ಹೆಬ್ಬೆಯಲ್ಲಿ ಭವಾನಿಶಂಕರಸ್ವಾಮಿ ಜಾತ್ರಾ ಸಂಭ್ರಮ
ನಿಸರ್ಗದ ಮಡಿಲಲ್ಲಿ ನೆಲೆಸಿದ ಈಶ್ವರ ಮೂರು ದಿನಗಳ ಕಾಲ ನಡೆಯಲಿದೆ ಜಾತ್ರಾ ಮಹೋತ್ಸವ
Team Udayavani, Apr 29, 2019, 1:28 PM IST
ಎನ್.ಆರ್.ಪುರ: ಹೆಬ್ಬೆಯಲ್ಲಿರುವ ಭವಾನಿಶಂಕರೇಶ್ವರಸ್ವಾಮಿ ದೇವಾಲಯ.
ಎನ್.ಆರ್.ಪುರ: ತಾಲೂಕಿನ ಹೆಬ್ಬೆ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಹೆಬ್ಬೆಭವಾನಿ ಶಂಕರೇಶ್ವರ ಸ್ವಾಮಿ ರಥೋತ್ಸವವು ಸೋಮವಾರದಿಂದ ಆರಂಭವಾಗಲಿದ್ದು, 30ರಂದು ರಥೋತ್ಸವ ನಡೆಯಲಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಭಯಾರಣ್ಯಗಳಲ್ಲಿ ತಾಲೂಕಿನ ವ್ಯಾಪ್ತಿಯ ಹೆಬ್ಬೆ ಅಭಯಾರಣ್ಯವೂ ಒಂದಾಗಿದ್ದು, ಅರಣ್ಯ ಹಾಗೂ ವನ್ಯಜೀವಿಗಳ ಸಂತತಿ ಅಳಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಈ ಅಭಯಾರಣ್ಯದಲ್ಲಿ ಆನೆ, ಹುಲಿ, ಜಿಂಕೆ ಮತ್ತಿತ್ತರ ಪ್ರಾಣಿ ಸಂಕುಲ ಮತ್ತು ಹರಿದ್ವರ್ಣ ಕಾಡು ಇಲ್ಲಿದೆ. ಇಂತಹ ಪ್ರಕೃತಿದತ್ತವಾದ ಪ್ರದೇಶದ ಮಧ್ಯದಲ್ಲಿರುವ ದೇವಸ್ಥಾನವೊಂದು ಎಲ್ಲರನ್ನು ಆಕರ್ಷಿಸುತ್ತದೆ.
ಈ ಅಭಯಾರಣ್ಯದ ನಡುವಿನ ಹೇರಂಭ ಕ್ಷೇತ್ರದಲ್ಲಿರುವುದು ಹೆಬ್ಬೆಭವಾನಿಶಂಕರ ಸ್ವಾಮಿ ದೇವಸ್ಥಾನ. ಇಲ್ಲಿರುವ ದೇವರು ಭೂಮಿಯಿಂದ ಉದ್ಭವಾದ ಲಿಂಗವಾಗಿದ್ದು, ಭದ್ರಾ ನದಿಯ ದಡದಲ್ಲಿರುವ ಕಳಸ, ಖಾಂಡ್ಯ, ಹೆಬ್ಬೆ, ಸೋಂಪುರ ಎಂಬ ಪಂಚಲಿಂಗಗಳಲ್ಲಿ ಇದು ಒಂದಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹಲವು ಪ್ರತೀತಿಗಗಳಿವೆ.
ಹಿಂದೆ ಈ ಕ್ಷೇತ್ರದಲ್ಲಿ ಹೇರಂಭ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಇದಕ್ಕೆ ಹೇರಂಭ ಎಂಬ ಹೆಸರು ಬಂತು ನಂತರ ಹೆಬ್ಬೆ ಆಯಿತು.ಅಲ್ಲದೇ ಅಗಸ್ತ್ಯ ಮುನಿಗಳು ಇದನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ. ಹಿಂದಿನ ಕಾಲದಲ್ಲಿ ಮಹಾಶಿವರಾತ್ರಿಯಂದು ವಿಜೃಂಭಣೆಯ ರಥೋತ್ಸವ ನಡೆಯುತ್ತಿತ್ತು.
ಭದ್ರಾ ಆಣೆಕಟ್ಟು ನಿರ್ಮಾಣವಾದಾಗಿನಿಂದ ಈ ಸ್ಥಳ ಸಂಪೂರ್ಣ ಜಲಾವೃತವಾಗಿದ್ದರಿಂದ ಪ್ರಸ್ತುತ ಹಿನ್ನೀರು ಕಡಿಮೆಯಾಗುವ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಈ ಪ್ರದೇಶಗದಲ್ಲಿ ಆನಾದಿಕಾಲದಿಂದಲೂ ವಾಸವಾಗಿದ್ದ ಗ್ರಾಮಸ್ಥರನ್ನು ಅಭಯಾರಣ್ಯದ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಕಾರಣಕ್ಕಾಗಿ ಸ್ಥಳಾಂತರಿಸಿ ಬೇರೆಡೆ ಪುನರ್ವಸತಿ ಕಲ್ಪಿಸಲಾಗಿದೆ.
ದೇವಸ್ಥಾನಕ್ಕೆ ಹೋಗುವ ದಾರಿ: ಈ ಐತಿಹಾಸಿಕ ಸ್ಥಳಕ್ಕೆ ಹೋಗಬೇಕಾದರೆ ಎನ್.ಆರ್.ಪುರದಿಂದ ಹಂತುವಾನಿ ಗ್ರಾಮದವರೆಗೆ ಬಸ್ ಸೌಕರ್ಯವಿದೆ. ಅಲ್ಲಿಂದ ಮೋರಿಮಠ ಎಂಬ ಗ್ರಾಮಕ್ಕೆ ನಡೆದುಕೊಂಡು ಹೋಗಬೇಕು. ಖಾಸಗಿ ವಾಹನವಿದ್ದರೆ ಗ್ರಾಮದವರೆಗೂ ಹೋಗಬಹುದು. ನಂತರ ಮಾರ್ಗ ಮಧ್ಯದಲ್ಲಿ ಹರಿಯುವ ಭದ್ರಾ ನದಿಯನ್ನು ದೋಣಿ ಅಥವಾ ಉಕ್ಕಡದ ಮೂಲಕ ದಾಟಬೇಕಾಗುತ್ತದೆ. ಪ್ರತಿದಿನವೂ ಈ ಕ್ಷೇತ್ರಕ್ಕೆ ಹೋಗಲು ಅವಕಾಶವಿರುವುದಿಲ್ಲ. ಏಕೆಂದರೆ ಅಭಯಾರಣ್ಯ ಪ್ರದೇಶ, ಹಾಗಾಗಿ ಜಾತ್ರೋತ್ಸವ ನಡೆಯುವ ನಾಲ್ಕು ದಿನಗಳ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅನುಮತಿ ಇರುವುದರಿಂದ ಈ ಸ್ಥಳಕ್ಕೆ ಹೋಗಲು ಅವಕಾಶವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.