ಮಲೆನಾಡಿನ ಮಳೆಗೆ ಹಾವೇರಿಯಲ್ಲಿ ನೆರೆ

Team Udayavani, Aug 7, 2019, 2:17 PM IST

hv-tdy-1

ಹಾವೇರಿ: ನೆರೆಯ ಮಲೆನಾಡು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿದಿರುವ ಪ್ರಮುಖ ನದಿಗಳಾದ ತುಂಗಭದ್ರಾ, ವರದಾ ಹಾಗೂ ಧರ್ಮಾ, ಕುಮದ್ವತಿ ನದಿಗಳು ಅಪಾಯಮಟ್ಟಕ್ಕೆ ತಲುಪುತ್ತಿದ್ದು, ನದಿ ಪಾತ್ರದ ಜನರಲ್ಲಿ ಭೀತಿ ಮೂಡಿಸಿವೆ.

ಪಕ್ಕದ ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಜಿಲ್ಲೆಯಲ್ಲಿ ತುಂಗಭದ್ರಾ, ವರದಾ ನದಿ ಜತೆಗೆ ತುಂಗಾ ಮೇಲ್ದಂಡೆ ಕಾಲುವೆಯಲ್ಲಿಯೂ ನೀರು ಅಪಾಯಮಟ್ಟ ಸಮೀಪಿಸುತ್ತಿವೆ. ಮಳೆ ನೀರಿನ ಜತೆಗೆ ಭದ್ರಾ ಹಾಗೂ ತುಂಗಾ ಜಲಾಶಯಗಳ ನೀರು ಸಹ ಸೇರಿಕೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿನ ನದಿಗಳಲ್ಲಿ ನೀರಿನಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಸಾವಿರಾರು ಗ್ರಾಮಸ್ಥರಿಗೆ ಪ್ರವಾಹದ ಭೀತಿ ಎದುರಾಗಿದೆ. ಇದೇ ರೀತಿ ಪಕ್ಕದ ಜಿಲ್ಲೆಗಳಲ್ಲಿ ಮಳೆ ಇನ್ನೆರಡು ದಿನ ಮುಂದುವರಿದರೆ ಜಿಲ್ಲೆಯಲ್ಲಿನ ನದಿಗಳಲ್ಲಿ ನೆರೆ ಉದ್ಭವಿಸಿ ಗ್ರಾಮಗಳಿಗೆ, ಕೃಷಿ ಭೂಮಿಗೆ ನೀರು ನುಗ್ಗುವ ಸಾಧ್ಯತೆ ಇದೆ.

ವರದಾ ನದಿಯಿಂದಾಗಿ ಹಾನಗಲ್ಲ, ಹಾವೇರಿ ತಾಲೂಕಿನ ಕೆಲ ಗ್ರಾಮಗಳು, ತುಂಗಾಭದ್ರಾ ನದಿಯಿಂದ ರಾಣಿಬೆನ್ನೂರು ಮತ್ತು ಹಾವೇರಿ ತಾಲೂಕಿನ ಕೆಲ ಹಳ್ಳಿಗಳು, ಧರ್ಮಾ ನದಿಯಿಂದಾಗಿ ಹಾನಗಲ್ಲ ತಾಲೂಕಿನ ಕೆಲ ಗ್ರಾಮಗಳು ಹಾಗೂ ಕುಮದ್ವತಿ ನದಿಯಿಂದ ರಾಣಿಬೆನ್ನೂರು ತಾಲೂಕಿನ ಕೆಲ ಗ್ರಾಮಗಳು ನೆರೆ ಭೀತಿಗೊಳಗಾಗಿವೆ. ಮಳೆ ನೀರಿನ ಜತೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ, ಮುಂಡಗೋಡ ತಾಲೂಕಿನ ಮಳಗಿ ಜಲಾಶಯದಿಂದ ಧರ್ಮಾ ನದಿಗೆ ನೀರು ಬಿಡುವುದರಿಂದ ನದಿಗಳು ಯಾವಾಗ ಅಪಾಯದಮಟ್ಟ ಮೀರುತ್ತದೆಯೋ ಎಂಬ ಭಯ ನದಿಗುಂಟ ವಾಸಿಸುವ ಜನರಲ್ಲಿ ಮೂಡಿಸಿದೆ.

