ಮಳೆ ಅಭಾವ; ಭಿತ್ತನೆಗೆ ಹಿನ್ನಡೆ
Team Udayavani, Jun 17, 2019, 10:13 AM IST
ಸಾಂದರ್ಭಿಕ ಚಿತ್ರ
ಹಾವೇರಿ: ಮುಂಗಾರು ಮಳೆ ಆರಂಭದ ಜೂನ್ ತಿಂಗಳ ಅರ್ಧ ಕಳೆದರೂ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ಬಿತ್ತನೆ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿದೆ.
ಸರಿಯಾಗಿ ಮಳೆಯಾಗಿದ್ದರೆ ಈ ದಿನಗಳಲ್ಲಿ ಶೇ. 80 ಬಿತ್ತನೆಯಾಗಬೇಕಿತ್ತು. ಮಳೆ ಇಲ್ಲದೇ ಈವರೆಗೆ ಬಿತ್ತನೆ ಕಾರ್ಯ ಶೇ. 10ಆಗದೆ ಮಳೆಗಾಗಿ ರೈತರು ಮುಗಿಲು ನೋಡುತ್ತಿದ್ದಾರೆ.
ಮೇ ತಿಂಗಳಲ್ಲಿ ಸುರಿಯಬೇಕಿದ್ದ ಮುಂಗಾರು ಪೂರ್ವದ ಮಳೆಯೂ ಈ ಬಾರಿ ಸುರಿದಿಲ್ಲ. ಜೂನ್ ತಿಂಗಳ ಅರ್ಧ ಕಳೆದರೂ ಸಮರ್ಪಕ ಪ್ರಮಾಣದಲ್ಲಿ ಮಳೆ ಆಗಿಲ್ಲ. ಈ ವರ್ಷ ಈವರೆಗೂ ಸರಿಯಾಗಿ ಮಳೆ ಆಗದೆ ಇರುವುದು ಅನ್ನದಾತರಲ್ಲಿ ಆತಂಕ ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಜನವರಿಯಿಂದ ಮೇ ವರೆಗಿನ ಮುಂಗಾರು ಪೂರ್ವ ವಾಡಿಕೆ ಮಳೆ 126.67 ಮಿಮೀ ಆಗಿದೆ. ಆದರೆ, ಈ ವರ್ಷ ಕೇವಲ 55ಮಿಮೀ. ಮಾತ್ರ ಮುಂಗಾರುಪೂರ್ವ ಮಳೆಯಾಗಿದೆ. ಈ ಮಳೆ ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಆಗದೆ ಕೆಲವೇ ಪ್ರದೇಶಗಳಲ್ಲಿ ಆಗಿದೆ. ಬಹಳಷ್ಟು ಪ್ರದೇಶಗಳಲ್ಲಿ ಸುರಿಯಲೇ ಇಲ್ಲ. ಇನ್ನು ಸುರಿದಷ್ಟು ಮಳೆ ಒಂದು ಅಥವಾ ಎರಡು ದಿನದಲ್ಲಿ ಸುರಿದಿರುವುದರಿಂದ ರೈತರಿಗೆ ಅನುಕೂಲವಾಗಲಿಲ್ಲ.
ಜೂನ್ ತಿಂಗಳು ಮುಂಗಾರು ವಾಡಿಕೆ ಮಳೆ 114.9ಮಿಮೀಯಿದ್ದು ಅರ್ಧ ತಿಂಗಳಲ್ಲಿ ಕೇವಲ 27.1ಮಿಮೀ ಮಾತ್ರ ಮಳೆಯಾಗಿದೆ. ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದರೆ ಈಗಾಗಲೇ ಕೃಷಿ ಇಲಾಖೆ ಗುರಿ ಪ್ರಕಾರ ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಆಹಾರ ಧಾನ್ಯಗಳ ಬಿತ್ತನೆ ಶೇ. 80ಅಂದರೆ ಸರಾಸರಿ ಮೂರು ಲಕ್ಷ ಹೆಕ್ಟೇರ್‌ನಷ್ಟು ಬಿತ್ತನೆ ಆಗಬೇಕಿತ್ತು. ಮಳೆ ಕೊರತೆಯಿಂದ ಜೂನ್ ತಿಂಗಳಿನ 15 ದಿನಗಳಲ್ಲಿ ಶೇ. 10ಕೂಡ ಬಿತ್ತನೆಯಾಗಿಲ್ಲ.
