ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘಕ್ಕೆ ಆಯ್ಕೆ
Team Udayavani, Nov 20, 2020, 8:12 PM IST
ರಾಣಿಬೆನ್ನೂರ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಆಡಳಿತ ಮಂಡಳಿಯ 5 ವರ್ಷದ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಯಲ್ಲಪ್ಪರಡ್ಡಿ ಹನುಮಂತರಡ್ಡಿ ರಡ್ಡೇರ ಹಾಗೂ ಉಪಾಧ್ಯಕ್ಷರಾಗಿ ಬಡೇಸಾಬ ಫಕ್ಕೀರಸಾಬ ಹುಲ್ಮನಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ವಿಕ್ರಮ ಕುಲಕರ್ಣಿ ಘೋಷಣೆ ಮಾಡಿದರು.
ತಿರುಪತಿ ಶಿವಪ್ಪ ಅಜ್ಜನವರ, ಮಳ್ಳಪ್ಪ ಗೂರಪ್ಪ ನಿಂಗಜ್ಜನವರ, ರಾಮಪ್ಪ ಬಸಪ್ಪ ಹರಿಹರ, ಜಗದೇವರಡ್ಡಿ ಕರಬಸಪ್ಪ ಚವರಡ್ಡಿ, ವೆಂಕಟೇಶ್ ಹನುಮಪ್ಪ ಸಾವುಕಾರ, ರತ್ನವ್ವ ಶಾಂತಯ್ಯ ಅಜ್ಜಿವಡಿಮಠ, ಸರೋಜಾ ಗುಡ್ಡಪ್ಪ ನ್ಯಾಮತಿ, ರಾಜೇಂದ್ರ ನಿಂಗಪ್ಪ ಅಂಬಿಗೇರ, ಬಸಪ್ಪ ಕೊಟ್ರಪ್ಪ ಮಾಳಿಗೇರ, ಬಸಪ್ಪ ಸಂಗಪ್ಪ ಸಿಡಗನಾಳ ಅವರು ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ್ದಾರೆಂದು ಘೋಷಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘದ ವ್ಯವಸ್ಥಾಪಕ ಮಹೇಶ ಕೆಂಚರಡ್ಡಿ ಅಭಿನಂದಿಸಿದರು. ನೂತನ ಅಧ್ಯಕ್ಷ ಎಲ್ಲಪ್ಪರಡ್ಡಿ ರಡ್ಡೇರ ಮಾತನಾಡಿ, ಸರ್ವ ಸದಸ್ಯರು ನಮ್ಮ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನ ಅವಧಿಯಲ್ಲಿ ತಾಲೂಕಿನ ಸರ್ವ ರೈತರಿಗೆ ಸಮರ್ಪಕವಾಗಿ ಬೀಜ, ಗೊಬ್ಬರ ಹಾಗೂ ಕೀಟನಾಶಕಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು. ಸಂಘ ಸುವ್ಯವಸ್ಥಿತವಾಗಿ ನಡೆಯಲು ಸರ್ವ ಸದಸ್ಯರು ಸಹಕಾರ ನೀಡಬೇಕು. ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ರೈತರಿಗೆ ಬೇಕಾಗುವ ಬೀಜ ಗೊಬ್ಬರಗಳನ್ನು ದಾಸ್ತಾನು ಮಾಡಿ ಸಮಯಕ್ಕೆ ಸರಿಯಾಗಿ ವಿತರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ತಿರುಪತಿ ಶಿವಪ್ಪ ಅಜ್ಜನವರ, ಮಳ್ಳಪ್ಪ ಗೂರಪ್ಪ ನಿಂಗಜ್ಜನವರ, ರಾಮಪ್ಪ ಬಸಪ್ಪ ಹರಿಹರ, ಜಗದೇವರಡ್ಡಿ ಕರಬಸಪ್ಪ ಚವರಡ್ಡಿ, ವೆಂಕಟೇಶ್ ಹನುಮಪ್ಪ ಸಾವುಕಾರ, ರತ್ನವ್ವ ಶಾಂತಯ್ಯ ಅಜ್ಜಿವಡಿಮಠ, ಸರೋಜಾ ಗುಡ್ಡಪ್ಪ ನ್ಯಾಮತಿ, ರಾಜೇಂದ್ರ ನಿಂಗಪ್ಪ ಅಂಬಿಗೇರ, ಬಸಪ್ಪ ಕೊಟ್ರಪ್ಪ ಮಾಳಿಗೇರ, ಬಸಪ್ಪ ಸಂಗಪ್ಪ ಸಿಡಗನಾಳ, ವ್ಯವಸ್ಥಾಪಕ ಮಹೇಶ ಕೆಂಚರಡ್ಡಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.