ನೆರೆಭೀತಿಯ ಗ್ರಾಮಗಳು: ವರದಾ ನದಿ ದಂಡೆಯಲ್ಲಿರುವ ಹಾವೇರಿ ತಾಲೂಕಿನಲ್ಲಿ ಕೋಣನತಂಬಗಿ, ಗುಯಲಗುಂದಿ, ಕೆಸರಳ್ಳಿ, ಮಣ್ಣೂರು, ಚೆನ್ನೂರು, ಕಿತ್ತೂರ, ಮರಡೂರು, ಅಕ್ಕೂರ, ಹಾಲಗಿ, ಮರೋಳ, ನದಿನೀರಲಗಿ, ಕೊಡಬಾಳ, ಹಿರೆಮಗದೂರ, ಕಲಕೋಟಿ, ಸವಣೂರು ತಾಲೂಕಿನ ಹಲಸೂರ, ಮನ್ನಂಗಿ, ಚಿಕ್ಕಮರಳಿಹಳ್ಳಿ, ಮಂಟಗಣಿ, ತೊಂಡೂರ, ಡೊಂಬರಮತ್ತೂರ, ಮೆಳ್ಳಾಗಟ್ಟಿ ಹಾಗೂ ಹಾನಗಲ್ಲ ತಾಲೂಕಿನ ಮಲಗುಂದ, ಕೂಡಲ ಗ್ರಾಮಗಳ ಒಳಗೆ ನದಿ ನೀರು ನುಗ್ಗುವ ಆತಂಕ ಎದುರಾಗಿದೆ.

ತುಂಗಭದ್ರಾ ನದಿಯ ಹರಿವು ಹೆಚ್ಚಾಗಿದ್ದರಿಂದ ಹಾವೇರಿ ತಾಲೂಕಿನ ಗುಯಲಗುಂದಿ, ಕಂಚಾರಗಟ್ಟಿ, ಗಳಗನಾಥ, ಹಾವಂಶ, ಶಾಖಾರ, ಹಾವನೂರು, ಹುರಳಿಹಾಳ, ಹರಳಹಳ್ಳಿ, ರಾಣಿಬೆನ್ನೂರ ತಾಲೂಕಿನ ಚೌಡಯ್ಯದಾನಪುರ, ಹರನಗೇರಿ, ಚಿಕ್ಕಕುರವತ್ತಿ, ಹಳೇಚಂದಾಪುರ ಗ್ರಾಮಗಳು, ಕುಮುದ್ವತಿ ನದಿ ನೀರು ಹೆಚ್ಚಳದಿಂದ ಕುಪ್ಪೆಲೂರು, ಮುಷ್ಟೂರ ಗ್ರಾಮಗಳು ನೆರೆ ಭೀತಿ ಎದುರಿಸುತ್ತಿವೆ.

ಕೃಷಿ ಭೂಮಿಗೆ ನುಗ್ಗಿದ ನೀರು: ಉತ್ತರಕನ್ನಡ ಜಿಲ್ಲೆಯ ಅಂಚಿನಲ್ಲಿರುವ ಹಾನಗಲ್ಲ ತಾಲೂಕಿನ ವಿವಿಧೆಡೆ ಈಗಾಗಲೇ ವರದಾ, ಧರ್ಮಾ ನದಿಗಳು ತುಂಬಿ ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಇದೇ ರೀತಿ ಹಲವೆಡೆ ನದಿಗುಂಟ ಇರುವ ಕೃಷಿ ಭೂಮಿಗೂ ನೀರು ನುಗ್ಗಿದ್ದು ಅಪಾರ ಹಾನಿಯಾಗಿದೆ. ಗ್ರಾಮಾಂತರ ಭಾಗದ ಕೆಲವು ಕಡೆಗಳಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಗ್ರಾಮಸ್ಥರು ಅನಿವಾರ್ಯವಾಗಿ ಇದೇ ರಸ್ತೆಯಲ್ಲಿಯೇ ಜೀವ ಬಿಗಿ ಹಿಡಿದು ಸಂಚರಿಸುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ರಸ್ತೆ ಸಂಪರ್ಕವೂ ಕಡಿತಗೊಂಡಿವೆ.

ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿ:

ಪಟ್ಟಣದಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖನೋಜಗಲ್ಲಿಯ ಕಲಖಂಡಿ ಪ್ಲಾಟ್‌ನ ಕೆಲವು ಮನೆಗಳು ಜಲಾವೃತಗೊಂಡು ಅಪಾರ ಹಾನಿ ಸಂಭವಿಸಿದ್ದು, ಇನ್ನು ಕೆಲ ಮನೆಗಳ ಗೋಡೆ, ಕಾಂಪೌಂಡಗಳು ಕುಸಿದಿವೆ.

