![Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಬೇಡಿಕೆ](https://www.udayavani.com/wp-content/uploads/2025/02/shivamogga-1-415x231.jpg)
![Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಬೇಡಿಕೆ](https://www.udayavani.com/wp-content/uploads/2025/02/shivamogga-1-415x231.jpg)
Team Udayavani, Oct 25, 2024, 1:20 PM IST
ಹಾವೇರಿ: ಶಿಗ್ಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ದ ಟಿಕೆಟ್ ವಂಚಿತ ಅಜ್ಜಂಫೀರ್ ಖಾದ್ರಿ ಆರೋಪ ಮಾಡಿದ್ದು, ಯಾಸಿರ್ ಖಾನ್ ಬಿಜೆಪಿ ಏಜೆಂಟ್ ಎಂದು ಹೇಳಿದ್ದಾರೆ.
ಶುಕ್ರವಾರ (ಅ.25) ಸುದ್ದಿಗಾರರೊಂದಿಗೆ ಮಾತನಾಡಿದ ಖಾದ್ರಿ, ಸಿದ್ದರಾಮಯ್ಯ ಸಾಹೇಬ್ರು, ಸಲೀಂ ಅಹ್ಮದ್ ಸೇರಿದಂತೆ ಎಲ್ಲ ನಾಯಕರು ನನಗೆ ಟಿಕೆಟ್ ಕೊಡುವಂತೆ ಹೇಳಿದ್ದರು. ಶಾಸಕ ಶ್ರೀನಿವಾಸ್ ಮಾನೆ ಕೂಡಾ ನನಗೆ ಟಿಕೆಟ್ ಕೊಡಿ ಎಂದು ಹೇಳಿದ್ದರು. ಯಾಸೀರ್ ಖಾನ್ ಪಠಾಣ್ ರನ್ನು ಬಲಿ ಕಾ ಬಕ್ರಾ ಮಾಡೋಣ ಎಂದು ಶ್ರೀನಿವಾಸ್ ಮಾನೆ ನನ್ನ ಬಳಿ ಹೇಳಿದ್ದರು. ಆದರೆ ಯಾಸೀರ್ ಖಾನ್ ಪಠಾಣ್ ಗೆ ಟಿಕೆಟ್ ಸಿಕ್ಕಿದೆ. ಯಾಸೀರ್ ಖಾನ್ ಪಠಾಣ್ ಒಬ್ಬ ರೌಡಿ ಶೀಟರ್, ಗೂಂಡಾ. ಹಿಂದೆ ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡಿದವನು ಬಂಕಾಪುರದಲ್ಲಿ ಅವರ ಮಾವನ ಮನೆ ಇದೆ. ಅವನು, ಅವರ ಮಾವ ಎಲ್ಲಾ ಬಿಜೆಪಿ ಪರ ಕೆಲಸ ಮಾಡಿದವರು. ಯಾಸೀರ್ ಖಾನ್ ಪಠಾಣ್ ಬೊಮ್ಮಾಯಿ ಏಜೆಂಟ್. ಹಿಂದೆ ಬಿಜೆಪಿ ಪರ ಕೆಲಸ ಮಾಡಿದ್ದ ಎಂದು ಕಿಡಿಕಾರಿದ್ದಾರೆ.
ನನ್ನ ಮನವೊಲಿಕೆಗೆ ಕಾಂಗ್ರೆಸ್ ಮುಖಂಡರಿಂದ ಕರೆ ಬಂದಿದೆ. ಆದರೆ ಯಾರು ಕರೆ ಮಾಡಿದರೆಂದು ಹೇಳಲಾಗದು ಎಂದ ಅವರು, ಕಳೆದ ಬಾರಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹದಮ್ ಯೂಸೂಪ್ ಸವಣೂರು ಹೆಸರು ಘೋಷಿಸಿ ಕೊನೆಗೆ ಯಾಸೀರ್ ಖಾನ್ ಪಠಾಣ್ ಗೆ ಟಿಕೆಟ್ ನೀಡಿದಂತೆ ಈಗಲೂ ಮಾಡಲಿ. ಯಾಸೀರ್ ಖಾನ್ ಪಠಾಣ್ ಬದಲಿಸಿ ನನ್ನನ್ನು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ. ಇಲ್ಲದಿದ್ದರೆ ಬೆಂಬಲಿಗರ ಅಭಿಪ್ರಾಯ ಕೇಳಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅಜ್ಜಂಫೀರ್ ಖಾದ್ರಿ ಹೇಳಿದರು.
Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಡಿಮಾಂಡ್
Kunigal: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ
RTC-Aadhaar ಪ್ರತೀ ಜೋಡಣೆಗೆ ವಿಎಗಳಿಗೆ 1 ರೂ.!
B.Y.Vijayendra: ನನಗೆ ನನ್ನ ತಂದೆಯೇ ರಾಜಕೀಯ ಗುರು; ಬಿ.ವೈ.ವಿಜಯೇಂದ್ರ
145 ವರ್ಷಗಳ ಆಸ್ತಿ ವ್ಯಾಜ್ಯ ರಾಜಿ ಸಂಧಾನದಲ್ಲಿ ಇತ್ಯರ್ಥ
Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಡಿಮಾಂಡ್
Kunigal: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Robbery Case: ಅಸಲಿ ಪೊಲೀಸ್‌ನ ನಕಲಿ ಆಟವನ್ನು ಭೇದಿಸಿದರು!
You seem to have an Ad Blocker on.
To continue reading, please turn it off or whitelist Udayavani.