ಅನಾಥ ರಕ್ಷಕ ಲಿಂ.ಹಾನಗಲ್ಲ ಕುಮಾರ ಸ್ವಾಮೀಜಿ
Team Udayavani, Mar 7, 2021, 7:11 PM IST
ಹಾನಗಲ್ಲ: ವೈಚಾರಿಕ ಯುಗದಲ್ಲಿರುವ ನಾವು ಆಧ್ಯಾತ್ಮ ಹಾಗೂ ಸದಾಚಾರಗಳನ್ನು ಮರೆಯದೇ ಸಮಾಜಮುಖೀ ಕಳಕಳಿಯೊಂದಿಗೆ ಸಮೃದ್ಧ ಸೌಖ್ಯ ಕುಟುಂಬಿಗಳಾಗಬೇಕೆಂದು ಹುಬ್ಬಳ್ಳಿಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ನುಡಿದರು.
ಇಲ್ಲಿನ ವಿರಕ್ತ ಮಠದಲ್ಲಿ ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳವರ 91 ನೇ ಪುಣ್ಯಸ್ಮರಣೋತ್ಸವದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾಯಕ, ದಾಸೋಹ ಶರಣರು ಸ್ವಯಂ ಆಚರಿಸಿ, ಹೇಳಿದ ಸತ್ಯ. ಎಲ್ಲರೂಒಂದಾಗಿ ಬದುಕಬೇಕು ಹಾಗೂ ಜೀವನದ ಶ್ರದ್ಧೆಗೆ ಸಾತ್ವಿಕ ಚಿಂತನೆಗಳು ಅಗತ್ಯ ಎಂಬುದು ಬಹುಮುಖ್ಯ ಸಂಗತಿ. ಕಾಲಹರಣ ಮಾಡದೇ ಕಾಯಕ ಧರ್ಮವನ್ನು ಪ್ರಚಾರ ಮಾಡುವ ಅಗತ್ಯವಿದೆ. ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳು ಬಡವರು, ಅಂಧರು, ಅನಾಥರ ತಂದೆ-ತಾಯಿಯಾಗಿದ್ದರು. ವಟುಗಳನ್ನು ಮಠಕ್ಕೆ ನೀಡುವ ಸಂಕಲ್ಪ ಅವರದ್ದಾಗಿತ್ತು. ದೃಷ್ಟಿ ಯೋಗದ ಮೂಲಕ ಅಂತಃಶುದ್ಧಿ ಮಾಡಿಕೊಂಡು ಆಚಾರ, ನಿಷ್ಠೆಯುಳ್ಳವರಾಗಿ, ಅಹಿಂಸಾ ತತ್ವ ಪ್ರತಿಪಾದಿಸಿದ ಮಹಾತ್ಮ ಎಂದು ಸ್ಮರಿಸಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಮಾನತೆ, ಸೌಖ್ಯ ಬದುಕಿಗಾಗಿ ಎಲ್ಲರೂ ಹಾತೊರೆಯುತ್ತಾರೆ. ಸಮಾಜಕ್ಕಾಗಿ ಇಡೀ ಬದುಕನ್ನು ಮುಡಿಪಾಗಿಟ್ಟ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳು ಆ ಕಾಲದಲ್ಲಿಯೇ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಸುಸ್ಥಿರ ಅಭಿವೃದ್ಧಿ ಪರ ಕೃಷಿಗೆ ಚಾಲನೆ ನೀಡಿದ್ದರು.
ಆಧುನಿಕ ಕೃಷಿಗೆ ಮುಂದಾಗಿದ್ದರು ಎಂದು ಹೇಳಿದರು. ಬೆಳಗಾವಿಯ ನಿವೃತ್ತ ಉಪನ್ಯಾಸಕಿ ಶರಣೆ ಪ್ರೊ.ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಮಹಾತ್ಮರ ಜೀವನಾದರ್ಶಗಳು ಮಾನವನನ್ನು ಮಹಾಮಾನವನನ್ನಾಗಿಸುವ ಶಕ್ತಿ ಹೊಂದಿವೆ. ಅನುಭಾವಿಗಳ ಅನುಭವಾಮೃತಗಳು ನಮ್ಮ ಮಕ್ಕಳಿಗೆ ತಲುಪಬೇಕು. ಕೇಡನ್ನು ಅಹ್ವಾನಿಸದೇ ಬೇಡವಾಗಿರುವುದನ್ನು ಬಿಟ್ಟು ಒಳ್ಳೆಯ ಬದುಕಿಗೆ ಮುಂದಾಗಬೇಕು. ಕ್ರಯಾಶೀಲರನ್ನು ಸದಾ ಟೀಕಿಸುತ್ತಲೇ ಇರುತ್ತಾರೆ. ಇದನ್ನು ಮೀರಿ ಸಮಾಜಕ್ಕೆ ದುಡಿಯುವುದೇ ನಿಜವಾದ ಶಕ್ತಿ ಎಂದರು.
ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು, ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಬಿಜಕಲ್‌ನ ಶಿವಲಿಂಗ ಮಹಾಸ್ವಾಮಿಗಳು, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಮಹಾಸ್ವಾಮಿಗಳು, ಮೂಲೆಗದ್ದೆ ಚನ್ನಬಸವ ಮಹಾಸ್ವಾಮಿಗಳು, ಗುಂಡೂರಿನ ತಿಪ್ಪೇಶ್ವರ ಮಹಾಸ್ವಾಮಿಗಳು, ಶೇಗುಣಸಿಯ ಜಯದೇವ ಶ್ರೀಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಗಡಿ ತೋಟದ ಮಾಲಿಕರು ಹಾಗೂ ಕೃಷಿ ತಜ್ಞ ಜಯದೇವ ಅಗಡಿ, ಜಂಪರೂಪ ಆಟಗಾರ್ತಿ ಹುಬ್ಬಳ್ಳಿಯ ಕೃತಿಕಾ ಹತ್ತಿ ಹಾಗೂ ಪ್ರತಿ ವರ್ಷದಂತೆ ಹಾನಗಲ್ಲ ತಾಲೂಕಿನ ನಿವೃತ್ತ ನೌಕರನ್ನು ಗೌರವಿಸಲಾಯಿತು. ಪ್ರೊ. ಎಂ.ಬಿ.ನಾಯಕ್ ಸ್ವಾಗಿತಿಸಿ, ಡಾ.ವಿಶ್ವನಾಥ ಬೋಂದಾಡೆ ನಿರೂಪಿಸಿದರು.
ಸಾಮೂಹಿಕ ವಿವಾಹ: ಇದೇ ದಿನ ಬೆಳಿಗ್ಗೆ ಶ್ರೀಮಠದಲ್ಲಿ ಸಾಮೂಹಿಕ ವಿವಾಹಗಳು ನಡೆದವು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಹಾನಗಲ್ಲ ಲಿಂ.ಕುಮಾರ ಶಿವಯೋಗಿಗಳವರ ಭಾವ ಬಿಂಬದ ಮೆರವಣಿಗೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.