ಪಡಿತರ ಪಡೆಯುವಾಗ ಸುರಕ್ಷಿತ ಅಂತರವಿರಲಿ
Team Udayavani, Apr 10, 2020, 6:01 PM IST
ಸವಣೂರು: ಎಸ್‌ಬಿಐ ಬ್ಯಾಂಕ್ ಶಾಖೆಗೆ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್ವರ ನೇತೃತ್ವದ ಅ ಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಿಗೆ ಸೂಚನೆ ನೀಡಿತು.
ಸವಣೂರು:ಕೋವಿಡ್ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರು ಪಡಿತರವನ್ನು ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್ವರ ತಿಳಿವಳಿಕೆ ಹೇಳಿದರು.
ಪಟ್ಟಣ ಸೇರಿದಂತೆ ತಾಲೂಕಿನ ತೆಗ್ಗಿಹಳ್ಳಿ, ಹತ್ತಿಮತ್ತೂರ, ಯಲವಿಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪಡಿತರ ವಿತರಣೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳಿಗೆ ಹಾಗೂ ವಿವಿಧ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಆಹಾರ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರದಿಂದ 2 ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲಾಗುತ್ತಿದೆ. ಎಲ್ಲರಿಗೂ ಸಮರ್ಪಕವಾಗಿ ಹಂಚಲಾಗುವುದು. ಸಾರ್ವಜನಿಕರು ಒಮ್ಮೆಲೇ ಪಡಿತರ ಕೇಂದ್ರಕ್ಕೆ ಮುಗಿಬೀಳದೆ, ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಂಗಡಿ ಮಾಲೀಕರು ಪಡಿತರ ಚೀಟಿ ಪರಿಶೀಲನೆ ಮಾಡಿ ಚೀಟಿಗೆ ಅನುಗುಣವಾಗಿ ಪಡಿತರ ವಿತರಣೆ ಮಾಡಬೇಕು. ನಂತರದಲ್ಲಿ ಅದನ್ನು ಆನ್‌ಲೈನ್‌ನಲ್ಲಿ ಎಂಟ್ರಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಅಂಗಡಿಗಳನ್ನು ಸೀಜ್ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ, ಕೆವಿಜಿ ಬ್ಯಾಂಕ್ ಹಾಗೂ ಎಸ್ ಬಿಐ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ವ್ಯವಸ್ಥಾಪಕರೊಂದಿಗೆ ಚರ್ಚೆ ನಡೆಸಿದರು. ಗ್ರಾಹಕರಿಗೆ ತೊಂದರೆಯಾಗದಂತೆ ಹಾಗೂ ಬಹುಬೇಗನೆ ಅವರ ವ್ಯವಹಾರ ಮುಗಿಸಿಕೊಂಡು ಮನೆಗಳಿಗೆ ತೆರಳುವಂತೆ
ತಿಳಿಸಬೇಕು. ಹೆಚ್ಚಿನ ಕೌಂಟರ್‌ಗಳನ್ನು ತೆರೆದು ಗ್ರಾಹಕರೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಎಎಸ್‌ಪಿ ರಾಮಚಂದ್ರ ಬಾಲದಂಡಿ, ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ, ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ, ಇಒ ಪಿ. ಮುನಿಯಪ್ಪ, ಎಸ್.ಸಿ. ವಣಗೇರಿ, ಶಶಿಧರ ಜಿ.ಎಂ., ನಾಗರಾಜ ಸೂರ್ಯವಂಶಿ, ಡಿ.ಎಂ. ಪಾಟೀಲ, ರವಿ ಮಾಚಕ್ಕನೂರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hamas; 15 ತಿಂಗಳ ಬಳಿಕ ಇಸ್ರೇಲ್‌ಗೆ ಮರಳಿದ ಒತ್ತೆಯಾಳಾಗಿದ್ದ 4 ಮಹಿಳಾ ಯೋಧರು
BBK11: ಬಿಗ್ ಬಾಸ್ ಫಿನಾಲೆ ಓಟದಿಂದ ಹೊರಬಿದ್ದ ಪ್ರಬಲ ಸ್ಪರ್ಧಿ- ಶಾಕಿಂಗ್ ಎಂದ ವೀಕ್ಷಕರು
Republic Day 2025:ದೆಹಲಿ ಪರೇಡ್-ಗಣರಾಜ್ಯೋತ್ಸವ ಮೆರವಣಿಗೆ ಆಯೋಜನೆ ಹೊಣೆಗಾರಿಕೆ ಯಾರದ್ದು?
Union Budget ; ಕರ್ನಾಟಕಕ್ಕೆ ನ್ಯಾಯ ಸಿಗಬೇಕು : ಡಿ.ಕೆ.ಶಿವಕುಮಾರ್ ಮನವಿ
Food for Thought…ಎಲ್ಲರ ಮನೆ ದೋಸೆ ತೂತು…ಎಂದಾದರೆ