ಶಾಂತಳಾದ ತುಂಗಭದ್ರೆ-ತಗ್ಗದ ವರದೆಯ ಅಬ್ಬರ

ಜಮೀನು ಜಲಾವೃತ-ಬೆಳೆ ಸಂಪೂರ್ಣ ಹಾನಿ ತುಂಗಭದ್ರಾ ನದಿಯಲ್ಲಿ ಸಿಲುಕಿದ ಸರಕು ಸಾಗಣೆ ವಾಹನ

Team Udayavani, Jul 18, 2022, 5:35 PM IST

23

ಗುತ್ತಲ: ಮಳೆಯ ಅಬ್ಬರ ನಿಂತಿದ್ದು, ತುಂಗಭದ್ರಾ ನದಿ ಇಳಿಕೆಯತ್ತ ಸಾಗಿದೆ. ಆದರೆ, ವರದೆಯ ಅಬ್ಬರಕ್ಕೆ ಶನಿವಾರ ರಾತ್ರಿಯಿಂದ ರವಿವಾರ ಸಂಜೆಯವರೆಗೂ ಅನೇಕ ಜಮೀನುಗಳು ಜಲಾವೃತವಾದ ಪರಿಣಾಮ ಬೆಳೆ ಸಂಪೂರ್ಣ ಹಾನಿಯಾಗಿದೆ.

ಶನಿವಾರ ರಾತ್ರಿಯಿಂದಲೇ ತುಂಗಭದ್ರಾ ನದಿ ನೀರಿನ ಮಟ್ಟ ನಿಧನಾನವಾಗಿ ಇಳಿಯುತ್ತಿದ್ದು, ಶನಿವಾರ 8 ಮೀಟರ್‌ ಇದ್ದ ನೀರಿನ ಮಟ್ಟ ರವಿವಾರ ಸಂಜೆ 7.39 ಮೀ.ಗೆ ತಲುಪಿದೆ. ಚೌಡಯ್ಯದಾನಪುರ- ಕಂಚಾರಗಟ್ಟಿ ರಸ್ತೆ ಸಂಚಾರ ಬಂದ್‌ ಆಗಿದ್ದರೂ ಸರಕು ಸಾಗಿಸುವ ಬೊಲೇರೋ ವಾಹನವೊಂದು ಅಪಾರ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರನ್ನು ಲೆಕ್ಕಿಸದೇ ರಸ್ತೆ ದಾಟಲು ಹೋಗಿ ನೀರಿನ ಮಧ್ಯೆ ಸಿಲುಕಿ ಚಾಲಕ ತೀವ್ರವಾಗಿ ಪರದಾಡಿದ ಘಟನೆ ರವಿವಾರ ಜರುಗಿದೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ತುಂಗಭದ್ರಾ ನದಿಯ ಅಬ್ಬರ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಜಲಾವೃತಗೊಂಡಿದ್ದ ಕಂಚಾರಗಟ್ಟಿ, ನರಶೀಪುರ, ಹರಳಹಳ್ಳಿ, ಹಾವನೂರ, ಹುರಳಿಹಾಳ, ಗಳಗನಾಥ, ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದಲ್ಲಿನ ನೀರು ಕಡಿಮೆಯಾಗುತ್ತಿದ್ದು ಬೆಳೆಗಳಿಗೆ ರೋಗ ಭೀತಿ ಎದುರಾಗಿದ್ದು, ಭೂಮಿ ಒಣಗುವವರೆಗೂ ಜಮೀನಿಗೆ ಕಾಲಿಡದ ಸ್ಥಿತಿ ಇದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ.

ಇನ್ನೂ, ವರದಾ ನದಿಯ ಅಬ್ಬರ ರವಿವಾರವೂ ಮುಂದೆವರೆದಿತ್ತು. ಗಳಗನಾಥ ಗ್ರಾಮದ ಬಳಿ ತುಂಗಭದ್ರಾ ನದಿಯೊಂದಿಗೆ ಸಂಗಮವಾದ ಸ್ಥಳದ ಹಿಂಭಾಗದಲ್ಲಿ ಬರುವ ಗಳಗನಾಥ, ಬೆಳವಿಗಿ, ನೀರಲಗಿ, ಮರೋಳ, ಹಾಲಗಿ, ಮರಡೂರ, ಅಕ್ಕೂರ, ಹೊಸರಿತ್ತಿ, ಕಿತ್ತೂರ, ಟಾಟಾ ಮಣ್ಣೂರ ಕೆಸರಳ್ಳಿ, ಕೋಣನತಂಬಿಗಿ, ಹಂದಿಗನೂರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಪ್ರದೇಶ ವರದಾ ನದಿಯ ಪಾಲಾಗಿವೆ.

