ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ
ಕಾಂಗ್ರೆಸ್ ಕಾರ್ಯಕರ್ತರ ಸೈಕಲ್ ಜಾಥಾ! ಬೆಲೆ ಇಳಿಸದಿದ್ದರೆ ಉಗ್ರ ಪ್ರತಿಭಟನೆ ಎಚ್ಚರಿಕೆ
Team Udayavani, Jul 8, 2021, 9:32 PM IST
ರಾಣಿಬೆನ್ನೂರ: ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೈನಂದಿನ ಅಗತ್ಯ ವಸ್ತುಗಳು ಸೇರಿ ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲ ಸೇರಿದಂತೆ ಇತರ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಿಸಿರುವುದನ್ನು ಖಂಡಿಸಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಸೈಕಲ್ ಜಾಥಾ ಮೂಲಕ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯು ಇಲ್ಲಿನ ಕೆಇಬಿ ಗಣೇಶ ದೇವಸ್ಥಾನದಿಂದು ಹೊರಟು ಬಸ್ ನಿಲ್ದಾಣ, ಅಂಚೆ ವೃತ್ತ, ಎಂಜಿ ರಸ್ತೆ, ಪಿಬಿ ರಸ್ತೆ ಮೂಲಕ ಸಂಚರಿಸಿ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ತುರ್ತಾಗಿ ಬೆಲೆ ಇಳಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ, ಕೆಪಿಸಿಸಿ ಜಿಲ್ಲಾ ವೀಕ್ಷಕ ವೆಂಕಟೇಶ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಮಂಜನಗೌಡ ಪಾಟೀಲ, ಶೇಖಪ್ಪ ಹೊಸಗೌಡ್ರ, ಡಾ| ಆರ್.ಎಂ. ಕುಬೇರಪ್ಪ, ವೀರನಗೌಡ ಪೊಲೀಸಗೌಡ್ರ, ಕೃಷ್ಣಪ್ಪ ಕಂಬಳಿ, ಬಸಣ್ಣ ಮರದ, ರವೀಂದ್ರಗೌಡ ಪಾಟೀಲ, ನಿಂಗರಾಜ ಕೋಡಿಹಳ್ಳಿ, ಗಂಗಾಧರ ಬಣಕಾರ, ಬಸವರಾಜ ಸವಣೂರ, ಚಂದ್ರಮ್ಮ ಬಿಷಣ್ಣನವರ, ಸಿರಿನ್‌ತಾಜ್ ಶೇಖ್, ಶೇರು ಕಾಬೂಲಿ, ಸುರೇಶ ಜಾಡಮಾಲಿ, ಬಸವರಾಜ ಹುಚ್ಚಗೊಂಡರ, ಪುಟ್ಟಪ್ಪ ಮರಿಯಮ್ಮನವರ, ಈಕ್ಬಾಲಸಾಬ ರಾಣೆಬೆನ್ನೂರ, ಡಿಳ್ಳೆಪ್ಪ ಅಣ್ಣೆರ, ಮಲ್ಲೇಶ ಮದೆÉàರ, ಯಲ್ಲಪ್ಪ ರಡ್ಡೇರ, ರಮೇಶ ಬಿಸಲಳ್ಳಿ ಸೇರಿದಂತೆ ಮತ್ತಿತರರು ಜಾಥಾದಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.