ಚಿಹ್ನೆ ಬದಲಾಗಿದ್ದಕ್ಕೆ ಬೇಸತ್ತು ಅಭ್ಯರ್ಥಿ ಆತ್ಮಹತ್ಯೆ ಯತ್ನ
Team Udayavani, May 1, 2018, 6:50 AM IST
ಹಾವೇರಿ: ಚುನಾವಣೆ ಚಿಹ್ನೆ ಬದಲಾಗಿದ್ದಕ್ಕೆ ಬೇಸರಗೊಂಡು ಅಭ್ಯರ್ಥಿಯೊಬ್ಬರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯ ಹಿರೇಕೆರೂರಲ್ಲಿ ನಡೆದಿದೆ.
ಇಲ್ಲಿನ ಕೆಜೆಪಿ ಅಭ್ಯರ್ಥಿ ಹರೀಶ ಇಂಗಳಗೊಂಡಿ ಅವರಿಗೆ “ತೆಂಗಿನಕಾಯಿ’ ಬದಲಿಗೆ “ತೆಂಗಿನಮರದ’ ಚಿಹ್ನೆ ನೀಡಲಾಗಿತ್ತು. ಒಂದು ತಿಂಗಳಿಂದಲೂ ಇವರು “ತೆಂಗಿನಕಾಯಿ’ ಚಿಹ್ನೆಯನ್ನೇ ಪ್ರಚಾರ ಮಾಡಿದ್ದರು. ಈಗ ಏಕಾಏಕಿ ಚಿಹ್ನೆ ಬದಲಾಗಿದ್ದರಿಂದ ಕಂಗಾಲಾಗಿ ನಗರದ ಕೆಜೆಪಿ ಕಚೇರಿಯಲ್ಲಿ ಎಂಟಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿದ್ದಾರೆ. ತಕ್ಷಣ ಸ್ನೇಹಿತರು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದಾರೆ.
ಕೆಜೆಪಿ ಅಭ್ಯರ್ಥಿಗಳಿಗೆ ದಿಢೀರ್ ಆಗಿ “ತೆಂಗಿನಕಾಯಿ’ ಚಿಹ್ನೆ ಬದಲಾಗಿ ಬೇರೆ ಚಿಹ್ನೆ ನೀಡಲಾಗಿದೆ. ಚಿಹ್ನೆ ಕೈ ತಪ್ಪುವಲ್ಲಿ ರಾಷ್ಟ್ರೀಯ ಪಕ್ಷಗಳ ಕುತಂತ್ರ ಇರುವ ಸಂಶಯವಿದೆ ಎಂದು ಹಾವೇರಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಸವರಾಜ ಟೀಕಿಹಳ್ಳಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ
Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.