ಭೋದನೆ ಬಹಿಷ್ಕರಿಸಿ ಪ್ರತಿಭಟನೆಗಿಳಿದ ಶಿಕ್ಷಕರು
•ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಲು ಒತ್ತಾಯ
Team Udayavani, Jul 3, 2019, 10:20 AM IST
ಬ್ಯಾಡಗಿ: ಕಲ್ಲೇದೇವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೈಗೆ ಕಪ್ಪುಪಟ್ಟಿ ಧರಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು.
ಬ್ಯಾಡಗಿ: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸದಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಕೈಗೆ ಕಪ್ಪುಪಟ್ಟಿ ಧರಿಸಿ, 6-7 ನೇ ತರಗತಿ ಪಾಠ ಬೋಧನೆ ಬಹಿಷ್ಕರಿಸಿ ಹಠಾತ್ ಪ್ರತಿಭಟನೆ ನಡೆಸಿರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆಯ ಮೇರೆಗೆ ಶಿಕ್ಷಕರು ದಿಢೀರ್ ನಿರ್ಧಾರ ಕೈಗೊಂಡಿದ್ದು, ಅನುಭವ ಮತ್ತು ಅರ್ಹತೆ ಪರಿಗಣಿಸಿ ವೇತನ ಪರಿಷ್ಕರಣೆ ಮತ್ತು ಪದೋನ್ನತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಶಿಕ್ಷಕರು ದೂರಿದರು.
ಶಿಕ್ಷಕರ ಪ್ರತಿಭಟನೆಯಿಂದಾಗಿ ತಾಲೂಕಿನ ಯಾವುದೇ ಪ್ರಾಥಮಿಕ ಶಾಲೆಗಳಲ್ಲಿ (ಇಂಗ್ಲಿಷ್, ಸಮಾಜ, ವಿಜ್ಞಾನ, ಗಣಿತ) ಇನ್ನಿತರ ಪಾಠಗಳು ನಡೆಯದೆ ಮಕ್ಕಳು ಶಾಲೆಯಿಂದ ಹೊರಗುಳಿದರು.
ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮಹೇಶ್ ನಾಯಕ್, ಪ್ರಾಥಮಿಕ ಶಾಲೆಯಲ್ಲಿ ನೇಮಕವಾಗಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ರಾಜ್ಯದ ಇಂತಹ ಸುಮಾರು 80 ಸಾವಿರಕ್ಕೂ ಅಧಿಕ ಶಿಕ್ಷಕರು ಪದವೀಧರರಾಗಿದ್ದೇವೆ. ಈ ವರೆಗೂ ನಮ್ಮ ಅನುಭವ ಪಡೆದುಕೊಂಡಿರುವ ಸರ್ಕಾರ 6 ಮತ್ತು 7 ತರಗತಿಗಳಿಗೂ ಪಾಠಗಳನ್ನು ಹೇಳುವಂತೆ ಸೂಚನೆ ನೀಡಿತ್ತು. ಇಲಾಖೆ ಸೂಚನೆ ಮೇರೆಗೆ ಪಾಠಗಳನ್ನು ಹೇಳುತ್ತಿದ್ದಾರೆ. ಪರ್ಯಾಯವಾಗಿ ಪ್ರೌಢಶಾಲೆ ಶಿಕ್ಷಕರಿಂದ ಹಿಡಿದು ಜಿಲ್ಲಾ ಉಪನಿರ್ದೇಶಕವರೆಗೂ ಪದೋನ್ನತಿ ನಿವೃತ್ತಿ ಹೊಂದಿದ ಉದಾಹರಣೆಗಳಿವೆ ಎಂದರು.
ಸರ್ಕಾರಿ ನೌಕರರ ಸಂಘದ ಸದಸ್ಯ ಮಹದೇವ ಕರಿಯಣ್ಣನವರ ಮಾತನಾಡಿ, ಈ ವರೆಗೂ ಪದವೀಧರ ಶಿಕ್ಷಕರನ್ನು ಮನ ಬಂದಂತೆ ದುಡಿಸಿಕೊಂಡು ಇದೀಗ ದಿಢೀರ್ ಹಿಂಬಡ್ತಿ ಮಾದರಿಯಲ್ಲಿ ನಮ್ಮ ಸೇವೆಯನ್ನು ಕೇವಲ 1 ರಿಂದ 5 ತರಗತಿಗೆ ಸೀಮಿತಗೊಳಿಸಲಾಗಿದೆ. ರಾಜ್ಯದ ಸುಮಾರು 80 ಸಾವಿರ ಶಿಕ್ಷಕರಿಗೆ ಅನ್ಯಾಯವಾಗಿದ್ದು, ಹೈಸ್ಕೂಲ್ ಕಾಲೇಜ್ ಇನ್ನಿತರ ಕಡೆಗಳಿಗೆ ಮುಂಬಡ್ತಿ ನಿರೀಕ್ಷೆಯಲ್ಲಿದ್ದ ನಮ್ಮೆಲ್ಲರ ಆಸೆಗೆ ಇಲಾಖೆ ತಣ್ಣೀರೆರಚಿದೆ ಎಂದು ಆರೋಪಿಸಿದರು.
ಪದವೀಧರ ಶಿಕ್ಷಕ ಶಂಕರ್ ಕಿಚಡಿ ಮಾತನಾಡಿ, ನಮ್ಮಲ್ಲಿರುವ ಅನುಭವ ಮತ್ತು ಅರ್ಹತೆ ಎರಡೂ ಇದ್ದರೂ ವೇತನ ಪರಿಷ್ಕರಣೆ ಮತ್ತು ಪದೋನ್ನತಿ ನೀಡಲು ಹಿಂದೇಟು ಹಾಕುತ್ತಿರುವುದು ದುರ್ದೈವದ ಸಂಗತಿ. ಕೂಡಲೇ ನಮ್ಮನ್ನೂ ಪದವೀಧರ ಶಿಕ್ಷಕರೆಂದು ಪರಿಗಣಿಸುವ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಮಾತಿನಂತೆ ನಮ್ಮ ವೇತನವನ್ನೂ ಪರಿಷ್ಕರಿಸಿ, ಈಗಾಗಲೇ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ನಿರ್ಧಾರವನ್ನು ಮತ್ತೂಮ್ಮೆ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.