ಪದವಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕೌಶಲ್ಯ ಅಗತ್ಯ

ಪಠ್ಯೇತರ ಚಟುವಟಿಕೆಗಳ ಸಮಾರೋಪದಲ್ಲಿ ಬಿಇಎಸ್‌ ಕಾಲೇಜು ಪ್ರಾಚಾರ್ಯ ಡಾ|ಎಸ್‌.ಜಿ.ವೈದ್ಯ ಅಭಿಮತ

Team Udayavani, Aug 21, 2022, 3:50 PM IST

19

ಬ್ಯಾಡಗಿ: ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಬೆನ್ನಲ್ಲೇ, ಯುವಕರಿಗೆ ಉದ್ಯೋಗ ಕಲ್ಪಿಸುತ್ತಿರುವ ಮಾರುಕಟ್ಟೆಗಳು ತಂತ್ರಜ್ಞಾನದೊಂದಿಗೆ ಅತ್ಯಾಧುನಿಕವಾಗುತ್ತಿವೆ. ಇಂತಹ ನಾಟಕೀಯ ಬದಲಾವಣೆ ಕಂಡುಕೊಳ್ಳುವ ಮೂಲಕ ಯಾಂತ್ರೀಕೃತಗೊಂಡ ಕಂಪನಿಗಳು ಕೃತಕ ಬುದ್ಧಿಮತ್ತೆ ಹೊಂದಿರುವ ವಿದ್ಯಾರ್ಥಿಗಳ ಹುಡುಕಾಟದಲ್ಲಿವೆ. ಇದರಿಂದ ಉದ್ಯೋಗ ಪಡೆಯುವಲ್ಲಿ ಪೈಪೋಟಿ ಸಾಮಾನ್ಯವಾಗಿದೆ ಎಂದು ಬಿಇಎಸ್‌ ಕಾಲೇಜು ಪ್ರಾಚಾರ್ಯ ಡಾ|ಎಸ್‌.ಜಿ.ವೈದ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಬಿಇಎಸ್‌ ಮಹಾವಿದ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉನ್ನತ ಶಿಕ್ಷಣವನ್ನು ಔಪಚಾರಿಕ ಶಿಕ್ಷಣದ ಅಂತಿಮ ಹಂತವೆಂದು ಪರಿಗಣಿಸುತ್ತಿರುವುದೇನೋ ನಿಜ. ಆದರೆ, ಸುಧಾರಿತ ತಂತ್ರಜ್ಞಾನ ಹೊಂದಿದ ಉದ್ಯೋಗಗಳಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಇಂತಹ ಅಗತ್ಯಗಳನ್ನು ನಿಭಾಯಿಸಬಲ್ಲ ಶೈಕ್ಷಣಿಕ ವ್ಯವಸ್ಥೆ ಅವಶ್ಯಕವೆನಿಸುತ್ತಿದೆ. ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣದಲ್ಲಿ ಇಂತಹ ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಬೇಕಾಗಿದೆ ಎಂದರು.

ಶೇ.54 ಪದವಿ ಶಿಕ್ಷಣ: ಹಿಂದಿನ ದಿನಗಳನ್ನು ಜ್ಞಾಪಿಸಿಕೊಂಡಾಗ ಉನ್ನತ ಶಿಕ್ಷಣದವರೆಗೂ ಹೋದವರ ಸಂಖ್ಯೆ ವಿರಳವಾಗಿತ್ತು. ಅವಿಭಕ್ತ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹುತೇಕರು ಹೆಚ್ಚು ಸಮಯವನ್ನು ಕೃಷಿ ಚಟುವಟಿಕೆಯಲ್ಲಿ ಕಳೆಯುತ್ತಿದ್ದರು, ಹೀಗಾಗಿ, ಪದವಿ ಪಡೆದ ಮತ್ತು ಪಡೆಯದವರ ನಡುವೆ ಬಹಳಷ್ಟು ಅಂತರ ಸೃಷ್ಟಿಯಾಗಿತ್ತು. ಇದೀಗ ಶಿಕ್ಷಣ ರೂಪಾಂತರಗೊಂಡಿದ್ದು, ಉನ್ನತ ಶಿಕ್ಷಣ ಪಡೆದವರು ಆರ್ಥಿಕ ಭದ್ರತೆ ಕಂಡುಕೊಂಡಿದ್ದಾರೆ. ಹೀಗಾಗಿ, ಶೇ.54ರಷ್ಟು ಯುವಕರು ಪದವಿ ಶಿಕ್ಷಣ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ ಎಂದರು.

