ಮಳೆಗಾಲದ ಭೀತಿಯಲ್ಲಿ ನೆರೆ ಸಂತ್ರಸ್ಥರು


Team Udayavani, Apr 23, 2020, 5:37 PM IST

ಮಳೆಗಾಲದ ಭೀತಿಯಲ್ಲಿ  ನೆರೆ ಸಂತ್ರಸ್ಥರು

ಹಾವೇರಿ: ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಬಹುತೇಕ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಳೆದ ಆಗಸ್ಟ್‌ ಹಾಗೂ ಅಕ್ಟೋಬರ್‌ನಲ್ಲಿ ಉಲ್ಬಣಿಸಿದ ನೆರೆ ಮತ್ತು ಅತಿವೃಷ್ಟಿ ಸಂತ್ರಸ್ತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನೆರೆ ಹಾಗೂ ಅತಿವೃಷ್ಟಿ ಪರಿಹಾರ ಕೆಲಸಗಳಿಗೆ ಮೊದಲು ಸಮೀಕ್ಷೆ ಸರಿಯಾಗಿಲ್ಲ ಹಾಗೂ ಪರಿಹಾರ ಸರಿಯಾಗಿ ಮುಟ್ಟಿಲ್ಲ ಎಂಬ ಆರೋಪ ಎದುರಾಯಿತು. ಪರಿಣಾಮ ಎರಡ್ಮೂರು ಬಾರಿ ಸಮೀಕ್ಷೆ ನಡೆಸಬೇಕಾಯಿತು. ಬಳಿಕ ಉಪಚುನಾವಣಾ ನೀತಿ ಸಂಹಿತೆ ಅಡ್ಡಿಯಾಯಿತು. ಇದನ್ನೆಲ್ಲ ಸರಿಪಡಿಸಿಕೊಂಡು ಇನ್ನೇನು ಕಾಮಗಾರಿಗೆ ಚುರುಕು ನೀಡಬೇಕು ಎನ್ನುವಷ್ಟರಲ್ಲಿ ಲಾಕ್‌ ಡೌನ್‌ ಎದುರಾಗಿದೆ.

ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡವರು ಈವರೆಗೂ ಮನೆ ನಿರ್ಮಾಣವಾಗದೆ ಸಂಕಷ್ಟಪಡುತ್ತಿದ್ದರೆ, ಸ್ಥಳಾಂತರ ಅಗತ್ಯವಿರುವ ನದಿ ಪಾತ್ರದ ಹಳ್ಳಿಗರು ಮತ್ತೆ ಮಳೆಗಾಲದ ಆತಂಕದಲ್ಲಿದ್ದಾರೆ. ಹಾಳಾದ ಸೇತುವೆ, ರಸ್ತೆಗಳು ಈವರೆಗೂ ದುರಸ್ತಿಯಾಗದೆ ಮಳೆಗಾಲದಲ್ಲಿ ಸಂಚಾರ, ಸಂಪರ್ಕಕ್ಕೂ ಅಡ್ಡಿಯಾಗುವ ಭಯ ಎದುರಾಗಿದೆ.

ಸೂರಿಲ್ಲದವರ ಗೋಳು: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 21,915 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 359 ಮನೆಗಳು ಸಂಪೂರ್ಣ, 4528 ಮನೆಗಳು ತೀವ್ರ, 17028 ಮನೆಗಳು ಅಲ್ಪಸ್ವಲ್ಪ ಹಾನಿಯಾಗಿವೆ. ಸಂಪೂರ್ಣ ಹಾಗೂ ತೀವ್ರ ಹಾನಿಗೊಗಾದವರಿಗೆ ಮಳೆಗಾಲದ ಚಿಂತೆ ಶುರುವಾಗಿದೆ. ಇವರಿಗೆ ತುರ್ತು ಪರಿಹಾರವಾಗಿ 10 ಸಾವಿರ, ಮನೆ ಹಾನಿ ಪರಿಹಾರವಾಗಿ ಒಂದು ಲಕ್ಷ ರೂ. ಮೊದಲ ಕಂತು ಬಿಡುಗಡೆಯಾಗಿದ್ದು ಬಿಟ್ಟರೆ ಬೇರೇನೂ ಪರಿಹಾರ ಬಂದಿಲ್ಲ. ಹಲವೆಡೆ ಮನೆ ನಿರ್ಮಾಣಕ್ಕೆ ಅಡಿಪಾಯವೂ ಬಿದ್ದಿಲ್ಲ. ಸಾವಿರಾರು ಕುಟುಂಬಗಳಿಗೆ ಮಳೆಯಲ್ಲಿಯೇ ಕಳೆಯಬೇಕಾದ ಆತಂಕ ಎದುರಾಗಿದೆ. ಸ್ವತಃ ತಾವೇ ತಾತ್ಪೂರ್ತಿಕವಾಗಿ ಸೂರು ಕಟ್ಟಿಕೊಳ್ಳೋಣ ಎಂದರೆ ಕಚ್ಚಾ ಸಾಮಗ್ರಿಗಳೂ ಸಿಗುತ್ತಿಲ್ಲ.