ಬಿತ್ತನೆ ಗುರಿ:ಕೃಷಿ ಇಲಾಖೆ ಪ್ರಸಕ್ತ ವರ್ಷ 207973 ಹೆಕ್ಟೇರ್ ಏಕದಳ, 7209 ಹೆಕ್ಟೇರ್ ದ್ವಿದಳ, 31854 ಹೆಕ್ಟೇರ್ ಎಣ್ಣೆಕಾಳು, 85790 ಹೆಕ್ಟೇರ್ ವಾಣಿಜ್ಯ ಬೆಳೆ ಸೇರಿ ಒಟ್ಟು 332826 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ. ಮುಂಗಾರು ಹಂಗಾಮಿಗಾಗಿ ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಉಪಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಿಕೊಂಡಿದೆ. ಮುಂಗಾರು ಹಂಗಾಮಿಗೆ ಒಟ್ಟು 4165 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಆಗಿದ್ದು, ಇದರಲ್ಲಿ ಕೇವಲ 323 ಕ್ವಿಂಟಾಲ್ ಈಗಾಗಲೇ ವಿತರಣೆಯಾಗಿದೆ. ಇದರಲ್ಲಿ 321 ಕ್ವಿಂಟಾಲ್ ಶೇಂಗಾ ಬೀಜ, ಎರಡು ಕ್ವಿಂಟಾಲ್ ಸೋಯಾ ಅವರೆ ಎರಡು ವಿಧದ ಬಿತ್ತನೆ ಬೀಜಗಳು ಮಾತ್ರ ವಿತರಣೆಯಾಗಿವೆ. ಆದರೆ, ಬಿತ್ತನೆಗಾಗಿ ರೈತರು ಮಳೆ ಬರುವುದನ್ನೇ ಕಾಯುತ್ತಿದ್ದಾರೆ.
ಗೊಬ್ಬರ ದಾಸ್ತಾನು:ಮುಂಗಾರು ಹಂಗಾಮಿಗೆ ಸರಬರಾಜು ಆಗಿರುವ ಒಟ್ಟು 32722 ಮೆಟ್ರಿಕ್ ಟನ್ ರಸಗೊಬ್ಬರದಲ್ಲಿ 400 ಮೆಟ್ರಿಕ್ ಟನ್ ವಿತರಣೆಯಾಗಿದೆ. 32322 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಯೂರಿಯಾ 9525 ಮೆ.ಟನ್, ಡಿಎಪಿ 9048 ಮೆ.ಟನ್, ಎಂಒಪಿ 3541 ಮೆ.ಟನ್, ಕಾಂಪ್ಲೆಕ್ಸ್ 10055 ಮೆ.ಟನ್ ದಾಸ್ತಾನು ಇದೆ. ಪ್ರಸ್ತುತ ಯೂರಿಯಾ 168 ಮೆ.ಟನ್, ಡಿಎಪಿ 98 ಮೆ.ಟನ್., ಕಾಂಪ್ಲೆಕ್ಸ್ 134 ಮೆ.ಟನ್ ಒಟ್ಟು 400 ಮೆ.ಟನ್ ರಸಗೊಬ್ಬರ ವಿತರಣೆಯಾಗಿದೆ.
ಒಟ್ಟಾರೆ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬಿತ್ತನೆ ಶುರುವಾಗಿಲ್ಲ. ಮಳೆ ಸಮರ್ಪಕವಾಗಿ ಬೀಳಲು ಶುರು ಮಾಡಿದಾಗಲೇ ಬಿತ್ತನೆ ಕಾರ್ಯ ಚುರುಕು ಪಡೆದುಕೊಳ್ಳಲಿದ್ದು ರೈತರು ಮಳೆಗಾಗಿ ವರುಣ ದೇವನನ್ನು ಪ್ರಾರ್ಥಿಸುತ್ತಿದ್ದಾರೆ.
•ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.