ಶೇಂಗಾಕ್ಕೆ ತಗುಲಿದ ಕೀಟಬಾಧೆ ಪರಿಶೀಲನೆ
Team Udayavani, Feb 29, 2020, 4:43 PM IST
ಹಾವೇರಿ: ಬೇಸಿಗೆ ಶೇಂಗಾ ಬೆಳೆ ಬೆಳೆದ ರಾಣಿಬೆನ್ನೂರು ತಾಲೂಕಿನ ಜಮೀನುಗಳಿಗೆ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಅಶೋಕ ಪಿ., ಕೀಟ ತಜ್ಞ ಡಾ| ಆರ್. ವೀರಣ್ಣ ಹಾಗೂ ಡಾ. ಕೃಷ್ಣಾನಾಯಕ ಭೇಟಿ ನೀಡಿ ಬೇಸಿಗೆ ಶೇಂಗಾ ಬೆಳೆಯಲ್ಲಿ ಸುರುಳಿಪೂಚಿ ಕೀಟಬಾಧೆ ಹತೋಟಿ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಬೇಸಿಗೆ ಶೇಂಗಾ ಬೆಳೆದ ಹೊಲಗಳಲ್ಲಿ ಶೇಂಗಾ ಬೆಳೆ ಬಾಧಿಸುವ ಸುರುಳಿಪೂಚಿ ಕೀಟದ ಸಮೀಕ್ಷೆ ನಡೆಸಿದರು. ಕೀಟ ತಜ್ಞರು ರೈತರಿಗೆ ಬಾಧೆಯ ಲಕ್ಷಣ, ಹಂತ ಮತ್ತು ಸೂಕ್ತ ನಿರ್ವಹಣಾ ಕ್ರಮಗಳ ಬಗ್ಗೆ ಸಮಗ್ರವಾಗಿ ತಾಂತ್ರಿಕ ಮಾಹಿತಿ ನೀಡಿದರು.
ಲಕ್ಷಣಗಳು: ಸುರುಳಿಪೂಚಿ ಕೀಟವು ಶೇಂಗಾ ಬಿತ್ತಿದ 25 ದಿನಗಳ ನಂತರ ಕಂಡು ಬಂದು ಪ್ರಾರಂಭಿಕವಾಗಿ ಎಲೆಯ ಒಳಗೆ ಬಿಳಿ ಆಕಾರದ ಸುರಂಗ ಮಾರ್ಗ ಮಾಡಿ ಪತ್ರಹರಿತ್ತನ್ನು ತಿಂದು ನಾಶ ಮಾಡುತ್ತದೆ. ನಂತರ 2 ಮತ್ತು 3ನೇ ಮರಿ ಹಂತವು ಎಲೆಗಳನ್ನು ಮಡಿಚಿಕೊಂಡು ಒಳಗಡೆ ಅಡಗಿಕೊಂಡು ಎಲೆ ತಿಂದು ನಾಶಪಡಿಸಿದ ನಂತರ ಎಲೆಗಳು ಸುಟ್ಟಂತೆ ಕಾಣುತ್ತದೆ. ಮುಂದುವರಿದು ಕೋಶ ಹಂತವು ಮಡಚಿದ ಎಲೆಯೊಳಗೆ ಇದ್ದು, ಕೋಶ ಹಂತವನ್ನು ಮುಂದುವರಿಸಿ ನಂತರ ಪ್ರೌಢ ಕೀಟವಾಗಿ ತನ್ನ ಸಂತಾನೋತ್ಪತ್ತಿ ಕ್ರಿಯೆ ಮುಂದುವರಿಸುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.