ಕೈಗಾರಿಕಾಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಜಿಲ್ಲೆ
•600 ಎಕರೆ ಭೂಮಿ ಮೀಸಲಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ: ಶೆಟ್ಟಿ
Team Udayavani, May 22, 2019, 1:11 PM IST
ಹಾವೇರಿ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಸುಧಾಕರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಾವೇರಿ: ಕೈಗಾರಿಕಾ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ 600 ಎಕರೆ ಭೂಮಿ ಮೀಸಲಿಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದರು.
ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ತಾಲೂಕಿನ ಕೊಳೂರು ಬಳಿ ಈಗಾಗಲೇ 400 ಎಕರೆ ಜಮೀನು ಗುರುತಿಸಲಾಗಿದ್ದು, ಅದು ಸರ್ಕಾರದಿಂದ ಮಂಜೂರಾಗಬೇಕಿದೆ. ಜತೆಗೆ ಇನ್ನೂ 200 ಎಕರೆ ಭೂಮಿ ಗುರುತಿಸಿ ಕೈಗಾರಿಕೆಗಳಿಗೆ ನೀಡಬೇಕು ಎಂದರು.
ಹಾವೇರಿ ಕೈಗಾರಿಕಾಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಜಿಲ್ಲೆಯಾಗಿದ್ದು, ಸರ್ಕಾರ ಇಲ್ಲಿ ಕೈಗಾರಿಕಾಭಿವೃದ್ಧಿಗೆ ಆದ್ಯತೆ ನೀಡಿ ಸಾಕಷ್ಟು ಅನುದಾನ ನೀಡಿ ಯೋಜನೆಗಳನ್ನು ರೂಪಿಸಬೇಕು. ಈಗಾಗಲೇ ಸಾಕಷ್ಟು ಯೋಜನೆಗಳಿವೆ. ಆದರೆ, ಆ ಯೋಜನೆಗಳ ಬಗ್ಗೆ ಸರಿಯಾದ ಪ್ರಚಾರ ಆಗುತ್ತಿಲ್ಲ. ಹೀಗಾಗಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಲ್ಲಿ ಜಿಲ್ಲೆ ಹಿಂದುಳಿದೆ ಎಂದರು.
ಜಿಲ್ಲೆಯಲ್ಲಿ ಮಾನವ ಶಕ್ತಿ, ಉತ್ತಮ ಸಂಪರ್ಕ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಸಾಕಷ್ಟು ಇದೆ. ಆದರೆ, ಸೌಕರ್ಯ ಇದೆ ಎಂಬುದನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯವೂ ಆಗಿಲ್ಲ. ಇದರಿಂದಾಗಿ ಕೈಗಾರಿಕೆ ಸ್ಥಾಪಿಸಲು ಹೊರಗಿನಿಂದ ಉದ್ಯಮಿಗಳು ಸಹ ಬರುತ್ತಿಲ್ಲ ಎಂದರು.
ಹೊಸಬರಿಗೆ ಆದ್ಯತೆ ನೀಡಲಿ: ಬ್ಯಾಂಕ್‌ಗಳು ಹಳೆ ಉದ್ಯಮಿಗಳಿಗೆ ಸಾಲ ಕೊಡಲು ತೋರುವ ಆಸಕ್ತಿ ಹೊಸ ಉದ್ಯಮಿಗಳಿಗೆ ತೋರುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ತಾರತಮ್ಯ ಮನೋಭಾವ ಬದಲಾಗಬೇಕು. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಕೃಷಿ, ಪ್ರವಾಸೋದ್ಯಮ ಪೂರಕ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳಿದ್ದರೂ ಕೈಗಾರಿಕೆ ಸ್ಥಾಪಿಸಲು ಯಾರೂ ಮುಂದೆ ಬರುತ್ತಿಲ್ಲ. ಪದವೀಧರರು ಉದ್ಯೋಗ ಅರಸಿ ದೊಡ್ಡ ದೊಡ್ಡ ನಗರಗಳಿಗೆ ಹೋಗುತ್ತಿದ್ದಾರೆ. ಯುವಕರು ಉದ್ಯೋಗಕ್ಕಿಂತ ಉದ್ಯಮಿಯಾಗಲು ಮುಂದೆ ಬರಬೇಕು ಎಂದ ಅವರು, ಹೊಸ ಉದ್ಯಮಿಗಳಿಗೆ ಕೈಗಾರಿಕಾ ಘಟಕದ ಯೋಜನೆ, ಸಾಲ ಇನ್ನಿತರ ಸಲಹೆ ಮಾರ್ಗದರ್ಶನ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸದಾಸಿದ್ಧ ಎಂದರು.
