ವಿದ್ಯಾರ್ಥಿಗಳಲ್ಲಿ ಕಠಿಣ ಶ್ರಮ-ಏಕಾಗ್ರತೆ ಅಗತ್ಯ

ಅಮೂಲ್ಯ ಸಮಯ ವ್ಯರ್ಥ ಮಾಡದೆ ಯಶಸ್ವಿ ಜೀವನ ರೂಪಿಸಿಕೊಳ್ಳಿ

Team Udayavani, May 23, 2019, 5:03 PM IST

haveri-tdy-1..

ಹಿರೇಕೆರೂರ: ಮಾಸೂರು ಗ್ರಾಮದ ಸರ್ವಜ್ಞ ಫೌಂಡೇಶನ್‌ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ ರಾಮಣ್ಣ ಕೆಂಚಳ್ಳೇರ ಮಾತನಾಡಿದರು.

ಹಿರೇಕೆರೂರ: ವಿದ್ಯಾರ್ಥಿಗಳು ಕಠಿಣ ಶ್ರಮ ಹಾಗೂ ಏಕಾಗ್ರತೆಯಿಂದ ಓದಿ ವ್ಯಾಸಂಗ ಮಾಡಿ, ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೇಸಾಯ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಚಿದಾನಂದ ಮನ್ಸೂರ ಹೇಳಿದರು.

ಮಾಸೂರು ಗ್ರಾಮದ ಸರ್ವಜ್ಞ ಫೌಂಡೇಶನ್‌ ದ್ವಿತೀಯ ವಾರ್ಷಿಕೋತ್ಸವ, ಕಂಪ್ಯೂಟರ್‌ ತರಬೇತಿ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಸರ್ವಜ್ಞ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಅದನ್ನು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರು ಸಾವಯವ ಕೃಷಿಗೆ ಆದ್ಯತೆ ಕೊಡಬೇಕು. ರಸಗೊಬ್ಬರ ನಿಗದಿತ ಪ್ರಮಾಣದಲ್ಲಿ ಬಳಸಿದ್ದೇ ಆದರೆ ಅಧಿಕ ಇಳುವರಿ ಗಳಿಸಬಹುದು ಎಂದು ಸಲಹೆ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಸಮಾಜದ ಅಭ್ಯುದಯಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಕೊಡುಗೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಸರ್ವಜ್ಞ ಫೌಂಡೇಶನ್‌ ನಿಂದ ಉಚಿತ ಕಂಪ್ಯೂಟರ್‌ ಸಾಕ್ಷರತೆಯನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ನೀಡುತ್ತಿದೆ. ಇದಲ್ಲದೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ರೈತ ಸಂಘದ ಕಾರ್ಯಕರ್ತರು ಪ್ರತಿ ಹೋರಾಟಗಳಿಗೆ ಸ್ಪಂದಿಸಿ, ಭಾಗಿಯಾಗಿದ್ದಾರೆ. ತಳಮಟ್ಟದಿಂದ ಇಡೀ ರಾಜ್ಯದಲ್ಲಿ ಹಾವೇರಿ ಜಿಲ್ಲಾ ರೈತ ಸಂಘ ದೊಡ್ಡ ಪ್ರಮಾಣದಲ್ಲಿ ಗುರುತಿಸಿಕೊಂಡಿದೆ ಎಂದರೆ ಅದಕ್ಕೆ ಕಾರ್ಯಕರ್ತರೇ ಕಾರಣ. ಆದ್ದರಿಂದ ನನಗೆ ಸಂದ ಈ ಪ್ರಶಸ್ತಿಗಳೆಲ್ಲ ರೈತ ಸಂಘದ ಕಾರ್ಯಕರ್ತರಿಗೆ ಸಲ್ಲುತ್ತವೆ ಎಂದು ಹೇಳಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹಾಗೂ ಮಾಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಶಂಕರನಾಯ್ಕ ಲಮಾಣಿ ಅವರಿಗೆ ಸರ್ವಜ್ಞ ಶ್ರೀ ನೀಡಿ ಗೌರವಿಸಲಾಯಿತು.

ಮುಖ್ಯಶಿಕ್ಷಕ ಶಂಕರನಾಯ್ಕ ಲಮಾಣಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಈರನಗೌಡ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಶಂಕರಗೌಡ ಶಿರಗಂಬಿ, ದೇವಿರಪ್ಪ ಪೂಜಾರ, ಮಹಮ್ಮದ ಗೌಸ್‌ ಪಾಟೀಲ, ರತ್ನಮ್ಮ ಪಾಟೀಲ, ಪ್ರಭುಗೌಡ ಪ್ಯಾಟಿ, ಗಂಗನಗೌಡ ಮರಿಗೌಡ್ರ, ಮಂಜನಗೌಡ ಚನ್ನಗೌಡ್ರ, ರಾಜು ಮುತ್ತಗಿ, ಶಂಭು ಮುತ್ತಗಿ, ಸರ್ವಜ್ಞ ಫೌಂಡೇಶನ್‌ ಕಾರ್ಯದರ್ಶಿ ನಾಗನಗೌಡ ಪಾಟೀಲ, ನಿರ್ದೇಶಕರಾದ ಬಸವರಾಜ ಹೊನ್ನಾಳಿ, ಚಂದ್ರಹಾಸ ನಾಗೇನಹಳ್ಳಿ, ರೇವಣಪ್ಪ ಸಿದ್ದಲಿಂಗಪ್ಪನವರ, ಜಯಪ್ಪ ಹೊನ್ನಾಳಿ, ಸದಸ್ಯರಾದ ಗಣೇಶ ಪಾಟೀಲ, ಆನಂದಪ್ಪ ಬೇವಿನಮರದ, ಪಾಲಾಕ್ಷಪ್ಪ ಪಾಟೀಲ, ಆಶಾ ಶೆಟ್ಟರ ಗ್ರಾಮಸ್ಥರು ಹಾಜರಿದ್ದರು.

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

CM-Siddu–Hubballi

By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.