ಬಿಸಿಯೂಟ ತಯಾರಕರಿಗೆ ವಿಶೇಷ ನೆರವು ನೀಡಿ
Team Udayavani, Jun 20, 2020, 7:06 AM IST
ಸವಣೂರು: ಎಪ್ರಿಲ್ ಹಾಗೂ ಮೇ ತಿಂಗಳ ಗೌರವಧನ ಬಿಡುಗಡೆ ಹಾಗೂ ವಿಶೇಷ ನೆರವು ನೀಡುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘ ತಾಲೂಕು ಘಟಕ ವತಿಯಿಂದ ಉಪವಿಭಾಗಾಧಿಕಾರಿಗಳ ಅನ್ನಪೂರ್ಣ ಮುದಕಮ್ಮನವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ರಾಜ್ಯದ ವಿವಿಧ ಕಾರ್ಮಿಕರಿಗೆ 5 ಸಾವಿರ ಸಹಾಯಧನವನ್ನು ಘೋಷಣೆ ಮಾಡಿ ಅನುಕೂಲ ಕಲ್ಪಿಸಿದೆ. ಆದರೆ, ಪ್ರಾಥಮಿಕ ಶಾಲೆ ಅಡುಗೆ ಸಿಬ್ಬಂದಿ ಸರ್ಕಾರ ನೀಡಿದ ಅಲ್ಪ ಪ್ರಮಾಣದ ಗೌರವಧನವನ್ನು ಪಡೆದುಕೊಂಡು ಕುಟುಂಬ ನಿರ್ವಹಣೆ ಮಾಡಿಕೊಂಡು ನಿರಂತರವಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇವೆ. ಕೋವಿಡ್-19 ನಿಂದಾಗಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಯಾವುದೇ ಕೆಲಸವಿಲ್ಲದೆ ಅಡುಗೆ ಸಿಬ್ಬಂದಿಗಳು ಮನೆಯಲ್ಲಿಯೆ ಉಳಿದುಕೊಂಡು ಜೀವನೋಪಾಯಕ್ಕೆ ಸಾಲವನ್ನು ಮಾಡಿ ಕುಟುಂಬದ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ. ಆದ್ದರಿಂದ, ಸರ್ಕಾರ ಎಲ್ಲ ಕಾರ್ಮಿಕರಂತೆ ಬಿಸಿಯೂಟ ಕಾರ್ಮಿಕರನ್ನು ಪರಿಗಣಿಸುವ ಮೂಲಕ ಆರ್ಥಿಕ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳವಂತಾಗಲು ವಿಶೇಷ ನೆರವು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಲ್.ಬಿ. ಬುಶೆಟ್ಟಿ, ಪಿ.ಎಂ. ಹಡಪದ, ಪ್ರೇಮಾ ಬಿ.ಟಿ., ಶೇಖವ್ವ, ಪ್ರಮೀಳಾ, ದಿಲ್‌ಶಾದ, ಸುಜಾತಾ, ನಾಗವ್ವ, ಗಂಗವ್ವ ಹರಿಹರ, ವಿಜೀಯಾ ಮಿಳ್ಳೇ, ಭಾರತಿ ಕೊಕಾಟೇ, ನಿರ್ಮಲಾ ಕುಲಕರ್ಣಿ, ಲತಾ ತಳವಾರ, ಲಲಿತಾ, ಲಕ್ಷ್ಮವ್ವ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.