ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ
ಅಸಹಾಯಕರ ಬದುಕು ಕಟ್ಟಿಕೊಡಲು ಸಹಾಯ ಮಾಡಲು ಮುಂದಾಗಿ: ಪೂರ್ಣಿಮಾ
Team Udayavani, Aug 17, 2019, 1:41 PM IST
ಹಿರಿಯೂರು: ನೆರೆ ಸಂತ್ರಸ್ತರಿಗೆ ಬೆಡ್ ಶೀಟ್ ಕಳುಹಿಸಿಕೊಡಲಾಯಿತು.
ಹಿರಿಯೂರು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಆ ಭಾಗದ ಜನರ ಬದುಕುಗಳು ಕೊಚ್ಚಿ ಹೋಗಿದೆ. ಸಂತ್ರಸ್ತರ ಬದುಕು ಕಟ್ಟಿಕೊಡಲು ಮಾನವೀಯತೆ ನೆಲೆಯಲ್ಲಿ ನಾವು, ನೀವೆಲ್ಲರೂ ಸಹಾಯ ಮಾಡೋಣ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಬೈಪಾಸ್ ರಸ್ತೆಯ ರಂಜಿತಾ ಹೋಟೆಲ್ ಸರ್ಕಲ್ನಿಂದ ನೆಹರೂ ಸರ್ಕಲ್ ವರೆಗೆ ಸಂಸದ ಎ.ನಾರಾಯಣಸ್ವಾಮಿ, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ನಗರಸಭೆ ಕಮಿಷನರ್ ಎಚ್.ಮಹಂತೇಶ್ ಅವರೊಂದಿಗೆ ತುಂತುರು ಮಳೆಯಲ್ಲೇ ಪಾದಯಾತ್ರೆ ನಡೆಸಿದ ಶಾಸಕರು, ನಗರದ ಪ್ರಧಾನ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಸ್ಥರಿಂದ ನೆರೆ ಸಂತ್ರಸ್ತರಿಗೆ ದೇಣಿಗೆ ಮತ್ತು ಅಗತ್ಯ ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶಕ್ತಿಗಣಪತಿ ಪೂಜಾ ಸಮಿತಿ ಮತ್ತು ವಾಣಿಜ್ಯೋದ್ಯಮಿಗಳಾದ ಕೆ.ಎಸ್. ಮಹಾಬಲೇಶ್ವರ ಶೆಟ್ಟಿ ಅವರು ಸಂಯುಕ್ತವಾಗಿ ಸುಮಾರು 120 ಸೊಲ್ಲಾಪುರ ಬೆಡ್ ಶೀಟ್‌ಗಳನ್ನು ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷರು ಚಂದ್ರಶೇಖರ್, ಮಂಜುಳಾ, ನಗರಸಭೆ ಸದಸ್ಯರಾದ ಬಾಲಕೃಷ್ಣ, ಮಹೇಶ್ ಪಲ್ಲವ, ಸಿದ್ದನಾಯ್ಕ, ಬಿ.ಆರ್. ರಾಜಶೇಖರ್, ರೆಡ್ ಕ್ರಾಸ್ ಉಪಾಧ್ಯಕ್ಷ ಎಚ್.ಎಸ್.ಸುಂದರ್‌ರಾಜ್, ಮಹಾಬಲೇಶ್ವರಶೆಟ್ಟಿ, ಬಿ.ಕೆ.ನಾಗಣ್ಣ, ಎಂ.ಎಸ್.ರಾಘವೇಂದ್ರ, ಪಿ.ಆರ್.ಸತೀಶ್ ಬಾಬು, ಕೇಶವಮೂರ್ತಿ, ವೈ.ಎಸ್.ಉಮಾಶಂಕರ್, ತ್ರಯಂಭಕೇಶ್ವರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.