ಪಾಪು ಗರ್ಜನೆಯಿಂದ ಉ.ಕ.ಗೆ ಸವಲತ್ತು


Team Udayavani, Feb 3, 2019, 10:07 AM IST

3-february-16.jpg

ರಾಣಿಬೆನ್ನೂರ: ನ್ಯಾಯ, ನಿಷ್ಠುರ, ದಾಕ್ಷೀಣ್ಯಪರ ನಾನಲ್ಲ, ಲೋಕವಿರೋಧಿ ಶರಣ ಯಾರಿಗೂ ಅಂಜುವವನಲ್ಲ ಎಂಬ ಬಸವಣ್ಣನವರ ಮಾತಿಗೆ ಭಾಷ್ಯ ಬರೆದಂತೆ ಬದುಕುತ್ತಿರುವವರು ಪಾಟೀಲ ಪುಟ್ಟಪ್ಪನವರು ಎಂದು ಸಿರಿಗೆರೆ ತರಳಬಾಳು ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಾಡೋಜ ಡಾ| ಪಾಟೀಲ ಪುಟ್ಟಪ್ಪನವರ ಹುಟ್ಟೂರಾದ ತಾಲೂಕಿನ ಹಲಗೇರಿ ಗ್ರಾಮದ ನಾಟಕ ರತ್ನ ದೊಡ್ಡ ಜಟ್ಟೆಪ್ಪನವರ ರಂಗ ಮಂದಿರದಲ್ಲಿ ಜನ್ಮ ಶತಮಾನೋತ್ಸವ ಸಮಿತಿ, ನಾಗರಿಕ ಸೇವಾ ಸಮಿತಿ, ಸ್ವಾಕರವೇ, ವಿಶ್ವ ಗುರು ಬಸವ ಸಮಿತಿ ಆಶ್ರಯದಲ್ಲಿ ಶನಿವಾರ ರಾತ್ರಿ ಹಿರಿಯ ಚೇತನ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣದ ಕನಸು ಕಂಡು ಅದು ಸಾಕಾರಗೊಂಡಾಗ ಸಂಭ್ರಮಿಸಿದವರು. ಆದರೆ, ಅವರೇ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕೆಂದು ಹೇಳಿದರೆಂಬ ಕೂಗು ಎದ್ದಿತ್ತು. ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಲೇ ಬಂದ ಪಾಪು ನಾಡನ್ನು ಇಬ್ಭಾಗ ಮಾಡಬೇಕೆಂಬ ಹುನ್ನಾರವಲ್ಲ. ಗುಟುರು ಹಾಕಿ ನ್ಯಾಯಸಮ್ಮತ ಪಾಲನ್ನು ಧಕ್ಕಿಸುವ ತಂತ್ರ ಎಂಬುದು ಇದೀಗ ಎಲ್ಲರಿಗೂ ತಿಳಿದಿದೆ ಎಂದು ನುಡಿದರು. ಉತ್ತರ ಕರ್ನಾಟಕಕ್ಕೆ ಏನಾದರೂ ಸವಲತ್ತುಗಳು ದೊರೆತಿವೆ ಎಂದರೆ ಅವು ಪಾಪು ಅವರ ಘರ್ಜನೆಯ ಫಲಶೃತಿಗಳೇ ಆಗಿವೆ. ಇಂದು ಅನೇಕ ಬುದ್ದಿವಂತರು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಓದಬೇಕು. ಏಕೆಂದರೆ ಇಂಗ್ಲಿಷ್‌ ಅನ್ನಕೊಡತಕ್ಕಂತಹ ಭಾಷೆ ಕನ್ನಡದಲ್ಲಿ ಓದಿದರೆ ಮಾತ್ರ ನಿಮ್ಮ ಮಕ್ಕಳಿಗೆ ಅನ್ನ ಸಿಗುತ್ತದೆ ಎಂಬ ಭಾವನೆ ಇದೆ ಎಂದರು.

ನಮ್ಮ ಎಲ್ಲ ಜನ ಬೆಂಗಳೂರಿಗೆ ಹೊರಟಿದ್ದಾರೆ. ಇಂಗ್ಲಿಷ್‌ ಅನ್ನ ಕೊಡುವ ಭಾಷೆ ಎನ್ನುವುದಾದರೆ ಇಂಗ್ಲಿಷ್‌ ಓದಿದವರಿಗೆಲ್ಲ ಅನ್ನ ಸಿಕ್ಕಿದೆಯೇ ಅನ್ನೊದು ಪ್ರಶ್ನೆ, ಫ್ರಾನ್ಸ್‌, ಜರ್ಮನಿ, ಚೀನಾ ಈ ಯಾವ ದೇಶಗಳಲ್ಲಿಯೂ ಇಂಗ್ಲಿಷ್‌ ಜನರ ಭಾಷೆಯಾಗಿ ಉಳಿದಿಲ್ಲ. ಇಂಗ್ಲಿಷ್‌ ಭಾಷೆಯ ವ್ಯಾಮೋಹ ನಮಗೆ ಅಂಟಿಕೊಂಡಂತೆ ಬೇರೆ ಯಾವ ದೇಶದಲ್ಲಿಯೂ ಅಂಟಿಕೊಂಡಿಲ್ಲ. ಗ್ರಾಮಾಂತರ ಪ್ರದೇಶದಲ್ಲಿಯೂ ಕೂಡ ಕೂಲಿ ಮಾಡುವವರಾದಿಯಾಗಿ ತಮ್ಮ ಮಕ್ಕಳಿಗೆ ಇಂಗ್ಲಿಷ್‌ ಓದಿಸಬೇಕೆಂಬ ವ್ಯಾಮೋಹ ಅಂಟಿಕೊಂಡಿದೆ ಎಂದರು.

