ಅಕ್ಕಿ-ಬೇಳೆ ಒಟ್ಟಿಗೆ ನೀಡಲು ಚಿಂತನೆ


Team Udayavani, Apr 30, 2020, 6:19 PM IST

ಅಕ್ಕಿ-ಬೇಳೆ ಒಟ್ಟಿಗೆ ನೀಡಲು ಚಿಂತನೆ

ಹಾವೇರಿ: ಮೇ ತಿಂಗಳಲ್ಲಿ ರಾಜ್ಯದ ಎಲ್ಲ ಪಡಿತರ ಅಂಗಡಿಗಳನ್ನು ಏಕ ಕಾಲದಲ್ಲಿ ತೆರೆದು ಅಕ್ಕಿ ಮತ್ತು ತೊಗರಿ ಬೇಳೆಯನ್ನು ಒಟ್ಟಿಗೆ ನೀಡುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗುರುವಾರ ನಿರ್ಧಾರ ಪ್ರಕಟಿಸಲಾಗುವುದು ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಮೇ ತಿಂಗಳಲ್ಲಿ ರೇಷನ್‌ ಜೊತೆಗೆ ಒಂದು ಕೆಜಿ ತೊಗರಿಬೇಳೆ ನೀಡಲಾಗುವುದು. ಮೇ ಹಾಗೂ ಜೂನ್‌ವರೆಗೆ ಅಂತ್ಯೋದಯ ಹಾಗೂ ಬಿಪಿಎಲ್‌ ಕುಟುಂಬಗಳ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಕಾರ್ಡ್‌ ಒಂದಕ್ಕೆ ಒಂದು ಕೆ.ಜಿ. ತೊಗರಿ ಬೇಳೆ ಉಚಿತವಾಗಿ ವಿತರಿಸಲಾಗುತ್ತದೆ. ಈ ಮಾಹಿತಿಯನ್ನು ಜಿಲ್ಲೆಯ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ರಕಟಿಸಲು ಕ್ರಮ ವಹಿಸಬೇಕು ಎಂದರು.

ಕೋವಿಡ್ 19 ಸಂಕಷ್ಟ ಕಾಲದಲ್ಲಿ ಯಾರಿಗೂ ರೇಷನ್‌ ನಿರಾಕರಿಸಬಾರದು. ಅನರ್ಹರೆಂದು ಕಂಡುಬಂದರೂ ಕೋವಿಡ್ 19 ಮುಗಿಯುವವರೆಗೂ ಯಾವ ಕಾರ್ಡ್ ಗಳನ್ನೂ ಅನರ್ಹಗೊಳಿಸಬಾರದು. ಗ್ರಾಹಕರಿಂದ ಯಾವುದೇ ಸೇವಾ ವೆಚ್ಚವನ್ನು  ನ್ಯಾಯಬೆಲೆ ಅಂಗಡಿ ಮಾಲೀಕರು ವಸೂಲಿ ಮಾಡುವ ಹಾಗಿಲ್ಲ. ಸರ್ಕಾರವೇ ಅವರಿಗೆ ಸೇವಾ ವೆಚ್ಚವನ್ನು ನೀಡುತ್ತಿದೆ. ಪಡಿತರದಾರರಿಂದ ಯಾರಾದರೂ ಒಂದು ಪೈಸೆ ಹಣ ಪಡೆದರೆ ಅಂಥವರ ಮೇಲೆ ಕಠಿಣ ಕ್ರಮಕೈಗೊಳ್ಳಿ ಎಂದರು. ಪಡಿತರ ಕಾರ್ಡ್‌ಗಾಗಿ ಅರ್ಜಿ ಹಾಕಿದ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡುದಾರರಿಗೆ ರೇಷನ್‌ ನೀಡಬೇಕು. ಅರ್ಜಿ ಹಾಕಿದವರ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸಬೇಕು. ಪ್ರತಿ ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ನೀಡಬೇಕು ಹಾಗೂ ಎಪಿಎಲ್‌ ಕುಟುಂಬ ರೇಷನ್‌ ಬೇಡಿಕೆ ಸಲ್ಲಿಸಿದರೆ ಒಂದು ಕೆ.ಜಿ. ಅಕ್ಕಿಗೆ 15 ರೂ.ನಂತೆ ಪಡೆಯಲು ಅವಕಾಶವಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಇಲ್ಲದೆ ಇರುವುದರಿಂದ ಪಡಿತರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರ ಅರ್ಹತೆ ಪರಿಶೀಲನೆ ಮಾಡಿ ತ್ವರಿತವಾಗಿ ಅರ್ಹರಿಗೆ ಕಾರ್ಡ್‌ ವಿತರಿಸಿ ಎಂದರು.

ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣ  ಕುಮಾರ ಗುತ್ತೂರ, ಡಿಸಿ ಕೃಷ್ಣ ಭಾಜಪೇಯಿ, ಎಸ್ಪಿ ಕೆ.ಜಿ. ದೇವರಾಜು, ಜಿಪಂ ಸಿಇಒ ರಮೇಶ ದೇಸಾಯಿ ಇನ್ನಿತರರು ಇದ್ದರು.

ಟಾಪ್ ನ್ಯೂಸ್

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-eeeeega

Iga Swiatek doping ban ; ತಿಂಗಳ ನಿಷೇಧಕ್ಕೆ ಒಪ್ಪಿಗೆ

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.