ವಿಶೇಷ ಚೇತನ ಮಕ್ಕಳಿಗೆ ಪಾಲಕರೇ ಸ್ಫೂರ್ತಿ

ಪೋಷಕರ ಕಾಳಜಿಯಿಂದ ವಿಶೇಷ ಚೇತನ ವಿದ್ಯಾರ್ಥಿನಿ ಗೌತಮಿ ಪ್ರತಿಭೆ ಅನಾವರಣ

Team Udayavani, Aug 4, 2020, 1:09 PM IST

ವಿಶೇಷ ಚೇತನ ಮಕ್ಕಳಿಗೆ ಪಾಲಕರೇ ಸ್ಫೂರ್ತಿ

ಹಿರೇಕೆರೂರು: ಪಾಲಕರ ವಿಶೇಷ ಕಾಳಜಿಯಿಂದ ವಿಶೇಷ ಚೇತನ ಮಕ್ಕಳು ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂಬುದಕ್ಕೆ ಹಿರೇಕೆರೂರಿನ ಮೇದಾರ ಓಣಿಯ ವಿದ್ಯಾರ್ಥಿನಿ ಗೌತಮಿ ಮಲ್ಲೇಶ ಮೇದಾರ ಸಾಕ್ಷಿಯಾಗಿದ್ದಾಳೆ.

ಇಲ್ಲಿನ ಮೇದಾರ ಓಣಿಯ ನಿವಾಸಿಗಳಾದ ಮಲ್ಲೇಶ ಜ್ಯೋತಿ ದಂಪತಿಯ ಪುತ್ರಿ 10 ವರ್ಷದ ಗೌತಮಿ ಬಹುವಿಧ ನ್ಯೂನತೆಯಿಂದ ಬಳಲುತ್ತಿದ್ದು, ತನಗೆ ಇಷ್ಟವಾಗುವ ಬಟ್ಟೆ, ಊಟ, ಉಪಾಹಾರವನ್ನು ಸಂಜ್ಞೆಯ ಮೂಲಕ ಆಯ್ಕೆ ಮಾಡುತ್ತಾಳೆ. ತನಗೆ ಬೇಕಾದದ್ದನ್ನು ಹಟ ಹಿಡಿದು ಪಡೆದುಕೊಳ್ಳುವ ಮನೋಭಾವ ಅವಳದ್ದಾಗಿದೆ.

ಈ ಮಗುವಿಗೆ ಶಾಲಾ ಪೂರ್ವ ಸಿದ್ಧತಾ ಕೇಂದ್ರದಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗಿತ್ತು. ಮನೆಯಲ್ಲಿ ಮಗುವಿನ ತಾಯಿ ಜ್ಯೋತಿ ಮೇದಾರ ಅವರ ವಿಶೇಷ ಕಾಳಜಿಯಿಂದಾಗಿ ವಿಶೇಷಚೇತನ ಮಗು ಉತ್ತಮವಾಗಿ ಸಂವೇದನಾ ವಿಕಾಸವಾಗುತ್ತಿದೆ. ಈ ಮಗುವಿಗೆ ಸಂಪೂರ್ಣ ಮಾತನಾಡಲು ಬಾರದಿದ್ದರೂ ಮಾತನಾಡುವ ಭಾಷೆಯನ್ನು ಅರ್ಥ ಮಾಡಿಕೊಂಡು ದಿಕ್ಕುಗಳನ್ನು ಸೂಚಿಸುತ್ತಾಳೆ. ವಾರಗಳನ್ನು ಹೇಳುತ್ತಾಳೆ ಹಾಗೂ ಎಲ್ಲರ ಮಾತಿಗೂ ಸ್ಪಂದಿಸುತ್ತಾಳೆ.

