ಶಿಕ್ಷಕರಿಗೆ ಆನ್‌ಲೈನ್ ತರಬೇತಿ
Team Udayavani, Jun 8, 2020, 3:05 PM IST
ಹಾವೇರಿ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲೆಗಳ ರಜಾ ಅವಧಿಯಲ್ಲಿ ತಾಲೂಕಿನ ಶಿಕ್ಷಕರಿಗೆ ಶಿಕ್ಷಕರು ಮನೆಯಲ್ಲಿ ಇರಿ ಆನ್‌ಲೈನ್ ತರಬೇತಿ ಪಡೆಯಿರಿ ಎಂಬ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಯಟ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಕ್ಷಕರಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ವ್ಯಕ್ತಿತ್ವ ವಿಕಸನ ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಿಕೆ ಕುರಿತಾದ ತರಬೇತಿ ಹಾಗೂ ಸಹ ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗಾಗಿ ತರಬೇತಿ ನೀಡಲಾಗುತ್ತಿದೆ. ಆರಂಭಿಕ ಹಂತವಾಗಿ ಜೂ. 10ವರೆಗೆ ತಾಲೂಕಿನ ಸಂಗೂರ, ಹಾವೇರಿ, ಹೊಸರಿತ್ತಿ ಹಾಗೂ ಗುತ್ತಲ ವಲಯಗಳಾಗಿ ವಿಂಗಡಿಸಿ ನಲಿ-ಕಲಿ ಮತ್ತು ಭಾಷಾ ವಿಷಯಗಳು, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಎಲ್ಲ ಶಿಕ್ಷಕರಿಗೆ ಆನ್‌ಲೈನ್ ತರಬೇತಿ ನೀಡಲಾಗುವುದು. ಈ ಉದ್ದೇಶಕ್ಕಾಗಿ ವಾಟ್ಸ್‌ಆ್ಯಪ್ ಗುಂಪುಗಳನ್ನು ರಚಿಸಲಾಗಿದೆ.
ತರಬೇತಿ ಆಯೋಜಿಸುವ ಮುನ್ನವೆ ಬಿಆರ್‌ಸಿಯಿಂದ ವಿಷಯವಾರು ಸಂಪನ್ಮೂಲ ಶಿಕ್ಷಕರಿಗೆ ಬಿಇಒ ಎಂ.ಎಚ್.ಪಾಟೀಲ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್. ಭಗವಂತ ಗೌಡ್ರ ನೇತೃತ್ವದಲ್ಲಿ ಝೂಮ್, ವೆಬೆಕ್ಸ್, ಗೂಗಲ್‌ಮೀಟ್, ಹ್ಯಾಂಗ್ ಔಟ್ ಆ್ಯಪ್‌ಗ್ಳನ್ನು ಬಳಸಿಕೊಂಡು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ತಾಲೂಕಿನಾದ್ಯಂತ ಒಟ್ಟು 902 ಸರ್ಕಾರಿ ಶಿಕ್ಷಕರಿದ್ದು ಸಿಬ್ಬಂದಿ ಮೇಲುಸ್ತುವಾರಿಯಲ್ಲಿ ಪ್ರತಿದಿನ ಆನ್‌ಲೈನ್ ತರಬೇತಿ ನಡೆಸಲಾಗುತ್ತಿದೆ. ತರಬೇತಿಯಲ್ಲಿ ಪಾಲ್ಗೊಂಡ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಡಿಡಿಪಿಐ ಅಂದಾನೆಪ್ಪ ವಡಗೇರಿ, ಡಯಟ್ ಪ್ರಾಚಾರ್ಯ ಬಸವಲಿಂಗಪ್ಪ ಜಿ.ಎಂ. ಹಾವೇರಿ ತಾಲೂಕಿನ ಶಿಕ್ಷಣ ಇಲಾಖೆ ಶೈಕ್ಷಣಿಕ ಚಟುವಟಿಕೆಗಳ ನೋಡಲ್ ಅಧಿಕಾರಿಗಳು ಮತ್ತು ಡಯಟ್ ಉಪನ್ಯಾಸಕರಾದ ಹುಚ್ಚಣ್ಣವರ ಮತ್ತು ಕಮಲಾ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.