ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯ

Team Udayavani, Jul 11, 2019, 1:44 PM IST

11-July-29

ಹಾವೇರಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಾವೇರಿ: ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಅಂಗನವಾಡಿ ಕಾರ್ಯಕರ್ತೆಯರ ಬಾಕಿ ಇರುವ ಗೌರವಧನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಅಂಗನಾಡಿ ಕಾರ್ಯಕರ್ತೆಯರು ಬುಧವಾರ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು.

ಸೇವಾ ಜೇಷ್ಠತೆ ಆಧಾರದಲ್ಲಿ ವೇತನ ಜಾರಿ ಮಾಡಬೇಕು. 18,000 ಕನಿಷ್ಠ ವೇತನ ಜಾರಿ ಮಾಡಬೇಕು. ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಪಾಂಡಿಚೇರಿ, ಕೇರಳ ಮುಂತಾದ ರಾಜ್ಯಗಳಲ್ಲಿ 11ರಿಂದ 12 ಸಾವಿರ ವೇತನ ಹೆಚ್ಚಳವಾಗಿದೆ. ಆದ್ದರಿಂದ ರಾಜ್ಯದಲ್ಲಿಯೂ ಕೂಡಾ ಗೌರವಧನ ಹೆಚ್ಚಳವಾಗಬೇಕು ಮತ್ತು ಸೇವಾ ಜೇಷ್ಠತೆಯ ಆಧಾರದಲ್ಲಿ ವೇತನವನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ ಮಾತನಾಡಿ, ರಾಜ್ಯದ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಅಂಗನವಾಡಿಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಯೋಜನೆಯನ್ನು ಸಬಲೀಕರಿಸುವ ಬದಲಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಾಲಾತಿಯನ್ನು ಹೆಚ್ಚಿಸಲು ಅಂಗನವಾಡಿ ಕೇಂದ್ರದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಸರ್ಕಾರಿ ಶಾಲೆಗಳು ನಿರ್ವಹಿಸುವುದು ಪ್ರಾಯೋಗಿಕವಲ್ಲ. ಆದ್ದರಿಂದ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಅಂಗನವಾಡಿ ನೌಕರರ ಬೇಡಿಕೆಗಳ ಕುರಿತು ಹಲವು ಬಾರಿ ಮನವಿ ಪತ್ರಗಳು, ಹೋರಾಟಗಳು, ಜಂಟೀ ಸಭೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಪ್ರಮುಖ ಬೇಡಿಕೆಗಳಿಗೆ ಸೂಕ್ತ ಪರಿಹಾರ ಸಿಗದಿರುವುದು ದುರಾದೃಷ್ಟಕರವಾಗಿದೆ ಎಂದರು.

ಅಂಗನವಾಡಿ ನೌಕರರ ಸಂಘದ ಮುಖಂಡೆ ಉಮಾ ಪಾಟೀಲ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಎಲ್ಲ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಮಾತೃಪೂರ್ಣ ಯೋಜನೆಯ ನಂತರ ಸಹಾಯಕಿಯರ ಕೆಲಸ ದುಪ್ಪಟ್ಟು ಆಗಿರುವುದರಿಂದ ಕಾರ್ಯಕರ್ತೆಯರಿಗೆ ನೀಡುವ ಗೌರವಧನದ ಶೇ.75ರಷ್ಟು ಸಹಾಯಕಿಯರಿಗೂ ಕೊಡಬೇಕು. ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ಮುಖಂಡರಾದ ಹೇಮಾ ಆಸಾದಿ, ಹೇಮಾವತಿ ಎಲಿ, ಗೌರಮ್ಮ ನಾಯ್ಕರ, ಪರಮೇಶ್ವರಿ ಮಧ್ಯಾಹ್ನದ, ಶಶಿಕಲಾ ಪುರಾಣಿಕಮಠ, ಕವಿತಾ ನಾಡಗೇರ, ಜ್ಯೋತಿ ಕದರಮಂಡಲಗಿ, ಮಲ್ಲಮ್ಮ ಛಲವಾದಿ, ಸಿಐಟಿಯು ಮುಖಂಡರಾದ ಮಹಾಂತೇಶ ಎಲಿ, ವಿ.ಕೆ. ಬಾಳಿಕಾಯಿ, ಎಸ್‌ಎಫ್‌ಐ ಮುಖಂಡ ಬಸವರಾಜ ಭೋವಿ, ಸಾಮಾಜಿಕ ಪರಿವರ್ತನಾ ಜನಾದೋಲನದ ಸಂಚಾಲಕಿ ಹಸೀನಾ ಹೇಡಿಯಾಲ, ಡಿವೈಎಫ್‌ಐ ಮುಖಂಡ ಮುಕ್ತಾನಂದ ಹಿರೇಮನಿ ಮುಂತಾದವರು ಇದ್ದರು.

ಟಾಪ್ ನ್ಯೂಸ್

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Rajkot: ವಕ್ಫ್ ಆದೇಶವೆಂದು ಅಂಗಡಿಗಳ ತೆರವು: 9 ಮಂದಿ ಬಂಧನ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆDelhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

Delhi Elections: ಸಿಎಂ ಆತಿಶಿ ವಿರುದ್ಧ ಕಾಂಗ್ರೆಸ್‌ನ ಅಲ್ಕಾ ಲಂಬಾ ಕಣಕ್ಕೆ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kambala

Kambala; ದೇವರ ಕಂಬಳ ಖ್ಯಾತಿಯ ಹೊಕ್ಕಾಡಿಗೋಳಿ ಕಂಬಳ 

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

death

Kinnigoli: ಔಷಧ ಸಿಂಪಡಿಸುವಾಗ ಕುಸಿದು ಬಿದ್ದು ಕೃಷಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kambala

Kambala; ದೇವರ ಕಂಬಳ ಖ್ಯಾತಿಯ ಹೊಕ್ಕಾಡಿಗೋಳಿ ಕಂಬಳ 

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

1-deeee

Udupi; ಮಕ್ಕಳ ರಕ್ಷಣೆ ಕಾಯ್ದೆ ಅನುಷ್ಠಾನ ಅಗತ್ಯ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.