ಸೈಲೋ ಘಟಕ ಪ್ರಾಯೋಗಿಕ ಪರೀಕ್ಷೆ

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುವುದರಿಂದ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ

Team Udayavani, Feb 3, 2022, 6:20 PM IST

ಸೈಲೋ ಘಟಕ ಪ್ರಾಯೋಗಿಕ ಪರೀಕ್ಷೆ

ಹಾವೇರಿ: ನಗರದ ಹಾನಗಲ್ಲ ರಸ್ತೆಯಲ್ಲಿರುವ ಜಾನುವಾರು ಮಾರುಕಟ್ಟೆ ಆವರಣದಲ್ಲಿ 2.11ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಶೈಲಿಯ ವಿದೇಶಿ ತಂತ್ರಜ್ಞಾನ ಬಳಸಿಕೊಂಡು ತಲಾ 200ಮೆ.ಟನ್‌ ಸಾಮರ್ಥ್ಯದ 5 ಸೈಲೋ ಘಟಕಗಳು ನಿರ್ಮಾಣಗೊಂಡಿದ್ದು, ಬುಧವಾರ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ನೇತೃತ್ವದಲ್ಲಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಹಾವೇರಿ, ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿರುವ ಎಪಿಎಂಸಿಗಳಿಗೆ ಮೂಲಭೂತ ಸೌಕರ್ಯ ಸೃಜನೆ ಯೋಜನೆಯಡಿ ಸ್ಥಳೀಯ ಎಪಿಎಂಸಿ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಮೆಟ್ರಿಕ್‌ ಟನ್‌ ಸಾಮರ್ಥ್ಯದ 5 ಸೈಲೋ ಘಟಕಗಳನ್ನು ನಿರ್ಮಿಸಿ 1ಸಾವಿರ ಮೆಟ್ರಿಕ್‌ಟನ್‌ ಸಾಮರ್ಥ್ಯದ ಧಾನ್ಯಗಳನ್ನು ಸಂಗ್ರಹಿಸಲು ಕೃಷಿ ಮಾರಾಟ ಇಲಾಖೆಗೆ 2016-17ನೇ ಸಾಲಿನ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿತ್ತು.

ಆರಂಭದಲ್ಲಿ 5 ಸೈಲೋ ಘಟಕಗಳನ್ನು 1.85ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಸಿದ್ಧಗೊಳಿಸಲಾಗಿತ್ತು. ಇದಕ್ಕಾಗಿ ಸರ್ಕಾರ 1ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಉಳಿದ 85ಲಕ್ಷ ರೂ.ಗಳನ್ನು ಎಪಿಎಂಸಿಯಿಂದ ಭರಿಸಲು ಉ¨ªೇಶಿಸಲಾಗಿತ್ತು. ಇದೀಗ ಈ ಸೈಲೋ ಘಟಕಗಳ ನಿರ್ಮಾಣ ವೆಚ್ಚ 2.11ಕೋಟಿ ರೂ.ಗಳಷ್ಟಾಗಿದೆ. ರಾಜ್ಯದ ಕಲಬುರಗಿ ಬಿಟ್ಟರೆ ಹಾವೇರಿಯಲ್ಲಿಯೇ 2ನೇ ಘಟಕ ಇದೀಗ ಕಾರ್ಯಾರಂಭಗೊಂಡಿದೆ ಎಂದು ತಿಳಿಸಿದರು.

ಧಾನ್ಯಗಳ ಸಂಗ್ರಹಣೆಗೆ ಸೂಕ್ತ: ಸೈಲೋ ಘಟಕಗಳು ಗೋದಾಮುಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳನ್ನು ಸಂರಕ್ಷಿಸುವ ಸಾಧನವಾಗಿದೆ. ರೈತರಷ್ಟೇ ಅಲ್ಲದೇ, ವರ್ತಕರು ಸಹ ಇವುಗಳ ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ವಿದೇಶಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ. ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದವಸ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ರೈತರು ತಾವು ಬೆಳೆದ ಮೆಕ್ಕೆಜೋಳ, ಜೋಳ, ರಾಗಿ, ಹುರುಳಿ, ಸೋಯಾಅವರೆ ಸೇರಿದಂತೆ ಎಲ್ಲ ರೀತಿಯ ದವಸ ಧಾನ್ಯಗಳನ್ನು ಸೈಲೋದಲ್ಲಿ ಸಂಗ್ರಹಿಸಿಡಲು ಅನುಕೂಲವಾಗಲಿದೆ.
ಸದ್ಯ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುವುದರಿಂದ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇಲ್ಲಿ ಧಾನ್ಯಗಳನ್ನು ಸಂಗ್ರಹಿಸಲು ಎಷ್ಟು ದರ ನಿಗದಿಪಡಿಸಬೇಕು ಎಂಬುದನ್ನು ಶೀಘ್ರದಲ್ಲಿಯೇ ನಿರ್ಣಯಿಸಲಾಗುವುದು ಎಂದು ಮಲ್ಲಿಕಾರ್ಜುನ ಹಾವೇರಿ ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ರುದ್ರೇಶ ಚಿನ್ನಣ್ಣವರ, ರಮೇಶ ಚಾವಡಿ, ಶಿವಕುಮಾರ ಮಾಹೂರ, ವಿ.ಜಿ. ಬಣಕಾರ, ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯಕ, ಬೆಳಗಾವಿ ಎಂಡಿಪಿ ಇಇ ಹನುಮರೆಡ್ಡಿ ಗದ್ದಿ, ಎಇಇ ಎ.ಬಿ. ಬಾಯಿಸರ್ದಾರ, ಎಇ ಕೃಷ್ಣ ಆರೇರ, ಬಿಲ್ಟೆಕ್‌ ಎಂಜಿನಿಯರಿಂಗ್‌ ಸಲ್ಯೂಶನ್ಸ್‌ನ ವೈ.ಬಿ. ಮಂಜುನಾಥ, ವರ್ತಕರಾದ ಪಿ.ಡಿ. ಶಿರೂರ, ಶಿವಬಸಪ್ಪ ವಾಲಿಶೆಟ್ಟರ, ಪಾಪಣ್ಣ ಅಗಡಿ, ನಿರಂಜನ ತಾಂಡೂರ, ಎಂ.ವಿ.ಹಿರೇಮಠ, ಸೋಮಣ್ಣ ಯರೇಶಿಮಿ, ಗಂಗಾಧರ ಕರ್ಜಗಿ, ರೈತರಾದ ಮಹಾಂತೇಶ ಶೀತಾಳದ, ರುದ್ರಪ್ಪ ಹಾದಿಮನಿ, ವೀರಯ್ಯ ಪತ್ರಿಮಠ ಇತರರು ಇದ್ದರು.

