೆಸುತ್ತಿದ್ದ ನಿರಂತರ ಧರಣಿಯನ್ನು ಕೈಬಿಟ್ಟಿದ್ದಾರೆ.
ಧರಣಿ ಸ್ಥಳಕ್ಕೆ ಆಗಮಿಸಿದ ನಗರಸಭಾ ಪೌರಾಯುಕ್ತ ಡಾ| ಮಾಲತೇಶ ಎನ್. ಹಾಗೂ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆ ಅಧಿ ಕಾರಿ ಉಮೇಶ ಮುತ್ತಪ್ಪ ಅವರು, ಸದಸ್ಯರ ಮನವೊಲಿಸಿ ಕಳೆಪೆಗಿರುವ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ದುರಸ್ತಿಪಡಿಸಲಾಗುವುದು. ಅಲ್ಲಿಯ ವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಈ ವೇಳೆ ನಗರಸಭಾ ಸದಸ್ಯ ಲಿಂಗರಾಜ ಕೋಡಿಹಳ್ಳಿ ಮಾತನಾಡಿ, ಎಲ್ಲ ಕಳಪೆ ಕಾಮಗಾರಿಗಳನ್ನು ಪುನಃ ಗುಣಮಟ್ಟದಲ್ಲಿ ಮಾಡಬೇಕು. ಯಾರಾದರೂ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾರು ಹೋಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಉದ್ಘಾಟಿಸಲು ಮುಂದಾದಲ್ಲಿ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ನಾಗರಾಜ ಪವಾರ, ಜಯಶ್ರೀ ಪಿಸೆ, ಸುಮಾ ಹುಚ್ಚಗೊಂಡರ, ನೂರುಲ್ಲಾ ಖಾಜಿ, ಚಂಪಾ ಬಿಸಲಳ್ಳಿ, ಅಬ್ದುಲ್ ಗಫ್‌ರ್ ಖಾನ ಪಠಾಣ, ಮಹಬೂಬ್ ಮುಲ್ಲಾ, ಹುಚ್ಚಪ್ಪಮೆಡ್ಲೆರಿ, ಶಶಿಧರ ಬಸೇನಾಯ್ಕ, ಮುಖಂಡರಾದರಮೇಶ ಬಿಸಲಳ್ಳಿ, ಬಸಣ್ಣ ಹುಚ್ಚಗೊಂಡರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.