ಗಾಯತ್ರಿ ಮಂತ್ರ ಜಪದಿಂದ ದೇಹದ ನಾಡಿ ಶುದ್ಧಿ: ನಾಗರಾಜಾನಂದ ಮಹಾಸ್ವಾಮಿ

ಎಡಭಾಗದಲ್ಲಿ 36 ಸಾವಿರ ನಾಡಿಗಳಾಗಿ ವಿಭಾಗಿಸಲ್ಪಟ್ಟಿದೆ

Team Udayavani, Oct 15, 2024, 5:00 PM IST

ಗಾಯತ್ರಿ ಮಂತ್ರ ಜಪದಿಂದ ದೇಹದ ನಾಡಿ ಶುದ್ಧಿ: ನಾಗರಾಜಾನಂದ ಮಹಾಸ್ವಾಮಿ

ಉದಯವಾಣಿ ಸಮಾಚಾರ
ರಾಣಿಬೆನ್ನೂರ: ಗಾಯತ್ರಿ ಮಂತ್ರ ನಿತ್ಯ ಜಪಿಸುವುದರಿಂದ ದೇಹದ ನಾಡಿ ಶುದ್ಧಿಯಾಗುತ್ತದೆ. ಸ್ವಯಂ ದೇವರ ಸ್ವರೂಪವೇ ಆಗಿದ್ದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು ಈ ಮಂತ್ರವನ್ನು ತ್ರಿಕಾಲ ಜಪಿಸುತ್ತಿದ್ದರು ಎಂದು ಗುರು ನಾಗರಾಜಾನಂದ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಏರ್ಪಡಿಸಲಾಗಿದ್ದ ದೇವಿ ಪುರಾಣ ಪ್ರವಚನ, ಮಂಗಲ ಮತ್ತು ಗಾಯತ್ರಿ ಹೋಮ-ಹವನ, ಪೂಜಾ ಕೈಂಕರ್ಯ ನೆರವೇರಿಸಿ, ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿ ಆಶೀರ್ವಚನ ನೀಡಿದರು. ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ 72 ಸಾವಿರ ಪ್ರಧಾನ ನಾಡಿಗಳಿವೆ. ಬಲಭಾಗದಲ್ಲಿ 36 ಸಾವಿರ, ಎಡಭಾಗದಲ್ಲಿ 36 ಸಾವಿರ ನಾಡಿಗಳಾಗಿ ವಿಭಾಗಿಸಲ್ಪಟ್ಟಿದೆ ಎಂದರು.

ಹಿಂದೆ ಪೂರ್ವಜರು ಗಾಯತ್ರಿ ಮಂತ್ರಕ್ಕೆ ಇಷ್ಟು ಮಹತ್ವ ಕೊಟ್ಟದ್ದು ಓಂಕಾರದ ಮೂರು ಅಕ್ಷರಗಳೇ (ಅ, ಉ, ಮ) ಮೂರು
ವ್ಯಾಹೃತಿಗಳಾದವು (ಭೂಃ ಭುವಃ ಸುವಃ) ಮೂರು ವ್ಯಾಹೃತಿಗಳು ಬೆಳೆದು ಮೂರು ಪಾದದ ಗಾಯತ್ರಿಯಾಯಿತು. ವೇದಮಾತೆ
ಗಾಯತ್ರಿ ಮಂತ್ರವನ್ನು ಜಪಿಸುತ್ತ ಸಾಯಂ-ಪ್ರಾತಃ ಸಂಧ್ಯಾವಂದನೆಯನು ಪಾಲಿಸುತ್ತಾರೋ ಅವರು ಗಾಯತ್ರಿ
ಮಾತೆಯ ಭಕ್ತಿಗೆ ಪಾತ್ರರಾಗುತ್ತಾರೆ.

ತೇತ್ರಾಯುಗದಲ್ಲಿ ಶ್ರೀರಾಮಚಂದ್ರನು ನಾರದ ಮುನಿಗಳ ಮಾರ್ಗದರ್ಶನದಂತೆ ನವರಾತ್ರಿ ವ್ರತವನ್ನು ಆಚರಿಸಿ ರಾವಣನನ್ನು
ಸಂಹರಿಸಿದ ಹಾಗೂ ದ್ವಾಪರ ಯುಗದಲ್ಲಿ ಶ್ರೀದೇವತೆಯನ್ನು ಪೂಜಿಸಿ ಆರ್ಶೀವಾದ ಪಡೆದ ಪಾಂಡವರು ದುಷ್ಟರಿಂದ ಬಿಡುಗಡೆ
ಹೊಂದಿದರೆಂದು ಮಹಾಭಾರತದಲ್ಲಿ ನೋಡುತ್ತೇವೆ. ಅದರ ಸಂಕೇತವಾಗಿ ಇಂದು ನಾವು ದಸರಾ ಉತ್ಸವ ಆಚರಿಸುತ್ತಿದ್ದೇವೆ
ಎಂದು ಶ್ರೀಗಳು ತಿಳಿಸಿದರು.

ಚಳಗೇರಿಯ ವೇ. ಚನ್ನಯ್ಯ ಶಾಸ್ತ್ರಿಗಳು ಹಾಗೂ ಸಂಗಡಿಗರು ಸಿದ್ಧಾರೂಢ ಮೂರ್ತಿ ಹಾಗೂ ಗಾಯತ್ರಿ ದೇವಿ ಮೂರ್ತಿಗೆ
ಬ್ರಹ್ಮಿಮೂರ್ತದಲ್ಲಿ ಅಭಿಷೇಕ, ಬಿಲ್ವಾರ್ಚನೆ, ವಿವಿಧ ಹೂವುಗಳ ಅಲಾಂಕಾರದೊಂದಿಗೆ ಗಾಯತ್ರಿ ಹೋಮ, ಹವನ ಹಾಗೂ ನವಗ್ರಹ ಪೂಜಾ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು.

ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ ಕಡೂರು,
ಅರುಣಸ್ವಾಮಿ ಹಿರೇಮಠ, ಗೋಪಾಲ ಕೊಡ್ಲೆರ, ಡಾಕೇಶ ಲಮಾಣಿ, ಶಿವಪ್ಪ ಬಣಕಾರ, ಶಿವು ಗುತ್ತೂರ, ವಿಶ್ವನಾಥ ಕುಂಬಳೂರ, ಮೈಲಾರಪ್ಪ ಸೋಮಲಾಪುರ, ಪ್ರಕಾಶ ಚನ್ನಗೌಡ್ರ, ಗುರುಶಾಂತ ಬಾಗಿಲದವರ, ಜಯಪ್ಪ ನೆಲವನ್ನಿ, ಮುರಗೇಶ ಬಣಕಾರ, ಡಾ| ಸುನಿತಾ, ಸಂದೀಪ ಮಾಕನೂರ, ಭರಮಪ್ಪ ಕೊಡ್ಲೆರ, ಗುಡ್ಡೇಶಿ ಹೆಡಿಯಾಲ, ಮಹಾಂತೇಶಗೌಡ್ರ ಸೇರಿದಂತೆ ಸಾವಿರರೂ ಭಕ್ತರು ಮತ್ತು ಮಹಿಳೆಯರು ಹೋಮದಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.