ಅವೈಜ್ಞಾನಿಕ ರೋಡ್ ಹಂಪ್ಸ್‌ನಿಂದ ಕಿರಿಕಿರಿ
ಹಾವೇರಿ-ಹಿರೇಕೆರೂರ ಮಧ್ಯೆ ಅಡಿಗಡಿಗೆ 60ಕ್ಕೂ ಅಧಿಕ ಹಂಪ್ಸ್
Team Udayavani, Oct 17, 2020, 1:31 PM IST
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯಿಂದ ತಾಲೂಕು ಕೇಂದ್ರ ಹಿರೇಕೆರೂರು ಕೇವಲ 50 ಕಿ.ಮೀ. ದೂರದಲ್ಲಿದೆ. ಆದರೆ, ಈ ದೂರವನ್ನು ಕ್ರಮಿಸಲುಕನಿಷ್ಟ ಎರಡು ತಾಸು ಬೇಕು. ಇದಕ್ಕೆ ಕಾರಣ ರಸ್ತೆಯಲ್ಲಿ ಅಡಿಗಡಿಗೂ ಹಾಕಿರುವ 60ಕ್ಕೂ ಅಧಿಕ ಹಂಪ್ಸ್‌ಗಳು.
ಜನ ವಸತಿ ಸ್ಥಳಗಳಲ್ಲಿ ಅತಿಯಾದ ವೇಗದಿಂದ ಉಂಟಾಗುವ ಅಪಘಾತ ತಡೆಯಲು ರೋಡ್ ಹಂಪ್ಸ್ ನಿರ್ಮಿಸುವುದು ಸಹಜ. ಆದರೆ, ಈಮಾರ್ಗದಲ್ಲಿ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಹಂಪ್ಸ್ ಹಾಕಿರುವ ಪರಿಣಾಮ ವಾಹನಗಳ ಚಾಲಕರಿಗೆ ನಿತ್ಯ ಕಿರಿಕಿರಿಯಾಗುತ್ತಿರುವುದು ವಿಪರ್ಯಾಸವಾಗಿದೆ. ಈ ಮಾರ್ಗ ಮಧ್ಯೆದಲ್ಲಿ ಹಲವು ಹಳ್ಳಿಗಳು ಬರುತ್ತವೆ. ಈ ಹಳ್ಳಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದೆರಡುಹಂಪ್ಸ್ ಹಾಕಿದರೆ ಸರಿ. ಆದರೆ, ಗ್ರಾಮ ವ್ಯಾಪ್ತಿಯ ರಸ್ತೆ ತುಂಬೆಲ್ಲ ಹಂಪ್ಸ್ ಹಾಕಲಾಗಿದೆ. ಇದು ಪ್ರಯಾಣಿಕರಿಗೆ ನುಂಗಲಾರದ ತುಪ್ಪದಂತಾಗಿದ್ದು, ನಿತ್ಯ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ಹೈರಾಣಾಗಿಸುತ್ತಿದೆ.
ಕೆಲ ಕಡೆಗಳಲ್ಲಿ ಅವಶ್ಯವಿಲ್ಲದೇ ಇದ್ದರೂ ರೋಡ್ ಹಂಪ್ಸ್‌ಗಳನ್ನು ಹಾಕಲಾಗಿದೆ. ಇದರಿಂದಲೇ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತಿವೆ. ಅಪಘಾತ ತಪ್ಪಿಸಲು ಇರಬೇಕಾದ ಹಂಪ್ಸ್‌ಗಳೇ ಅಪಘಾತಕ್ಕೆ ಕಾರಣವಾದರೆ ಹೇಗೆ ಎನ್ನುವ ಪ್ರಶ್ನೆ ವಾಹನ ಸವಾರರದ್ದಾಗಿದೆ. ಈ ರಸ್ತೆಯಲ್ಲಿ ಅವೈಜ್ಞಾನಿಕ ರೋಡ್ ಹಂಪ್ಸ್‌ಗಳನ್ನುನಿರ್ಮಿಸಿದ್ದು, ವಾಹನ ಚಾಲಕರು ಜಾಗೃತರಾಗಿರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ಶಾಲಾ-ಕಾಲೇಜು ಪ್ರದೇಶ, ಆಸ್ಪತ್ರೆ, ಜನದಟ್ಟಣೆ ಇರುವ ಪ್ರದೇಶದಲ್ಲಿ ಹಾಗೂ ರಸ್ತೆ ಕ್ರಾಸ್ ಬಳಿ ಸುರಕ್ಷಾ ದೃಷ್ಟಿಯಿಂದ ವೈಜ್ಞಾನಿಕವಾದ ರೋಡಹಂಪ್ಸ್ ನಿರ್ಮಿಸುವುದು ಸಾಮಾನ್ಯ. ಆದರೆ,ಅಷ್ಟಾಗಿ ಜನ ವಸತಿ ಇರದ ಹಾಗೂ ವಾಹನ ದಟ್ಟಣೆ ಇರದ ಸ್ಥಳಗಳಲ್ಲೂ ಬೇಕಾಬಿಟ್ಟಿಯಾಗಿ ರೋಡ್‌ಹಂಪ್ಸ್ ನಿರ್ಮಿಸಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ಪ್ರಮುಖ ರಸ್ತೆಯಾದ ಈ ಮಾರ್ಗ ಮಧ್ಯೆದ ಕನಕಾಪುರ, ಚಿಕ್ಕಲಿಂಗದಹಳ್ಳಿ, ಕುರುಬಗೊಂಡ, ಹೆಡಿಗೊಂಡ, ಬನ್ನಿಹಳ್ಳಿ, ಲಿಂಗಾಪುರ, ಹಂಸಭಾವಿ, ಚಿಕ್ಕೆರೂರ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್ ಗಳನ್ನು