ದೇಶಿಯ ಭಾಷೆಯ ಜ್ಞಾನ ಇರಬೇಕು ಎಂದು ಹೇಳತಕ್ಕವರಿಲ್ಲ. ಇಂಗ್ಲಿಷ್‌ಗೆ ಬೆಲೆ ಕೊಡತಕ್ಕಂತಹ ಜನ ಬರುತ್ತಿದ್ದಾರೆ. ನಿಮಗೆ ಇಂಗ್ಲಿಷ್‌ ಮೇಲೆ ಮೋಹ ಇದ್ದರೆ ಅದನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು. ಮಿಕ್ಕುಳಿದ ಎಲ್ಲ ವಿಷಯಗಳ ಅಭ್ಯಾಸ ಕನ್ನಡದಲ್ಲಿಯೇ ನಡೆಯಬೇಕು. ಇಂಗ್ಲಿಷ್‌ಗೆ ಕೊನೆಯ ಸ್ಥಾನ ಕನ್ನಡಕ್ಕೆ ಅಗ್ರಸ್ಥಾನ ಕೊಡಬೇಕು. ಅದನ್ನು ಬಿಟ್ಟು ಕನ್ನಡಕ್ಕೆ ಕೊನೆಯ ಸ್ಥಾನ ಕೊಡುವುದು ದುಃಖಕರ ಸಂಗತಿಯಾಗಿದೆ ಎಂದರು.

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಮಾತನಾಡಿ, ನಾಡಿನ ನೆಲ, ಜಲ ರಕ್ಷಣೆಗೆ ಹೋರಾಡಿದ ಪಾಪು ಅವರ ಶ್ರಮ ಅವಿಸ್ಮರಣೀಯ. ಶತಮಾನಗಳನ್ನು ಪೂರೈಸಿದ ಪಾಪು ಅವರ ಆಯುಷ್ಯದ ಗುಟ್ಟು ಮಿತ ಆಹಾರವಾಗಿದೆ. ಎಷ್ಟು ದಿನ ಬದುಕಿದ್ದೇವೆ ಎನ್ನುವದಕ್ಕಿಂತ ಹೇಗೆ ಬದುಕಿದ್ದೇವೆ ಎಂಬುದು ಬಹಳ ಮುಖ್ಯ. ಅಂತಹ ಬದುಕು ಸಾಗಿಸಿದ ಪಾಪು ಅವರಂತೆ ಎಲ್ಲರೂ ಬಾಳಿದಾಗ ಜೀವನ ಸಾರ್ಥಕವಾಗುವುದು ಎಂದರು.

ಇದೇ ಸಂದರ್ಭದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು ಮತ್ತು ಅವರ ಕುರಿತು ಶಿಕ್ಷಕರು ಕವನ ವಾಚಿಸಿದರು.

ಸಾನ್ನಿಧ್ಯ ವಹಿಸಿದ್ದ ಗದಗ ಡಂಬಳ ತೊಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ನಾಗರಾಜ ಹಳ್ಳಿಯವರು ನಾಡೋಜ ಡಾ| ಪಾಟೀಲ ಪುಟ್ಟಪ್ಪನವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಸಕ ಬಿ.ಸಿ.ಪಾಟೀಲ, ಮಾಜಿ ಶಾಸಕ ಯು.ಬಿ.ಬಣಕಾರ, ಮಾಜಿ ಶಾಸಕ ಡಾ| ಬಿ.ಜಿ. ಪಾಟೀಲ, ಡಾ| ಬಸವರಾಜ ಕೇಲಗಾರ, ಗ್ರಾಪಂ ಅಧ್ಯಕ್ಷೆ ಲೀಲಾ ಮುದ್ದಪ್ಪಳವರ, ಜಿಪಂ ಸದಸ್ಯ ಶಿವಾನಂದ ಕನ್ನಪ್ಪಳವರ, ಎಪಿಎಂಸಿ ಅಧ್ಯಕ್ಷ ಸಿದ್ಧಲಿಂಗಪ್ಪ ಕುಡಗೊಲ, ಮಲ್ಲೇಶಪ್ಪ ಅರಕೇರಿ, ಉಮೇಶ ಗುರುಲಿಂಗಪ್ಪಗೌಡ್ರ, ವೀರನಗೌಡ ಪೊಲೀಸಗೌಡ್ರ, ನಂದೀಶಪ್ಪ ಗೌಡ್ರ, ಶೇಖಪ್ಪ ನರಸಗೊಂಡರ ಸೇರಿದಂತೆ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಆಗಿನದ್ದು ಅಸಲಿ, ಈಗಿನದ್ದು ನಕಲಿ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್‌-ಸವಾಲಾದ ಶುದ್ಧ ನೀರು ಪೂರೈಕೆ…

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್‌ ರಂಗಮಂದಿರ ನಿರುಪಯುಕ್ತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.