ಜನತಾ ಕರ್ಫ್ಯೂಗೆ ಜನ ಬೆಂಬಲ
Team Udayavani, Mar 23, 2020, 6:25 PM IST
ರಾಣಿಬೆನ್ನೂರ: ದೇಶದಲ್ಲಿ ಕೋವಿಡ್ 19 ವೈರಸ್ ಮಹಾಮಾರಿ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ನಗರ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ರವಿವಾರ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಮನೆಯಲ್ಲಿಯೇ ಉಳಿದು ಸಂಪೂರ್ಣ ಯಶಸ್ವಿಯಾಯಿತು.
ಬೆಳಗ್ಗೆ 7 ಗಂಟೆಯಿಂದಲೇ ದಿನವೀಡಿ ಬಸ್, ಆಟೋ, ಮತ್ತಿತರರ ವಾಹನಗಳು ಸಂಚರಿಸಲಿಲ್ಲ, ಕೆಲವೊಂದು ಪ್ರಯಾಣಿಕರಿಗೆ ವಾಹನಗಳಿಲ್ಲದೆಸಂಚಾರಕ್ಕೆ ಅಡತಡೆಯಾಗಿದ್ದು ಕಂಡು ಬಂದಿತು. ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು ರಜೆ ಇದ್ದ ಪ್ರಯುತ್ತ ವಿದ್ಯಾರ್ಥಿಗಳು ಕಂಡು ಬರಲಿಲ್ಲ, ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳು ಬೆಂಬಲ ವ್ಯಕ್ತಪಡಿಸಿದ್ದವು.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಜನತಾ ಕರ್ಫ್ಯೂವಿಗೆ ಬೆಂಬಲ ನೀಡಲು ಸರ್ವರೂ ಮನೆಯಿಂದ ಹೊರಬರಬಾರದು ಎಂದು ಡಂಗೂರ ಸಾರಿದ್ದರಿಂದ ಯಾರೊಬ್ಬರೂ ಮನೆಯಿಂದ ಹೊರಗೆ ಬರಲಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಬಸ್ ನಿಲ್ದಾಣ ಮತ್ತು ಡಿಪೋದಲ್ಲಿ ಬಸ್ಸುಗಳು ಕಾಣಲಿಲ್ಲ, ಎಲ್ಲ ಬಸ್‌ಗಳನ್ನು ಡಿಪೋದಲ್ಲಿಯೇ ನಿಂತಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಈ ಮೊದಲೇ ಜನತಾ ಕರ್ಫ್ಯೂ ಘೋಷಣೆಯಾದ್ದರಿಂದ ಪ್ರಯಾಣಿಕರು ಕಂಡು ಬರಲಿಲ್ಲ, ಹಾಗಾಗಿ ಜನರು ಮನೆಯಿಂದ ಹೊರಗಡೆ ಬರದೆ ಜನತಾ ಕರ್ಫ್ಯೂವಿಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಎಪಿಎಂಸಿ ದನದ ಮಾರುಕಟ್ಟೆ, ನೆಹರು ಮತ್ತು ದೊಡ್ಡಪೇಟೆ ತರಕಾರಿ ಮಾರುಕಟ್ಟೆ, ದಲಾಳ್ಳಿ ಅಂಗಡಿಗಳು, ಸರಕಾರಿ ಕಚೇರಿಗಳು, ಅಂಗಡಿ-ಮುಗ್ಗಟ್ಟುಗಳು, ಚಲನಚಿತ್ರ ಮಂದಿರಗಳು, ಹೋಟೆಲ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು, ಸಾರ್ವಜನಿಕ ಆಸ್ಪತ್ರೆ ಹೊರತು ಪಡಿಸಿದರೆ, ಖಾಸಗಿ ಆಸ್ಪತ್ರೆಗಳು, ಕಿರಾಣಿ, ಬಟ್ಟೆ ಮತ್ತಿತರ ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ನಗರ ಬಿಕೋ ಎನ್ನುತ್ತಿತ್ತು. ಜನಜೀವನ ಎಂದಿನಂತೆ ಸಹಜವಾಗಿ ಕಂಡು ಬರಲಿಲ್ಲ.
ರೈಲು ನಿಲ್ದಾಣ, ಅಂಚೆ ವೃತ್ತ ಮತ್ತಿತರ ಜನನಿಬೀಡು ಪ್ರದೇಶಗಳಲ್ಲಿ ಜನಜಂಗುಳಿ ಕಂಡು ಬರಲಿಲ್ಲ, ಒಟ್ಟಾರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಜನರ ಸಂಚಾರ ಕಂಡು ಬರದೆ ಜನತಾ ಕರ್ಫ್ಯೂ ಯಶಸ್ವಿಯಾಗಿದ್ದು, ಕಂಡು ಬಂದಿತು. ಕೋವಿಡ್ 19 ವೈರಸ್ ಮಹಾಮಾರಿಗೆ ಬೆದರಿದ ಜನರು ಸ್ವಯಂಪ್ರೇರಿತರಾಗಿ ಮನೆಯ ಹೊರಗೆ ಕಂಡು ಬರಲಿಲ್ಲ. ವರ್ತಕರು, ಹಮಾಲರು, ವ್ಯಾಪಾರಸ್ಥರು, ಬಾರ್ ಗಳು, ರೈತ ಸಂಘಗಳು, ಆಟೋ ಸಂಘ, ಕನ್ನಡಪರ ಸಂಘಟನೆಗಳು, ಹೋಟೆಲ್ ಉದ್ಯಮಿ, ಜವಳಿ, ಬಂಗಾರದ ಅಂಗಡಿಗಳ ಸಂಘಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬೆಂಬಲ ನೀಡಿದ್ದರಿಂದ ಯಶಸ್ವಿಯಾಗಿ ಸಾಕ್ಷಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.