ಹಾಕಲಾಗಿದೆ. ಅಲ್ಲದೇ, ಕಾಗಿನೆಲೆ ಹಾಗೂ ಮುತ್ತೂರ ಗ್ರಾಮದಲ್ಲಿ ಗುಂಡದಂತಿರುವು ಹತ್ತಾರು ಹಂಪ್ಸ್‌ಗಳನ್ನು ನಿರ್ಮಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ಹಾಕಲಾಗಿರುವ ಹಂಪ್ಸ್‌ಗಳಿಂದಾಗಿ ಈ ರಸ್ತೆಯಲ್ಲಿಯೇ ಓಡಾಡಲು ಜನತೆ ಬೇಸತ್ತಿದ್ದು, ದೂರದ ಬ್ಯಾಡಗಿ ಮಾರ್ಗವಾಗಿ ಹಂಸಭಾವಿ, ಹಿರೇಕೆರೂರಿಗೆ ತೆರಳಲು ಮುಂದಾಗಿದ್ದಾರೆ. ಕಾರು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವಾಗ ವಾಹನದ ಕೆಳಭಾಗಕ್ಕೆ ಹಂಪ್ಸ್‌ಗಳು ತಗಲುತ್ತಿವೆ.ಇದರಿಂದಾಗಿ ಎಷ್ಟೋ ವಾಹನಗಳು ಕೆಟ್ಟು ನಿಂತು ವಾಹನ ಸವಾರರು ತೊಂದರೆ ಅನುಭವಿಸುತ್ತಿರುವ ಉದಾಹರಣೆಗಳು ಇವೆ. ಬೈಕ್ ಸವಾರರು ಹಿಂಬದಿಯಲ್ಲಿ ಮಹಿಳೆಯರನ್ನು ಕುಳ್ಳರಿಸಿಕೊಂಡು ರೋಡ್ ಹಂಪ್ಸ್‌ಗಳನ್ನು ದಾಟಿಸುವುದು ಸವಾಲಿನ ಕಾರ್ಯವಾಗಿದೆ. ಕೆಲವು ಭಾಗದಲ್ಲಿ ರೋಡ್ ಹಂಪ್ಸ್‌ಗಳ ಸೂಚನಾ ಫಲಕಗಳಿಲ್ಲದೆ. ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನ ಸವಾರರು ಅಪಘಾತಕ್ಕೀಡಾಗಿದ್ದಾರೆ.
ಕೆಲವು ಭಾಗದಲ್ಲಿ ನಿಯಮ ಗಾಳಿಗೆ ತೂರಿ ರೋಡ ಹಂಪ್ಸ್ ನಿರ್ಮಿಸಲಾಗಿದೆ. ಗ್ರಾಮದ ಹೊರವಲಯದಲ್ಲಿ ಜನ ವಸತಿ ಇಲ್ಲದ ಪ್ರದೇಶದಲ್ಲೂ ಹಂಪ್ಸ್ ನಿರ್ಮಿಸಿರುವುದು ಪ್ರಯಾಣಿಕರನ್ನು ಕೆರಳಿಸುತ್ತಿದೆ. ರಸ್ತೆಗಳಲ್ಲಿ ರೋಡ್ ಹಂಪ್ಸ್ ನಿರ್ಮಿಸುವ ನಿಯಮವೇ ಇಲ್ಲದಿದ್ದರೂ ಸ್ಥಳೀಯ ಜನರು ಒತ್ತಾಯಪೂರ್ವಕವಾಗಿ ಗುತ್ತಿಗೆದಾರರಿಂದ ಹಾಕಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಹಾವೇರಿ-ಹಿರೇಕೆರೂರು ಮಾರ್ಗದಲ್ಲಿಹಾಕಿರುವ ಅವೈಜ್ಞಾನಿಕ ಹಂಪ್ಸ್‌ಗಳುವಾಹನ ಸವಾರರ ಜೀವತೆಗೆದುಕೊಳ್ಳುವಂತಿವೆ. ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ಆದೇಶಿಸಿದ್ದರೂ ಸಂಬಂಧಪಟ್ಟ ವರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ರಸ್ತೆ ಒಡೆದುಕಾಲುವೆ ಮಾಡಿಕೊಂಡವರ ಮೇಲೂ ಕ್ರಮ ಕೈಗೊಳ್ಳುತ್ತಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. –ಪ್ರಭುಗೌಡ ಭರಮಗೌಡ್ರ, ಹಂಸಭಾವಿ ನಿವಾಸಿ
–ವೀರೇಶ ಮಡ್ಲೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
By Polls: ನಾನು ಉಳಿಯಬೇಕಾದರೆ ಶಿಗ್ಗಾವಿಯಲ್ಲಿ ಪಠಾಣ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಗತ್ತಿನೊಂದಿಗೆ ಅಖಾಡಕ್ಕಿಳಿದ ರಾಕ್‌ಸ್ಟಾರ್, ಜನನಾಯಕ, ಘಟಸರ್ಪ; ದಿಕ್ಕೆಟ್ಟು ಓಡಿದ ಹೋರಿ..
Waqf Issue: ವಕ್ಫ್ ಭೀತಿಯಿಂದ ಕಡಕೋಳದಲ್ಲಿ ಕಲ್ಲು ತೂರಾಟ: 32 ಮಂದಿ ವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.