ಸುಮಾರು 15 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಲಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತಾಗಿದೆ. ಜಿಲ್ಲಾಧಿಕಾರಿ ಭಾಜಪೇಯಿ ಆದೇಶದ ಮೇರೆಗೆ ಪಟ್ಟಣದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿಸಲಾಗಿದೆ. ಮಳೆಯ ಅರ್ಭಟ ಹೀಗೆ ಮುಂದುವರೆದರೆ ಶಾಲಾ ಕಾಲೇಜುಗಳಿಗೆ ಬುಧವಾರವೂ ರಜೆ ಮುಂದುವರಿಯುವ ಸಾಧ್ಯತೆಗಳಿವೆ. ಪಟ್ಟಣದ ಖನೋಜಗಲ್ಲಿಯ ಕಲಕಂಡಿ ಪ್ಲಾಟ್‌ನ ಮಖಬೂಲಸಾಬ್‌, ಪುಟ್ಟವ್ವ ತಳವಾರ, ಲಕ್ಷಿ ್ಮೕಬಾಯಿ ಕೊಲ್ಲಾಪುರ, ಅದ್ದು ಆಲದಕಟ್ಟಿ, ಇಮಾಮ್‌ಸಾಬ್‌ ಠಪಾಲ ಅವರ ಮನೆಗಳಲ್ಲಿ ನೀರು ಹೊಕ್ಕು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನು ಚಾಮುಂಡೇಶ್ವರಿ ನಗರದ ಬಂಕಾಪುರ ಎಂಬುವವರ ಮನೆಯಲ್ಲಿಯೂ ಕೂಡಾ ನೀರು ಹೊಕ್ಕು ಹಾನಿ ಸಂಭವಿಸಿದೆ.

ವಿವಿಧೆಡೆ ಮನೆಯ ಗೋಡೆ, ಕಂಪೌಂಡ್‌, ಮೇಲ್ಛಾವಣಿಗಳು ಧರೆಗುರುಳಿವೆ. ಬಾಡ ಗ್ರಾಮದ 12 ಮನೆಗಳಿಗೆ ಹಾನಿಸಂಭವಿಸಿದೆ. ಬಸರಿಕಟ್ಟಿಯಲ್ಲಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬನಿಗೆ ಗಾಯವಾದ ಬಗ್ಗೆ ವರದಿಯಾಗಿದೆ. ಹೋತನಹಳ್ಳಿ, ತೋರೂರ ಗ್ರಾಮದ ಕೆಲವು ಹೊಲ ಹಾಗೂ ಮನೆಗಳಿಗೆ ನೀರು ಹೊಕ್ಕು ಹಾನಿ ಸಂಭವಿಸಿದೆ. ಹುಲಿಕಟ್ಟಿಯ ಡೊಂಕನಕೆರೆ ಶಿಂಗಾಪುರದ ಕೆರೆಗಳು ತುಂಬಿ ಕೋಡಿಬಿದ್ದು ಕೆಲವು ಹೊಲಗಳು ಜಲಾವೃತಗೊಂಡಿವೆ. ಬಂಕಾಪುರ ಹಳೆಬಂಕಾಪುರ, ಬಾಡ, ನಾರಾಯಣಪುರ, ಸದಾಶಿವಪೇಟೆ, ಬಿಸನಳ್ಳಿ ಗ್ರಾಮಗಳ ಹೊಲಗಳಲ್ಲಿಯೂ ನೀರು ನಿಂತು ಬೆಳೆ ಹಾನಿಯಾಗಿದೆ.

ಜಲಾವೃತಗೊಂಡ ಹುಲಿಕಟ್ಟಿ, ಹೋತನಹಳ್ಳಿ ಹಾಗೂ ಶಿಂಗಾಪುರ ಗ್ರಾಮಗಳಿಗೆ ಎ.ಸಿ. ಹರ್ಷಲ್ ನಾರಾಯಣ, ಶಿಗ್ಗಾವಿ ತಹಶೀಲ್ದಾರ ಚಂದ್ರಶೇಖರ ಗಾಳಿ, ಕಂದಾಯ ನಿರೀಕ್ಷಕ ಆರ್‌.ಎಂ.ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಪುರಸಭೆ ನೈರ್ಮಲ್ಯ ಅಧಿಕಾರಿಗಳು ಕಲಕಂಡಿ, ಕೆನರಾಬ್ಯಾಂಕ್‌ ರಸ್ತೆ, ಕುಂದೂರ ರಸ್ತೆಗಳಲ್ಲಿನ ನೀರನ್ನು ಮೋಟರ್‌ ಮೂಲಕ ತೆರವುಗೊಳಿಸು ಕಾರ್ಯಾಚರಣೆ ನಡೆಸಿ ಸುಗಮ ಸಂಚಾರಕ್ಕೆ ಅನಕೂಲ ಮಾಡಿಕೊಟ್ಟರು.

