ಎಲ್ಲಾ ಓಕೆ ಶೌಚಗೃಹ ಇಲ್ಲ ಯಾಕೆ?
Team Udayavani, Nov 18, 2019, 1:34 PM IST
ರಾಣಿಬೆನ್ನೂರ: ಸುಮಾರು 1.30 ಲಕ್ಷದ ಜನಸಂಖ್ಯೆ ಹೊಂದಿರುವ ನಗರದಲ್ಲಿ ಒಂದೇ ಒಂದು ಗ್ರಂಥಾಲಯವಿದ್ದು, 1979ರಲ್ಲಿ ಸ್ಥಾಪನೆಗೊಂಡಿದೆ. ಇಲ್ಲಿನ ಸಂಗಂ ವೃತ್ತದ ಬಳಿ ಕೇಂದ್ರ ಗ್ರಂಥಾಲಯವು 2012ರಲ್ಲಿ 1.30 ಕೋಟಿ ರೂ. ಅನುದಾನದಲ್ಲಿ ನವೀಕರಣಗೊಂಡು ಸುಸಜ್ಜಿತ 6 ಕೊಠಡಿಗಳನ್ನು ಹೊಂದಿದೆ. “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂದು ಆಕರ್ಷಿಸುವ ನಾಮಫಲಕದೊಂದಿಗೆ ಓದುಗರನ್ನು ಬರಮಾಡಿಕೊಳ್ಳುತ್ತಿದೆ.
ಮಾಜಿ ಶಾಸಕ ಹಾಗೂ ವಿಧಾನಸಭಾ ಮಾಜಿ ಸಭಾಪತಿ ಕೋಳಿವಾಡ ಅವರು ಈ ಗ್ರಂಥಾಲಯಕ್ಕೆ 1979ರಲ್ಲಿ ಅಡಿಗಲ್ಲು ಹಾಕಿದ್ದರು. ನಂತರ 2012 ರಲ್ಲಿ ಮಾಜಿ ಶಾಸಕ ದಿ| ಜಿ.ಶಿವಣ್ಣನವರ ಆಡಳಿತಾವಧಿಯಲ್ಲಿ ಈ ಗ್ರಂಥಾಲಯವು ಲೋಕಾರ್ಪಣೆಗೊಂಡಿತು. ಇಲ್ಲಿ 35 ಸಾವಿರ ಪುಸ್ತಕಗಳು ಲಭ್ಯವಿದ್ದು, ಇದರಲ್ಲಿ 30 ಸಾವಿರ ಕನ್ನಡ, 4500 ಇಂಗ್ಲಿಷ್, 500 ಹಿಂದಿ ಪುಸ್ತಕಗಳು ಲಭ್ಯ ಇವೆ. ರಾಜ್ಯಮಟ್ಟದ ದಿನಪತ್ರಿಕೆಗಳು ಮತ್ತು ಸ್ಥಳೀಯ ಪತ್ರಿಕೆ ಸೇರಿದಂತೆ ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆ ಸಹ ಓದುಗರಿಗೆ ಲಭ್ಯವಿದೆ.
ಇಂದಿನ ದಿನಮಾನಗಳಲ್ಲಿ ಯುವಕರು ವಾಟ್ಸ್ ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಲಹರಣ ಮಾಡುತ್ತಿರುವ ಪರಿಣಾಮ ಪುಸ್ತಕ ಹಾಗೂ ಪತ್ರಿಕೆಗಳ ಓದುವ ಹವ್ಯಾಸ ಮರೆತಿದ್ದಾರೆ. ಪ್ರತಿದಿನ 300ಕ್ಕೂ ಅಧಿಕ ಜನ ಈ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನುವುದೇ ಸಂತಸದ ಸಂಗತಿ. 300 ಓದುಗರು ಆಜೀವ ಸದಸ್ಯತ್ವ ಹೊಂದಿದ್ದಾರೆ. ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಪಠ್ಯಕ್ಕೆ ಸಂಬಂಧಿ ಸಿದ ಪುಸ್ತಕ ಪಡೆದು ಓದುತ್ತಿರುವುದು ಗ್ರಂಥಾಲಯಕ್ಕೆ ಇನ್ನೂ ಹೆಚ್ಚು ಮೆರಗು ತಂದಿದೆ. ಪ್ರಸ್ತುತ ಈ ಗ್ರಂಥಾಲಯದ ಪಕ್ಕ ಮಕ್ಕಳ ಗ್ರಂಥಾಲಯ ಕಟ್ಟಡ ಕಾಮಗಾರಿ ಚಾಲ್ತಿಯಲ್ಲಿದೆ. ಇದು ಸಹ ಬೇಗ ಆರಂಭವಾದಲ್ಲಿ ಮಕ್ಕಳ ಅಭ್ಯಾಸಕ್ಕೂ ಅನುಕೂಲವಾಗಲಿದೆ.
ಸುಸಜ್ಜಿತ ಕಟ್ಟಡದಲ್ಲಿ ಶೌಚಗೃಹ ಸಮಸ್ಯೆ: 1.30 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗಿರುವ ಭವ್ಯ ಕಟ್ಟಡದಲ್ಲಿ ಶೌಚಕ್ಕೆ ಸಮಸ್ಯೆ ಉದ್ಬವಿಸಿದೆ. ಕಟ್ಟಡ ನಿರ್ಮಾಣವಾಗಿ ಕೇವಲ 7 ವರ್ಷದಲ್ಲಿ ಶೌಚಗೃಹದಲ್ಲಿನ ಛಂಬರ್‌ಗಳು ಕುಸಿದಿವೆ. ಅದರ ದುರಸ್ತಿ ಕಾರ್ಯ ಮಾಡಿಸದೆ ಶೌಚಗೃಹ ಬಾಗಿಲು ಹಾಕಲಾಗಿದೆ.
ಕಟ್ಟಡದಲ್ಲಿ ಮಹಿಳೆ ಮತ್ತು ಪುರುಷರ ಪ್ರತ್ಯೇಕ ಮೂರು ಶೌಚಾಲಯಗಳು ನಿರ್ಮಾಣವಾಗಿದ್ದು, ಕಟ್ಟಡ ನವೀಕರಣಗೊಂಡ ಕೆಲವೇ ದಿನಗಳಲ್ಲಿ ಶೌಚಾಲಯದ ಛಂಬರ್‌ಗಳು ಕುಸಿದು ದುರಸ್ತಿಗೆ ಬಂದಿದೆ. ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರವೇ ದುರಸ್ತಿ ಮಾಡಲಾಗುವುದು. –ಬಿದ್ದಾಡೆಪ್ಪ ಮಾಳನಾಯಕನಹಳ್ಳಿ, ಸಹಾಯಕ ಗ್ರಂಥಪಾಲಕ
-ಮಂಜುನಾಥ ಕುಂಬಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.