ಮತ್ತೆ ನೆರೆ ಭೀತಿ: ನೆರೆ ಭೀತಿಯಲ್ಲಿರುವ 19 ಗ್ರಾಮಗಳ ಸ್ಥಳಾಂತರ ಆಗಬೇಕಿತ್ತು. ಜತೆಗೆ 19 ಗ್ರಾಮಗಳಲ್ಲಿ ತಡೆಗೋಡೆ ನಿರ್ಮಾಣವೂ ಆಗಬೇಕಿತ್ತು. ಈ ಬೇಸಿಗೆಯಲ್ಲಿ ಕಾಮಗಾರಿ ಶೀಘ್ರ ಮಾಡಿ ನದಿ ಪಾತ್ರದ ಜನರ ಮಳೆಗಾಲದ ನೆಮ್ಮದಿಯ ಜೀವನಕ್ಕೆ ಅನುಕೂಲ ಕಲ್ಪಿಸಬೇಕಿತ್ತು. ಆದರೆ, ಲಾಕ್‌ ಡೌನ್‌ ಪರಿಣಾಮ ಇದ್ಯಾವುದೂ ಸಾಧ್ಯವಾಗದೆ ಜನ ಮಳೆಗಾಲದ ಆತಂಕದಲ್ಲಿಯೇ ದಿನ ಕಳೆಯಬೇಕಾಗಿದೆ.

ಮೂಲಸೌಕರ್ಯ ಮರೀಚಿಕೆ: ನೆರೆಯಿಂದ ಜಿಪಂ ವ್ಯಾಪ್ತಿಯ ಅಂದಾಜು 1,200 ಕಿಮೀಗೂ ಅಧಿಕ ಗ್ರಾಮೀಣ ರಸ್ತೆಗಳು ಹಾಳಾಗಿದ್ದು 30 ಕೋಟಿಗೂ ಹೆಚ್ಚು ಹಾನಿಯಾಗಿದೆ. ಆಗಸ್ಟ್‌ ತಿಂಗಳಿನಲ್ಲಿ ಸುರಿದ ಮಳೆ ಆರ್ಭಟ ಹಾಗೂ ನೆರೆಗೆ 875.80 ಕಿಮೀ ಗ್ರಾಮೀಣ ರಸ್ತೆ ಹಾಳಾಗಿದ್ದರೆ, ಅಕ್ಟೋಬರ್‌ ತಿಂಗಳಲ್ಲಿ ಸುರಿದ ಮಳೆ, ನೆರೆಗೆ 157.50 ಕಿಮೀ ರಸ್ತೆ ಹಾಳಾಗಿದೆ. ಈ ರಸ್ತೆಗಳ ದುರಸ್ತಿ ಜೂನ್‌ ಒಳಗೆ ಆಗದಿದ್ದರೆ ಮಳೆಗಾಲದಲ್ಲಿ ಸಂಬಂಧಪಟ್ಟ ಗ್ರಾಮಸ್ಥರ ಸಂಚಾರ ದುಸ್ತರವಾಗಲಿದೆ.

ಮನೆ ಕಳೆದುಕೊಂಡವರಿಗೆ ಶೀಘ್ರ ಮನೆ ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಅತಿವೃಷ್ಟಿಯಿಂದ ಹಾನಿಯಾದ ಮೂಲಸೌಕರ್ಯ ಅಭಿವೃದ್ಧಿಗೆ 35 ಕೋಟಿ ರೂ. ಬಿಡುಗಡೆಯಾಗಿದ್ದು, ಲಾಕ್‌ಡೌನ್‌ ಮುಗಿಯುತ್ತಿದ್ದಂತೆ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗುವುದು. -ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ

 

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri-Die

Haveri: ಡಾಬಾ ಬಂದಾಗ ದಿಢೀರ್‌ ಎಂದು ಕಣ್ಣು ಬಿಟ್ಟ ವ್ಯಕ್ತಿ ನಿಧನ!

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

12-haveri

Haveri: ಕೃಷ್ಣಮೃಗ ಅಭಯಾರಣ್ಯದಲ್ಲಿ “ಕಲ್ಲು ಗೌಜಲು’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.