ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಿರಲಿ ಟಿವಿ-ಮೊಬೈಲ್
Team Udayavani, Jul 23, 2019, 4:07 PM IST
ಹಾವೇರಿ: ಕುರುಬಗೊಂಡ ಪ್ರೌಢಶಾಲೆಯಲ್ಲಿ ಪಾರಿತೋಷಕ ವಿತರಣೆ ಹಾಗೂ ವನಮಹೋತ್ಸವ ಸಮಾರಂಭ ಉದ್ಘಾಟಿಸಲಾಯಿತು.
ಹಾವೇರಿ: ಪ್ರಸ್ತುತ ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಮಟ್ಟದಲ್ಲಿ ಪ್ರೌಢಶಾಲೆಯನ್ನು ಅಂದಿನ ಕಾಲದಲ್ಲಿ ಸ್ಥಾಪಿಸಿ ಶಿವಬಸಪ್ಪ ಬಶೆಟ್ಟಿಯವರು ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಕುರುಬಗೊಂಡ ಗ್ರಾಮದ ಮೃತ್ಯುಂಜಯ ಪ್ರೌಢಶಾಲೆಯ ಸಂಸ್ಥಾಪಕರಾದ ಶಿವಬಸಪ್ಪ ಸೋಮಪ್ಪ ಬಶೆಟ್ಟಿಯವರ 29ನೇ ಪುಣ್ಯಸ್ಮರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ವನಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡುವ ಮೂಲಕ ಶಾಲೆ, ಗ್ರಾಮಕ್ಕೆ ಕೀರ್ತಿ ತರಬೇಕು. ವಿದ್ಯಾರ್ಥಿಗಳು ಟಿವಿ, ಮೊಬೈಲ್ ಕಡೆ ಗಮನ ಕೊಡದೆ ಆಟ, ಪಾಠಗಳಲ್ಲಿ ಕಡೆಗಷ್ಟೇ ಗಮನಕೊಟ್ಟು ಮುಂದೆ ಬರಬೇಕು ಎಂದರು.
ಬ್ಯಾಡಗಿಯ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಪಾರಿತೋಷಕ ವಿತರಣೆ ಮಾಡುವುದರಿಂದ ಈಗ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಪ್ರೇರೇಪಿಸಿದಂತಾಗುತ್ತದೆ. ದೇಶಿಯ ಸಂಸ್ಕೃತಿಗಳು ಉಳಿಯುತ್ತಿರುವುದು ಗ್ರಾಮೀಣ ಪ್ರದೇಶದಿಂದ ಮಾತ್ರ ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಪುಷ್ಪಾ ಶೆಲವಡಿಮಠ ಮಾತನಾಡಿ, ಶಿವಬಸಪ್ಪ ಬಶೆಟ್ಟಿಯವರು ನಿಸ್ವಾರ್ಥ ಸೇವೆಯಿಂದ ಸರಳ ಜೀವನ ನಡೆಸಿ ತಮಗೆ ಬಂದ ಆದಾಯದಲ್ಲಿ ದಾನ,ಧರ್ಮ, ನೀಡಿ ರಾಜಕೀಯ ರಂಗದಲ್ಲಿ ಸಹ ತಮ್ಮನ್ನು ತಾವು ತೊಡಿಗಿಸಿಕೊಡು ಇತರರಿಗೆ ಮಾದರಿಯಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಜ್ಯೋತಿ ಹಾವೇರಿ, ದ್ವಿತೀಯ ಸ್ಥಾನ ಪಡೆದ ಅಕ್ಷತಾ ಕಬ್ಬೂರ, ತೃತೀಯ ಸ್ಥಾನ ಪಡೆದ ವಿನಯ ಕಾಯಕದ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಕ್ಷಕಿಯರಾದ ಎಸ್.ಸಿ. ಅಕ್ಕಿಯವರನ್ನು ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಮೂರ್ತಿ ವೀರಭದ್ರಯ್ಯ ಶಾಸ್ತ್ರೀಗಳು ಹಿರೇಮಠ, ರುದ್ರಯ್ಯನವರು ಹಿರೇಮಠ,ಭರಮಗೌಡ್ರು ಹುಡೇದ, ಶಿವಪ್ಪನವರು ವರ್ದಿ, ಸುಭಾಷ್ ಹಾವೇರಿ, ಅಶೋಕ ಹಾರನಗೇರಿ, ರವೀಂದ್ರ ಬೆಳಲದವರ, ಶಿವಯೋಗೆಪ್ಪ ಅಂಗಡಿ, ಮಹಾಂತೇಶ ಬಶೆಟ್ಟಿಯವರ, ಶಾಂತಪ್ಪ ಬಶೆಟ್ಟಿಯವರ, ವಿ.ಎಂ.ಮಲ್ಲಪ್ಪನವರ, ಎಸ್.ಎ.ಹಡಗಲಿ ಇದ್ದರು.
ಗಾಯಕ ಶಿವಯೋಗಿ ಗುರ್ಜಮ್ಮನವರ ಹಾಗೂ ಹಿರಿಯ ಕ್ರೀಡಾಪಟು ಚಂದ್ರಶೇಖರ ಕೋಡಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಬಿ.ವಿ. ಕೋರಿ ಸ್ವಾಗತಿಸಿದರು. ಎಸ್.ಸಿ.ಅಕ್ಕಿ ನಿರೂಪಿಸಿದರು. ಎಂ.ಎಚ್. ಬಿಲ್ಲಣ್ಣನವರ ವರದಿ ವಾಚಿಸಿದರು. ಬಿ.ಎಂ.ತಾಂದಳೆ ಪರಿತೋಷಕ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಡಿ.ಶೋಭಾರಾಣಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.