ಮತ್ತೆ ಗೊಂದಲಕ್ಕೆ ಸಿಲುಕಿದ ಜಿಪಂ ಕಟ್ಟಡ
Team Udayavani, Sep 17, 2019, 12:02 PM IST
ಹಾವೇರಿ: ಉದ್ಘಾಟನೆ ಗೊಂದಲದಲ್ಲಿ ಸಿಲುಕಿದ ಜಿಪಂ ಆಡಳಿತ ಭವನ.
ಹಾವೇರಿ: ಕಟ್ಟಡಕ್ಕೆ ರಾಜಕೀಯ ನಾಯಕರ ಹೆಸರಿಡುವ ವಿಚಾರ ಗೊಂದಲದಲ್ಲಿ ಸಿಲುಕಿ ಸುದ್ದಿಯಾಗಿದ್ದ ಜಿಲ್ಲಾ ಪಂಚಾಯಿತಿಯ ನೂತನ ಆಡಳಿತ ಭವನ, ಈಗ ಉದ್ಘಾಟನೆ ವಿಚಾರದಲ್ಲಿ ಮತ್ತೆ ಗೊಂದಲಕ್ಕೆ ಸಿಲುಕಿ ಸುದ್ದಿಯಾಗಿದೆ.
ಜಿಲ್ಲಾ ಪಂಚಾಯಿತಿಯ ನೂತನ ಆಡಳಿತ ಭವನ ಅಧಿಕೃತವಾಗಿ ಉದ್ಘಾಟನೆ ಆಗಿದೆಯೋ ಇಲ್ಲವೋ ಎಂಬುದು ಈಗ ಸೃಷ್ಟಿಯಾಗಿರುವ ಹೊಸ ಗೊಂದಲ. ಸೆ. 19ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ ಆಡಳಿತ ಭವನ ಉದ್ಘಾಟನೆಗೆ ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ಈ ಗೊಂದಲ ಶುರುವಾಗಿದೆ.
ಜಿಪಂ ಆಡಳಿತ ಭವನದ ನೂತನ ಕಟ್ಟಡವನ್ನು 2018ರ ವಿಧಾನಸಭೆ ಚುನಾವಣೆಗೂ ಮುನ್ನ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಬಂದಾಗ ಮುನ್ಸಿಪಲ್ ಮೈದಾನದಲ್ಲಿ ನಡೆದ ವಿವಿಧ 36 ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯ ಶಿಲಾನ್ಯಾಸ ಸಂದರ್ಭದಲ್ಲಿಯೇ ಜಿಪಂ ಆಡಳಿತ ಭವನದ ಶಿಲಾನ್ಯಾಸ ಫಲಕವನ್ನಿಟ್ಟು ಉದ್ಘಾಟನೆ ಮಾಡಲಾಗಿದೆ. ಒಮ್ಮೆ ಮುಖ್ಯಮಂತ್ರಿಯವರಿಂದ ಉದ್ಘಾಟನೆ ಆದ ಮೇಲೆ ಮುಗಿಯಿತು. ಮತ್ತೆ ಉದ್ಘಾಟನೆ ಮಾಡುವುದು ಆಭಾಸ ಎನಿಸುತ್ತದೆ ಎಂಬುದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಅವರ ವಾದ.
ಪ್ರತಿವಾದ: ಜಿಪಂ ಆಡಳಿತ ಭವನ ಕಟ್ಟಡ ಉದ್ಘಾಟನೆ ಆಗಿರುವ ಬಗ್ಗೆ ಜಿಪಂ ಸದಸ್ಯರಿಗೂ ಮಾಹಿತಿ ಇಲ್ಲ. ಸದಸ್ಯರನ್ನು ಆಹ್ವಾನಿಸುವ ಯಾವ ಶಿಷ್ಟಾಚಾರವೂ ಪಾಲನೆ ಆಗಿಲ್ಲ. ಅಂದಿನ ಆಮಂತ್ರಣ ಪತ್ರಿಕೆಯಲ್ಲಿ ಕಟ್ಟಡ ಉದ್ಘಾಟನೆಯ ಉಲ್ಲೇಖವೂ ಇರಲಿಲ್ಲ. ಜಿಪಂ ಇಂಜಿನಿಯರಿಂಗ್ ಅಭಿಯಂತರು ಸಹ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳ ಸಭೆಯಲ್ಲಿಯೇ ಸ್ಪಷ್ಟಪಡಿಸಿದ್ದಾರೆ. ಕೇವಲ ಒಂದು ವಾರದ ಹಿಂದಷ್ಟೇ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆಂಬ ಬರಹ ಇರುವ ಶಿಲಾಫಲಕವನ್ನು ಆಡಳಿತ ಭವನ ಕಟ್ಟಡಕ್ಕೆ ಅಳವಡಿಸಲಾಗಿದೆ. ಫಲಕ ಅಳವಡಿಸುವುದನ್ನೂ ಸದಸ್ಯರ ಗಮನಕ್ಕೆ ತಂದಿಲ್ಲ. ಅಷ್ಟಕ್ಕೂ ನೂತನ ಕಟ್ಟಡವನ್ನು ಜಿಪಂಗೆ ಇವತ್ತಷ್ಟೇ ಹಸ್ತಾಂತರಿಸಲಾಗಿದೆ. ಹೀಗಾಗಿ ಜಿಪಂ ಆಡಳಿತ ಭವನದ ಕಟ್ಟಡ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಆದ್ದರಿಂದ ಈಗ ಉದ್ಘಾಟನೆ ಮಾಡಲಾಗುತ್ತಿದೆ ಎಂಬುದು ಜಿಪಂನ ಹಾಲಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಅವರ ಪ್ರತಿವಾದ. ಹಾಲಿ ಮತ್ತು ಮಾಜಿ ಅಧ್ಯಕ್ಷರ ನಡುವಿನ ಈ ಜಟಾಪಟಿ ಮತ್ತೆ ಜಿಪಂ ಆಡಳಿತ ಭವನ ಕಟ್ಟಡ ಗೊಂದಲಕ್ಕೆ ಸಿಲುಕಿ ರಾಜಕೀಯ ಚರ್ಚೆಗೆ ಇಂಬು ನೀಡಿದೆ.
•ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.