ಗ್ರಾಮ ದೇವತೆ ಜಾತ್ರೆ: ಶುಭ ಕಾರ್ಯ ನಿಷಿದ್ಧ
Team Udayavani, Apr 8, 2022, 3:07 PM IST
ಗುತ್ತಲ: ಪಟ್ಟಣದಲ್ಲಿ ಏಪ್ರಿಲ್ 8 ರಿಂದ 15ರ ವರೆಗೆ ನಡೆಯುವ ಗ್ರಾಮ ದೇವತೆ ಜಾತ್ರೆ ಪ್ರಯುಕ್ತ ಒಂದು ವರ್ಷದವರೆಗೆ ಯಾವುದೇ ಶುಭ ಕಾರ್ಯಗಳಿಗೆ ನಿಷೇಧ ಹೇರಲಾಗಿದೆ.
ಹೌದು, ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೆಯ ತರುವಾಯ ಒಂದು ವರ್ಷದ ವರೆಗೆ ಶುಭ ಕಾರ್ಯಗಳನ್ನು ಮಾಡುವಂತಿಲ್ಲ ಎಂಬ ಪದ್ಧತಿ ಇರುವ ಕಾರಣ ಪಟ್ಟಣದ ಎಲ್ಲ ಸಮುದಾಯದವರು ಈ ಆಚರಣೆಯನ್ನು ತಪ್ಪದೇ ಪಾಲಿಸುತ್ತಾರೆ.
ಕಾರಣ ಏನು?: ಈ ರೀತಿ ಪದ್ಧತಿಯನ್ನು ಪೂರ್ವಜರು ಏಕೆ ಆಚರಣೆಗೆ ತಂದರು ಎಂಬುದನ್ನು ಗಮನಿಸಿದರೆ, ಗ್ರಾಮದಲ್ಲಿನ ಆರ್ಥಿಕ ನೀತಿ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಬಹಳ ವರ್ಷಗಳ ನಂತರ ಜಾತ್ರೆ ಜರುಗುವ ಕಾರಣ ಜಾತ್ರೆಯನ್ನೂ ಅದ್ಧೂರಿ ಹಾಗೂ ಆಡಂಬರದಿಂದ ಮಾಡುವ ಕಾರಣ ಪ್ರತಿಯೊಬ್ಬರು ತಮ್ಮ ಬಂಧು-ಬಳಗದವರನ್ನು ಕರೆಯಿಸಿ ಜಾತ್ರೆಗೆ ಹೆಚ್ಚಿನ ಹಣ ವ್ಯಯ ಮಾಡುತ್ತಾರೆ. ಈ ರೀತಿ ವ್ಯಯ ಮಾಡಿದ ನಂತರ ಪುನಃ ಮನೆಗಳಲ್ಲಿ ಶುಭ ಕಾರ್ಯಗಳು ಜರುಗಿದರೆ ಹಣಕಾಸಿನ ತೊಂದರೆ ಆಗಬಹುದು. ಈ ರೀತಿ ಹಣದ ಅವಶ್ಯಕತೆ ಬಿದ್ದು ಸಾಲ ಮಾಡಿ ತೊಂದರೆಗೆ ಒಳಗಾಗಬಾರದು ಎಂಬ ಸದುದ್ದೇಶದಿಂದ ಈ ಆಚರಣೆಯನ್ನು ತಂದಿರಬಹುದೆಂಬುದು ಅನೇಕರ ಅಭಿಪ್ರಾಯ. ಒಟ್ಟಿನಲ್ಲಿ ಐದು ವರ್ಷದ ನಂತರ ನಡೆಯುವ ಜಾತ್ರೆಯಿಂದಾಗಿ ಗುತ್ತಲ ಪಟ್ಟಣ ನವ ವಧುವಿನಂತೆ ಶೃಂಗಾರಗೊಳ್ಳುತ್ತಿದ್ದು, ಈಗಾಗಲೇ ಗ್ರಾಮ ದೇವಿ ದೇವಸ್ಥಾನದ ಜೊತೆಗೆ ಪಟ್ಟಣ ಸಂಪೂರ್ಣ ಶೃಂಗಾರಗೊಂಡಿದೆ.
ಗ್ರಾಮ ದೇವಿ ಜಾತ್ರೆ ನಿಯಮಗಳು:
-ಜಾತ್ರೆಗೆ ಅಂಕಿ ಹಾಕಿದ ದಿನದಿಂದ 9 ದಿನಗಳ ವರೆಗೆ ಪಟ್ಟಣದಲ್ಲಿ ಯಾರೂ ರೊಟ್ಟಿ ಮಾಡುವಂತಿಲ್ಲ.
-ಪಟ್ಟಣದಿಂದ ಯಾವುದೇ ವಸ್ತು ಹೊರಹೋಗುವಂತಿಲ್ಲ. ಹೋಗಲೇಬೇಕಾದರೆ ಗಡಿ ಕಾಯುವವರ ಬಳಿ ಸ್ವಲ್ಪ ಭಾಗ ಹಾಕಬೇಕು. ಇಲ್ಲವೇ, ಸ್ವಲ್ಪ ಹಣ ನೀಡಿ ತೆರಳಬೇಕು.
-ಜಾತ್ರೆ ಮುಗಿಯುವವರೆಗೂ ಪಟ್ಟಣದ ಎಲ್ಲ ರಸ್ತೆಗಳಲ್ಲಿ ಗಡಿ ಕಾಯುವ ಪಡೆಯ ನಿಯೋಜನೆ. ಜಾತ್ರೆಗೆ ಆಗಮಿಸುವ ಮನೆಯ ಹೆಣ್ಣು ಮಕ್ಕಳು, ಸೊಸೆಯಂದಿರು ಸೇರಿದಂತೆ ಇತರರಿಗೆ ಅಂಕಿ ಹಾಕುವ ಮುನ್ನವೇ ಉಡಿ ತುಂಬುವುದು ಕಡ್ಡಾಯ. ಅಂಕಿ ಹಾಕದ ನಂತರ ಉಡಿ ತುಂಬುವುದು ನಿಷಿದ್ಧ.
-ಜಾತ್ರೆಗೆ ಪ್ರತಿಯೊಬ್ಬರ ಮನೆಯಿಂದಲೂ ದೇಣಿಗೆ ನೀಡುವುದು ಕಡ್ಡಾಯ.
-ಶಂಭುಲಿಂಗಯ್ಯ ಶಿ. ಮಠದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.