ಈ ಮಗುವಿಗೆ ಸೌಂದರ್ಯೋಪಾಸನೆಯ ಗುಣವೂ ಉತ್ತಮವಾಗಿದ್ದು, ಸೀರೆಯನ್ನು ತೊಟ್ಟು ಮೊಬೈಲ್‌ನಲ್ಲಿ ಫೋಟೋ ತೆಗೆಸಿಕೊಳ್ಳುವುದು ಹಾಗೂ ವಿಡಿಯೋ ಮಾಡಿಸಿಕೊಳ್ಳುವುದು ಇವಳಿಗೆ ಬಹಳ ಇಷ್ಟ. ಮೊಬೈಲ್‌ನಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ಪ್ರೇರೇಪಿತಳಾಗಿ ಇದೇ ತೆರನಾಗಿ ನಾನು ಕಾಣಬೇಕೆಂದು ಹಠ ಮಾಡುತ್ತಿದ್ದ ಗೌತಮಿಗೆ ಅವರ ತಾಯಿ ಜ್ಯೋತಿಯವರು ಈ ಹಿಂದಿದ್ದ ಟಿಕ್‌ಟಾಕ್‌ ಯಾಪ್‌ ಮೂಲಕ ಹಲವು ಅಭಿನಯಗಳನ್ನು ಮಾಡಿದ್ದಾಳೆ. ಗೌತಮಿ ಮಾಡಿದ ಅಭಿನಯಕ್ಕೆ ಸಾವಿರಾರು ಮೆಚ್ಚುಗೆಗಳನ್ನು ಪಡೆದಿದ್ದಾಳೆ.

ಮಗುವಿನಲ್ಲಿರುವ ವಿಶೇಷ ಪ್ರತಿಭೆಯನ್ನು ಪೋಷಕರು ಗುರುತಿಸಿ ಅರಳಿಸುವ ಕೆಲಸ ಮಾಡಿದರೆ ಇಂತಹ ಮಕ್ಕಳು ಬೇಗನೆ ಸ್ಪಂದಿಸುತ್ತಾರೆ ಎಂಬುದಕ್ಕೆ ಗೌತಮಿ ಸಾಕ್ಷಿಯಾಗಿದ್ದಾಳೆ. ಮಗಳಿಗೆ ಮೂರ್ಛೇ ರೋಗವಿರುವುದರಿಂದ ಆಕೆಗೆ ಬೆಂಗಳೂರಿನ ಇಂದಿರಾಗಾಂಧಿ  ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಪ್ರಸ್ತುತ ಕೋವಿಡ್ ದಿಂದಾಗಿ ಬೆಂಗಳೂರಿನಿಂದ ಔಷಧಿ ಪಡೆಯುವುದು ಕಷ್ಟವಾಗಿದೆ ಎನ್ನುತ್ತಾರೆ ಮಗವಿನ ತಾಯಿ ಜ್ಯೋತಿ ಮೇದಾರ. ತಾಲೂಕಿನಲ್ಲಿನ ಇಂತಹ ವಿಶೇಷ ಚೇತನ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ವಿಶೇಷ ಶಿಕ್ಷಕರು ಮನೆಗೆ ಭೇಟಿ ನೀಡಿ ಮನೋಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದಾರೆ. ಜತೆಗೆ ಪೋಷಕರಿಗೆ ವಿಶೇಷ ಚೇತನ ಮಕ್ಕಳನ್ನು ಪೋಷಿಸುವ ವಿಧಾನಗಳನ್ನು ತಿಳಿಸುತ್ತಿದ್ದಾರೆ.

ವಿಶೇಷ ಚೇತನ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಉತ್ತಮವಾಗಿ ವಿಶೇಷ ಕಾಳಜಿಯಿಂದ ಬೆಳೆಸಲು ಮುಂದಾಗಬೇಕು. ಅಗತ್ಯ ಸಲಹೆ-ಮಾರ್ಗದರ್ಶನಕ್ಕಾಗಿ ಶಿಕ್ಷಣ ಇಲಾಖೆ ಸದಾ ನಿಮ್ಮೊಂದಿಗಿದೆ. ವಿದ್ಯಾರ್ಥಿನಿ ಗೌತಮಿಯನ್ನು ವಿಶೇಷ ಕಾಳಜಿಯಿಂದ ಬೆಳೆಸಿರುವುದಕ್ಕೆ ತಾಯಿಗೆ ಅಭಿನಂದನೆಗಳು. -ಜಗದೀಶ ಬಳೇಗಾರ, ಕ್ಷೇತ್ರ ಸಮನ್ವಯಾಧಿಕಾರಿ

 

­ಸಿದ್ಧಲಿಂಗಯ್ಯ ಗೌಡರ್‌

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

CM-Siddu–Hubballi

By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

complaint

Kundapura: ಹಲ್ಲೆ, ಗಾಯ; ದೂರು ದಾಖಲು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.