ಸೈಲೋ ಘಟಕದ ವಿಶೇಷಗಳು
ಗ್ಯಾಲ್ವನೈಸ್ಡ್ ಸೈಲೋಗಳನ್ನು ದೀರ್ಘ‌ ಕಾಲದವರೆಗೆ ಸಗಟು ಧಾನ್ಯ ಸಂಗ್ರಹಣೆಗೆ ಬಳಸಬಹುದಾಗಿದೆ. ಇದನ್ನು ಗ್ಯಾಲ್ವನೈಸ್ಡ್ ಉಕ್ಕಿನಿಂದ ನಿರ್ಮಿಸಲಾಗುತ್ತದೆ. ಲೆವೆಲ್‌ ಸ್ವಿಚ್‌, ವಾತಾವರಣ ಅನುಕೂಲ ವ್ಯವಸ್ಥೆ, ಉಷ್ಣಾಂಶ ಮೇಲ್ವಿಚಾರಣೆ, ಗಾಳಿಯಾಡುವ ವ್ಯವಸ್ಥೆ, ಸ್ವೀಪ್‌ ಅಗರ್‌ಗಳೂ ಇರುವುದರಿಂದ ಸಂಗ್ರಹಿಸಿದ ಧಾನ್ಯ ಹಾಳಾಗುವ ಸಂಭವ ಕಡಿಮೆ ಇರುತ್ತದೆ. ಹೀಗಾಗಿ, ಹಗೆವಿನ ಬದಲು ಸೈಲೋ ಘಟಕಗಳು ರೈತರಿಗೆ ಹಾಗೂ ವರ್ತಕರಿಗೆ ಧಾನ್ಯಗಳನ್ನು  ಸಂಗ್ರಹಿಸಿಡಲು ಅನುಕೂಲಕರವಾಗಿವೆ.

ಪೂರ್ವಜರು ಬಳಸುತ್ತಿದ್ದ ಹಗೆಗಳಿಗೆ ಮಳೆ ನೀರು ತಗಲಿ, ತೇವಾಂಶ ಹೆಚ್ಚಳವಾಗಿ, ಜಾಗೆ ಹಾಗೂ ಸುರಕ್ಷತೆಯ ಕೊರತೆ ಎದುರಾಗುತ್ತಿತ್ತು. ಅಲ್ಲದೇ, ನಾನಾ ಕಾರಣಗಳಿಂದ ರೈತರು ಅವುಗಳ ಬಳಕೆಯನ್ನು ನಿಲ್ಲಿಸಿದ್ದಾರೆ. ಹೀಗಾಗಿ, ರೈತರು ಬೆಳೆದ ಧಾನ್ಯಗಳಿಗೆ ಸೂಕ್ತ ಬೆಲೆ ಇಲ್ಲದೇ ಇದ್ದರೂ ಸಂಗ್ರಹಿಸಿಡಲು ಸಾಧ್ಯವಾಗದೇ ಅಗ್ಗದ ದರಕ್ಕೆ ಮಾರಿ ನಷ್ಟ ಅನುಭವಿಸುವಂತಾಗಿದೆ. ಅಂತಹ ರೈತರಿಗೆ ಸೈಲೋ ಘಟಕಗಳು ವರವಾಗಲಿವೆ.
ಮಲ್ಲಿಕಾರ್ಜುನ ಹಾವೇರಿ, ಎಪಿಎಂಸಿ ಅಧ್ಯಕ್ಷ

ಟಾಪ್ ನ್ಯೂಸ್

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

18-uv-fusion

UV Fusion: ನಿಸ್ವಾರ್ಥ ಜೀವ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.