![UDP-DC](https://www.udayavani.com/wp-content/uploads/2024/12/UDP-DC-415x249.jpg)
ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ
Team Udayavani, Jan 18, 2020, 2:57 PM IST
![hv-tdy-1](https://www.udayavani.com/wp-content/uploads/2020/01/hv-tdy-1-12-620x207.jpg)
ಹಾವೇರಿ: ಹಾವೇರಿ ಪೌರತ್ವ ತಿದ್ದುಪಡಿ ಕಾಯ್ದೆ-2019 ಬೆಂಬಲಿಸಿ ನಗರದ ಜಿಎಚ್ ಕಾಲೇಜ್ ವಿದ್ಯಾಲಯದ ಮುಂಭಾಗದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಜ ಕಲಕೋಟಿ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರೋಧ ಪಕ್ಷಗಳು ಸುಳ್ಳು ಮಾಹಿತಿ ನೀಡುವ ಮೂಲಕ ರಾಷ್ಟ್ರದ ಅಲ್ಪಸಂಖ್ಯಾತರಲ್ಲಿ ಬಿಜೆಪಿ ಕುರಿತು ದ್ವೇಷ ಭಾವನೆ ಮೂಡಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ಭಾರತೀಯ ಮುಸ್ಲಿಮರಿಗೆ ಕಿಂಚಿತ್ತೂ ತೊಂದರೆ ಇಲ್ಲ ಎಂದರು.
ಇಂದಿನ ವಿದ್ಯಾರ್ಥಿಗಳು ಸರ್ಕಾರ ಜಾರಿಗೆ ತರುವ ಕಾಯ್ದೆ ಹಾಗೂಯೋಜನೆಗಳ ಕುರಿತು ಸಂಪೂರ್ಣ ತಿಳಿದುಕೊಂಡು ಸಮಾಜದ ಇತರರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಅಭಿಯಾನದ ಜಿಲ್ಲಾ ಸಂಚಾಲಕ ಡಾ| ಸಂತೋಷ ಆಲದಕಟ್ಟಿ, ಪ್ರವೀಣ ಸವಣೂರು, ಸತೀಶ ತಿಮ್ಮಣ್ಣನವರ, ವಿವೇಕಾನಂದ ಇಂಗಳಗಿ, ನಾಗರಾಜ ಹುರುಳಿಕೊಪ್ಪಿ, ಶಶಿ ಮುಗದೂರು,ನಿಖೀಲ್ ದೊಗ್ಗಳ್ಳಿ, ಸುನೀಲ ರಾಯ್ಕರ್, ಕಿರಣ ಕೋಣನವರ ಇತರರು ಇದ್ದರು
ಟಾಪ್ ನ್ಯೂಸ್
![UDP-DC](https://www.udayavani.com/wp-content/uploads/2024/12/UDP-DC-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.