ನಶಿಸುತ್ತಿರುವ ನೈಜ ಸಂಸ್ಕೃತಿಯ ಕಲೆ ಉಳಿಸಿ
Team Udayavani, Jan 19, 2020, 2:41 PM IST
ರಾಣಿಬೆನ್ನೂರ: ಇತಿಹಾಸದಲ್ಲಿ ನಮ್ಮ ಕಲಾ ಪರಂಪರೆಗೆ ಬಹುದೊಡ್ಡ ಗೌರವ ಮಾನ, ಮನ್ನಣೆ ಇತ್ತು ಆಧುನಿಕ ಬದುಕಿನಲ್ಲಿ ನೈಜ ಸಂಸ್ಕೃತಿಯ ಕಲೆ ನಶಿಸಿ ಹೊಗುತ್ತಿದೆ. ನಾಟಕಗಳು ಮತ್ತು ಕಲಾವಿದರು ಉಳಿದು ಬೆಳೆಯಬೇಕಾದರೆ, ಜನಾಶ್ರಯದ ಅಗತ್ಯವಿದೆ ಎಂದು ಪ್ರಗತಿಪರ ರೈತ ವಿಷ್ಣಪ್ಪ ಕಂಬಳಿ ಹೇಳಿದರು.
ತಾಲೂಕಿನ ಹಳೆಹೊನ್ನತ್ತಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಕಮಿಟಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಕಲಾವಿದೆ ಯಶೋಧಾ ಗುಡಗುಡಿ ತಂಡ ಪ್ರದರ್ಶಿಸಿದ “ಸಿಡಿದೆದ್ದ ಸೂರ್ಯಚಂದ್ರ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿ ನಿತ್ಯ ನಿರಂತರ ನಾಟಕಗಳುಜೀವಂತವಾಗಿದ್ದವು. ಅದಕ್ಕೆ ಅಂದಿನ ಜನರು ಅತ್ಯಂತ ಪ್ರೀತಿ-ವಿಶ್ವಾಸದಿಂದ ಗೌರವ ನೀಡುವ ಜತೆಗೆ ಸ್ವತಃ ಹಣವನ್ನು ಹಾಕಿಕೊಂಡು ನಾಟಕ ಪ್ರದರ್ಶನ ಮಾಡುವ ಪರಂಪರೆ ಇಲ್ಲಿತ್ತು. ಬದಲಾದ ವಾತಾವರಣದಲ್ಲಿ ನಿಜವಾದ ಕಲೆಗಳುಮಾಯವಾಗುತ್ತಿವೆ. ಯಶೋಧಾ ಗುಡಗುಡಿ ತಂಡದವರು ಇಂತಹ ನಾಟಕ ಕಲೆಯನ್ನು ಪ್ರದರ್ಶಿಸುತ್ತಿರುವುದು ಕಲೆ ಜೀವಂತಿಕೆಯ ಲಕ್ಷಣವಾಗಿದೆ ಎಂದರು.
ಮಂಜಪ್ಪ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮುಖಂಡರಾದ ಮಲಕಪ್ಪ ಬೆನ್ನೂರು, ಹಾಲಪ್ಪ ಮಾಗನೂರ, ಚಿತ್ರಶೇಖರ ತಿಮ್ಮೇನಹಳ್ಳಿ, ಮಂಜು ಧೂಳಪ್ಪನವರ, ದುರ್ಗಪ್ಪ ನಿಟ್ಟೂರು, ನಾಗಪ್ಪ ಭಜಂತ್ರಿ ಸೇರಿದಂತೆ ತಂಡದ ಕಲಾವಿದರು. ಗ್ರಾಮದ ಅನೇಕ ಮುಖಂಡರು ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.