24 ಗಂಟೆಗಳಲ್ಲಿ 60.4 ಮಿಮೀ ಮಳೆಯಾಗಿದೆ. ಕೋಟೆ ಆವರಣದಲ್ಲಿರು ಸುಮಾರು 4 ಎಕರೆ ಕೆರೆಗೆ ನೀರು ಹರಿದುಬಂದಿರುವುದು ಸುಮಾರು 20 ವರ್ಷಗಳ ದಾಖಲೆ ಮುರಿದಿದೆ.•ಬಸವರಾಜ ಹಿರೇಮಠ, ಖೀಲಾರಿ ಗೋ ಸಂವರ್ಧನ ಕೇಂದ್ರದ ಉಪನಿರ್ದೇಶಕರು

ಕಾಲುವೆಯಲ್ಲಿ ಕೊಚ್ಚಿ ಹೋದ ರೈತ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಧರ್ಮಾ ಜಲಾಶಯದ ಕಾಲುವೆಯಲ್ಲಿ ರೈತನೊಬ್ಬ ಕೊಚ್ಚಿಹೋದ ಘಟನೆ ಹಾನಗಲ್ಲ ತಾಲೂಕಿನ ಶ್ರೀಂಗೇರಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.

ಅದೇ ಗ್ರಾಮದ ಶಿವಪ್ಪ ಸೊಟ್ಟಕ್ಕನವರ(50) ಕೊಚ್ಚಿ ಹೋದ ರೈತ. ಬೆಳಗ್ಗೆ ಗದ್ದೆ ಕೆಲಸಕ್ಕಾಗಿ ಹೋಗಿದ್ದ ಶಿವಪ್ಪ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ನೀರಿನ ಮೋಟಾರ್‌ ತೆಗೆಯಲು ಹೋದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಕೊಚ್ಚಿ ಹೋಗುತ್ತಿದ್ದ ಈತನನ್ನು ರಕ್ಷಿಸಲು ಅಲ್ಲಿದ್ದವರು ನಡೆಸಿದ ಪ್ರಯತ್ನ ವಿಫಲವಾಗಿದೆ.

ಸುದ್ದಿ ತಿಳಿದು ಸವಣೂರು ಉಪವಿಭಾಗಾಧಿಕಾರಿ ಹರ್ಷ ಲಬೋಯಾರ್‌ ನಾರಾಯಣರಾವ ಹಾಗೂ ತಹಶೀಲ್ದಾಲ್ ಎಂ.ಗಂಗಪ್ಪ ಸ್ಥಳಕ್ಕೆ ಆಗಮಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ನೂರಿತ ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದಾರೆ.

92 ಮಿಮೀ ದಾಖಲೆ ಮಳೆ: ಬ್ಯಾಡಗಿ: ಕಳೆದ ಮೂರ್‍ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ರುದ್ರ ನರ್ತನಕ್ಕೆ ಮನೆಗಳು ಕುಸಿದು ನೆಲಕಚ್ಚಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು. ಮಲೆನಾಡ ಭಾಗದಲ್ಲಿನ ಕಾಗಿನೆಲೆ ಮಳೆ ಮಾಪನ ಕೇಂದ್ರದಲ್ಲಿ ಒಟ್ಟು 92 ಮಿಮೀ ಮಳೆ ದಾಖಲಾದರೇ, ಹೆಡ್ಡಿಗೊಂಡ ಗ್ರಾಮದಲ್ಲಿನ ಮಳೆ ಮಾಪನದಲ್ಲಿ ಒಟ್ಟು 90 ಮಿಮೀ ಹಾಗೂ ಬ್ಯಾಡಗಿಯಲ್ಲಿ ಒಟ್ಟು 62 ಮಿಮೀ ಮಳೆಯಾಗಿದೆ.

•ಎಚ್.ಕೆ. ನಟರಾಜ

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

Suicide 3

Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ

Haveri: ಜಾನಪದ ವಿವಿ ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.