ಉಭಯ ನದಿಗಳ ಪ್ರವಾಹಕ್ಕೆ ಈಗಾಗಲೇ ಮೆಕ್ಕೆಜೋಳ, ಹತ್ತಿ, ಮೆಣಸಿಕಾಯಿ, ಟೊಮೆಟೋ, ಮುಳುಗಾಯಿ, ಸೌವತಿ, ರೇಷ್ಮೆ, ಶೇಂಗಾ, ಅಡಿಕೆ, ಪೇರಲ, ಚಿಕ್ಕು, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಜಲಾವೃತವಾಗಿ ಹಾನಿಗೆ ಒಳಗಾಗಿದೆ. ಬಹುತೇಕ ಬೆಳೆಗಳು ರೈತರ ಕೈಗೆ ಬಾರದ ಸ್ಥಿತಿ ಇದ್ದು, ತೋಟಗಾರಿಕೆಯ ಬೆಳೆಗಳಾದ ಟೊಮೆಟೋ, ಮುಳಗಾಯಿ, ಬೆಂಡಿ, ಮೆಣಸಿನಕಾಯಿ, ಬೆಂಡೆ, ಸೌತೆ, ಹಗಲಕಾಯಿ ಸೇರಿದಂತೆ ತರಕಾರಿ ಸೊಪ್ಪುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿ, ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ರವಿವಾರದವರೆಗೆ ಸುಮಾರು 7ರಿಂದ 8ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.

ಟಾಪ್ ನ್ಯೂಸ್

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

hockey; India playing against Germany

Hockey: ಜರ್ಮನಿ ವಿರುದ್ಧ “ಪ್ಯಾರಿಸ್‌ ಪ್ರತಿಕಾರ’ಕ್ಕೆ ಸಿದ್ಧತೆ

13 thousand recruitment in top 5 IT firms in first half of this year

IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ

Prime Minister Modi preached peace mantra to Putin again!

Narendra Modi: ಪುತಿನ್‌ಗೆ ಮತ್ತೆ ಶಾಂತಿ ಮಂತ್ರ ಬೋಧಿಸಿದ ಪ್ರಧಾನಿ ಮೋದಿ!

Madhya Pradesh: Three tourists were bitten by a leopard

Madhya Pradesh: ಚಿರತೆ ಕೆಣಕಿ, ಕಚ್ಚಿಸಿಕೊಂಡ ಮೂವರು ಪ್ರವಾಸಿಗರು

BY Election: ಜೆಡಿಎಸ್‌ ಸಭೆಯಲ್ಲೂ ಗುಟ್ಟಾಗಿಯೇ ಉಳಿದ ಎನ್‌ಡಿಎ ಅಭ್ಯರ್ಥಿ!

BY Election: ಜೆಡಿಎಸ್‌ ಸಭೆಯಲ್ಲೂ ಗುಟ್ಟಾಗಿಯೇ ಉಳಿದ ಎನ್‌ಡಿಎ ಅಭ್ಯರ್ಥಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಹೃದಯಾಘಾತದಿಂದ ಮಗ ಮೃತಪಟ್ಟ ವಿಚಾರ ಕೇಳಿ ತಂದೆಯೂ ಹೃದಯಾಘಾತದಿಂದ ಮೃತ್ಯು

Tragedy: ಮಗ ಮೃತಪಟ್ಟ ವಿಚಾರ ಕೇಳಿ ತಂದೆಗೂ ಹೃದಯಾಘಾತ… ಮುಗಿಲು ಮುಟ್ಟಿದ ಆಕ್ರಂದನ

By election; ಶೀಘ್ರ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ:‌ ಎಚ್‌ ಕೆ ಪಾಟೀಲ್

By election; ಶೀಘ್ರ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ:‌ ಎಚ್‌ ಕೆ ಪಾಟೀಲ್

Karnataka By Poll 2024: ಟಿಕೆಟ್‌ ಘೋಷಣೆ ಮೊದಲೇ ರಂಗೇರಿದ ಶಿಗ್ಗಾವಿ ಕಣ

Karnataka By Poll 2024: ಟಿಕೆಟ್‌ ಘೋಷಣೆ ಮೊದಲೇ ರಂಗೇರಿದ ಶಿಗ್ಗಾವಿ ಕಣ

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

ಹಾನಗಲ್ಲ: ಮನುಕುಲಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ

ಹಾನಗಲ್ಲ: ಮನುಕುಲಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

hockey; India playing against Germany

Hockey: ಜರ್ಮನಿ ವಿರುದ್ಧ “ಪ್ಯಾರಿಸ್‌ ಪ್ರತಿಕಾರ’ಕ್ಕೆ ಸಿದ್ಧತೆ

13 thousand recruitment in top 5 IT firms in first half of this year

IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ

Prime Minister Modi preached peace mantra to Putin again!

Narendra Modi: ಪುತಿನ್‌ಗೆ ಮತ್ತೆ ಶಾಂತಿ ಮಂತ್ರ ಬೋಧಿಸಿದ ಪ್ರಧಾನಿ ಮೋದಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.