ಪ್ರಸ್ತಾವನೆ: ಮಂಗಳವಾರ ಬೆಳಗ್ಗೆ ನಡೆದ ಕಾರ್ಯಾಗಾರದಲ್ಲಿ ಸರಕು ಸೇವಾ ತೆರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ, ಬ್ಯಾಂಕಿಂಗ್ ಮತ್ತು ಹಣಕಾಸು, ಕೈಗಾರಿಕೆ ಕುರಿತ ನಾಲ್ಕು ಗೋಷ್ಠಿಗಳು ನಡೆದವು. ಕಾರ್ಯಾಗಾರದಲ್ಲಿ ವ್ಯಾಪಾರ ಪರವಾನಗಿ ನವೀಕರಣ ಅವಧಿ ವಿಸ್ತರಣೆಯಾಗಬೇಕು. ಎಪಿಎಂಸಿ 0.5 ತೆರಿಗೆ ರದ್ದುಪಡಿಸಬೇಕು. ಅನವಶ್ಯಕ ಹಾಗೂ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಇಂಬು ನೀಡುವ ಎಪಿಎಂಸಿ 35-ಬಿ (35-ಎ ಇದರಲ್ಲಿ ತೆರಿಗೆ ಸೇರಿದಂತೆ ಇತರ ಎಲ್ಲ ದೃಢೀಕರಣ ಮಾಡಿದ್ದರೂ 35-ಬಿಯಲ್ಲಿ ಎಪಿಎಂಸಿ ಕಾರ್ಯದರ್ಶಿ ಸಹಿ ಹಾಕಿಸುವುದು) ರದ್ದು ಮಾಡಬೇಕು. ಜಿಎಸ್‌ಟಿ ಅನುಷ್ಠಾನದಲ್ಲಿರುವ ನೆಟ್ವರ್ಕ್ ಸಮಸ್ಯೆ ಸರಿಪಡಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಗಳಿಗೆ ಕಳುಹಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.
ಸ್ಥಿರ ಸರ್ಕಾರ ಬೇಕು: ಸರ್ಕಾರದ ಅಸ್ಥಿರತೆ ಎಲ್ಲ ರಂಗದಲ್ಲಿಯೂ ಪರಿಣಾಮ ಬೀರುತ್ತದೆ. ಅಂತೆಯೇ ಕೈಗಾರಿಕೆ, ವಾಣಿಜ್ಯ ರಂಗದ ಮೇಲೆಯೂ ಬೀಳುತ್ತದೆ. ಸರ್ಕಾರ ಯಾವಾಗ ಏನಾಗುತ್ತೋ ಎಂಬ ಭಾವನೆಯಿಂದ ಅಧಿಕಾರಿ ವರ್ಗ ತಟಸ್ಥವಾಗುತ್ತದೆ. ಅಧಿಕಾರಿ ವರ್ಗ ತಟಸ್ಥವಾದರೆ ಯೋಜನೆ, ಕಾರ್ಯಕ್ರಮ ಎಲ್ಲವೂ ಕುಂಠಿತಗೊಳ್ಳುತ್ತವೆ.
ಹೀಗಾಗಿ ಸರ್ಕಾರದಲ್ಲಿ ಸ್ಥಿರತೆ ಇರಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಜಿಲ್ಲಾ ಘಟಕದ ಪ್ರಮುಖರಾದ ಸಿ.ಆರ್. ಜನಾರ್ದನ, ಎಂ.ಸುಂದರ, ಎನ್. ಯಶವಂತರಾಜ, ಆರ್.ಎಸ್. ಮಾಗನೂರ, ಪಿ.ಡಿ. ಶಿರೂರ, ಜಿ.ವಿ. ಹಿರೇಗೌಡ್ರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.