ಸ್ಕಿಲ್‌ ಡೆವೆಲಪಮೆಂಟ್‌ ಮಾಡಿಕೊಳ್ಳಿ:ಪಠ್ಯೇತರ ಚಟುವಟಿಕೆಗಳ ವಿಭಾಗದ ಮುಖ್ಯಸ್ಥ ಉಪನ್ಯಾಸಕ ಕೆ.ಎಂ.ಕಟಗಿಹಳ್ಳಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ಇದರಲ್ಲಿಯೇ ಉದ್ಯೋಗ ಬಯಸುವವರು ಸಂವಹನ (ಕಮ್ಯೂನಿಕೇಶನ್‌ ಸ್ಕಿಲ್‌) ಕಲೆಯಲ್ಲಿ ಪ್ರಾವೀಣ್ಯತೆ ಹೊಂದಬೇಕಾಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ನಡೆಯುವ ಸಂವಾದ (ಡಿಬೇಟ್‌) ಕಾರ್ಯಕ್ರಮ ಸೇರಿದಂತೆ ಪಠ್ಯೇತರ ವಿಭಾಗದಲ್ಲಿ ಹೆಚ್ಚಿನ ಆಸಕ್ತಿ ತೋರಬೇಕೆಂದರು.

ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಡಾ.ಎಸ್‌.ಎನ್‌.ನಿಡಗುಂದಿ, ಗೌರವ ಕಾರ್ಯದರ್ಶಿ ಮುರುಳಿ ಜೋಷಿ, ನಿವೃತ್ತ ಪ್ರಾಚಾರ್ಯ ಕೆ.ಜಿ.ಖಂಡೇಬಾಗೂರ, ನಿವೃತ್ತ ಉಪನ್ಯಾಸಕರಾದ ಡಾ.ಪ್ರೇಮಾನಂದ ಲಕ್ಕಣ್ಣನವರ, ಎಂ.ಜಿ. ನಂದರಗಿ, ಡಾ.ಎಸ್‌.ಡಿ.ಬಾಲಾಜಿರಾವ್‌, ಚನ್ನಮ್ಮ ಕೋರಿಶೆಟ್ಟರ, ಪಿಎಂ.ರಾಮಗಿರಿ, ಎಸ್‌.ವಿ.ಉಜ್ಜಯನಿಮಠ, ನಿವೃತ್ತ ದೈಹಿಕ ನಿರ್ದೇಶಕ ಎಸ್‌.ಎಲ್‌.ತೆಂಬದ, ನಿವೃತ್ತ ಗ್ರಂಥಪಾಲಕ ಸಿ.ಸಿ.ಕೊಟಗಿ, ಉಪನ್ಯಾಸಕಾರದ ಡಾ.ಸುರೇಶ ಪಾಂಗಿ, ಎನ್‌. ಎಸ್‌.ಪ್ರಶಾಂತ್‌, ಪ್ರಭು ದೊಡ್ಮನಿ, ಮಹೇಶ ದೇವರಗುಡ್ಡ, ಶಿವನಗೌಡ ಪಾಟೀಲ, ನಿಂಗಪ್ಪ ಕುಡುಪಲಿ, ವಿಶ್ವನಾಥ ವಡೆಯನಪುರ, ಪ್ರವೀಣ ಬಿದರಿ, ಎಂ.ಎಚ್‌.ಮುಧೋಳಕರ, ಗ್ರಂಥಪಾಲಕ ಸಂತೋಷ್‌ ಉದ್ಯೋಗಣ್ಣನವರ ಸಿಬ್ಬಂದಿ ಗಳಾದ ಎಸ್‌.ಎಚ್‌.ಕುರಕುಂದಿ, ಮಾಲತೇಶ ಕರುಗಲ್ಲ, ಬಸಮ್ಮ ನಾಯ್ಕರ್‌ ಎಂ.ಆರ್‌.ಕೋಡಿಹಳ್ಳಿ ಇನ್ನಿತರರಿದ್ದರು.

ಪ್ರಾಧ್ಯಾಪಕಿ ಜ್ಯೋತಿ ಹಿರೇಮಠ ಸ್ವಾಗತಿಸಿ, ನಿವೇದಿತ ವಾಲಿಶೆಟ್ಟರ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri-Die

Haveri: ಡಾಬಾ ಬಂದಾಗ ದಿಢೀರ್‌ ಎಂದು ಕಣ್ಣು ಬಿಟ್ಟ ವ್ಯಕ್ತಿ ನಿಧನ!

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

12-haveri

Haveri: ಕೃಷ್ಣಮೃಗ ಅಭಯಾರಣ್ಯದಲ್ಲಿ “ಕಲ್ಲು ಗೌಜಲು’

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.