ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡಿದ ಶಿಕ್ಷಕರು: ಐವರ ಬಂಧನ
Team Udayavani, Jun 25, 2020, 5:28 PM IST
ಹಿರೇಕೆರೂರು( ಹಾವೇರಿ): ವರ್ಷಪೂರ್ತಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಿ ಪರೀಕ್ಷೆಗೆ ತಯಾರಿ ಮಾಡಿದ ಶಿಕ್ಷಕರು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡದೇ ಬರೆದು ಉತ್ತಮ ಅಂಕ ಗಳಿಸಬೇಕೆಂದು ಬಯಸುತ್ತಾರೆ. ಆದರೆ ಅಪವಾದ ಎಂಬಂತೆ ಶಿಕ್ಷಕರೇ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ, ಸಿಕ್ಕಿಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಿರೇಕೆರೂರುರಿನ ಸಂಗಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಅಕ್ರಮವಾಗಿ ಪ್ರವೇಶ ಮಾಡಿ, ನಕಲು ಮಾಡಿಸಲು ಪ್ರಯತ್ನ ಮಾಡಿದ ಆರೋಪದ ಮೇಲೆ ನಾಲ್ವರು ಶಿಕ್ಷಕರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿಕ್ಷಕರಾದ ಜಗದೀಶ ಶಿವಪ್ಪನವರ, ಮನೋಹರ ಬಿ.ಆರ್., ಗುತ್ತೆಪ್ಪ ಬಾಳಂಬೀಡ ಹಾಗೂ ಶಿವಯೋಗಿ ರಾಗಿ ಬಂಧನಕ್ಕೆ ಒಳಗಾದವರು.
‘ಈ ನಾಲ್ವರು ಶಿಕ್ಷಕರು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದ ಮೇಲೆ ಇದ್ದವರಲ್ಲ. ನಾನು ದಿಢೀರ್ ಭೇಟಿ ನೀಡಿದ ಸಂದರ್ಭ ಇವರು ಓಡಿ ಹೋಗಲು ಯತ್ನಿಸಿದರು. ತಕ್ಷಣ ಅವರನ್ನು ತಡೆದು ವಿಚಾರಣೆ ನಡೆಸಿದಾಗ, ಅವರ ಬಳಿ ದ್ವಿತೀಯ ಭಾಷಾ ಪತ್ರಿಕೆಗೆ ಸಂಬಂಧಿಸಿದ ನಕಲು ಚೀಟಿಗಳು ಇದ್ದವು. ಹಾಗಾಗಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದೇನೆ ಎಂದು ತಹಶೀಲ್ದಾರ್ ಆರ್.ಎಚ್. ಭಾಗವಾನ್ ತಿಳಿಸಿದರು.
ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ನಾಗರಾಜ ಸುಂಕಾಪುರ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.