ಮತದಾರರ ಪಟ್ಟಿ ಪರಿಶೀಲನಾ ಆರಂಭ
Team Udayavani, Sep 2, 2019, 12:38 PM IST
ಹಿರೇಕೆರೂರ: ತಹಶೀಲ್ದಾರ್ ಕಚೇರಿ ಸಭಾ ಭವನದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್ ಆರ್.ಎಚ್. ಭಾಗವಾನ ಮಾತನಾಡಿದರು.
ಹಿರೇಕೆರೂರ: ತಹಶೀಲ್ದಾರ್ ಕಚೇರಿ ಸಭಾ ಭವನದಲ್ಲಿ ಮತದಾರರ ಪಟ್ಟಿ ಪರಿಷ್ಕರಣ ಹಾಗೂ ಪರಿಶೀಲನೆ ನಿಮಿತ್ತ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಆರ್.ಎಚ್.ಭಾಗವಾನ್, ಚುನಾವಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಅವಶ್ಯಕತೆ ಇದ್ದು, ಇದು ಕೇವಲ ಕಾರ್ಯವಲ್ಲ ಇದು ನಮ್ಮ ಕರ್ತವ್ಯವಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಸೆ. 1 ರಿಂದ ಸೆ. 30ರ ವರೆಗೆ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದ ಸಲುವಾಗಿ ಆಯಾ ಪ್ರದೇಶ ಬಿಎಲ್ಒಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನಾ ಕಾರ್ಯ ಕೈಗೊಳ್ಳುವರಿದ್ದು, ಬಿಎಲ್ಒಗಳು ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮತದಾರರ ಸೇರ್ಪಡೆ, ಮತದಾರರ ತಗೆದುಹಾಕುವಿಕೆ ಮತದಾರರ ಪರಿಶೀಲನೆ ಮತ್ತು ದೃಢಿಕರಣ ಹಾಗೂ ಮತದಾರರಲ್ಲಿ ತಿದ್ದುಪಡಿ ಅಥವಾ ಇತರೆ ದೋಷ ಇದ್ದಲ್ಲಿ ಅವಶ್ಯ ದಾಖಲೆಗಳನ್ನು ನೀಡಿ ಸರಿಪಡಿಸಿಕೊಳ್ಳುವುದರ ಮೂಲಕ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ಯಶ್ವಸಿಗೊಳಿಸಬೇಕಿದೆ.
ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಮಾನ್ಯ ಸೇವಾ ಕೇಂದ್ರ, ಮತದಾರ ನೋಂದಣಿ ಅಧಿಕಾರಿಗಳ ಕಚೇರಿಯ ಮತದಾರರ ಪೂರಕ ಕೇಂದ್ರ, ಅಟಲ್ಜನ ಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ (ಗ್ರಾಪಂ), ಮತಗಟ್ಟೆ ಅಧಿಕಾರಿ, ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್, 1950 ಮತದಾರರ ಸಹಾಯವಾಣಿ ಸೇವಾ ಕೇಂದ್ರವನ್ನು ಸಂರ್ಪಕಿಸಬಹುದು ಎಂದರು.
ವೈದ್ಯಾಧಿಕಾರಿ ಝಡ್.ಆರ್.ಮಕಾನಂದಾರ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ ಬಳಿಗಾರ, ತೋಟಗಾರಿಕಾ ನಿರ್ದೇಶಕ ಸಿ.ಎನ್.ರಂಗಪ್ಪ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಕಿರಣ್ ಎಲ್, ದೈಹಿಕಿ ಶಿಕ್ಷಣಾಧಿಕಾರಿ ಪಿ.ಬಿ.ನಿಂಗನಗೌಡರ, ನಾಗರಾಜ ಕಟ್ಟಿಮನಿ, ಎಚ್.ವೈ.ಕೊಪ್ಪದ, ರವಿ ದಾಳೇರ, ಎಸ್.ಎಸ್.ಗಟ್ಟಿ, ಆರತಿ ಡೋಣಿ, ನೂರ್‌ಜಹಾನ ಬನ್ನಿಕೊಪ್ಪ, ಎನ್ ಎಸ್ ಬಣಕಾರ, ಜಯಮ್ಮ ದುರ್ಗ, ಸುಮಿತ್ರಾ ಸಾಲೇರ, ವಾಸವಂಬ ಹುಬ್ಬಳ್ಳಿ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಾವೇರಿ: ನಿರ್ವಹಣೆ ಇಲ್ಲದೇ ನೀರಿನ ಘಟಕ ಬಂದ್-ಸವಾಲಾದ ಶುದ್ಧ ನೀರು ಪೂರೈಕೆ…
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Haveri; ಪ್ರೀತಿ ವಿಚಾರಕ್ಕೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ
Haveri: ಘಟಿಕೋತ್ಸವದಲ್ಲಿ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ನೂತನ ಶಾಸಕ ಪಠಾಣ
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.