ಭಾರತದಲ್ಲಿ ಜಾತೀಯತೆ ಜೇನುಗೂಡಿದ್ದಂತೆ
ಬಸವಣ್ಣನ ಕನಸಿನ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಮುರುಘಾ ಮಠ ಯತ್ನ: ಮುರುಘಾ ಶರಣರು
Team Udayavani, Aug 14, 2019, 12:19 PM IST
ಹೊಳಲ್ಕೆರೆ: ಅವಿನಹಟ್ಟಿಯಲ್ಲಿ ನಡೆದ 'ಕಲ್ಯಾಣ ದರ್ಶನ ಕಾರ್ಯಕ್ರಮದಲ್ಲಿ ಡಾ| ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು.
ಹೊಳಲ್ಕೆರೆ: ಬಸವ ಸಮಾಜ ಎಂದರೆ ಶರಣ ಸಮಾಜ. ಅದು ಅಕ್ಕರೆ, ಅಂತಃಕರಣ ಹಾಗೂ ಅಪ್ಪಿಕೊಳ್ಳುವ ಸಮಾಜವಾಗಿತ್ತು ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮುರುಘಾ ಮಠದ ಬಸವ ಕೇಂದ್ರ ಹಾಗೂ ಅವಿನಹಟ್ಟಿ ಗ್ರಾಮಸ್ಥರ ಸಹಯೋಗದಲ್ಲಿ ತಾಲೂಕಿನ ಆವಿನಹಟ್ಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕಲ್ಯಾಣ ದರ್ಶನ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆರ್ಶಿವಚನ ನೀಡಿದರು.
ನಮಗೆಲ್ಲ ಎರಡು ಜಾತಿಗಳು ಕಾಣುತ್ತವೆ. ಮುಟ್ಟಿಸಿಕೊಳ್ಳುವ ಜಾತಿ ಅಂದರೆ ಬುದ್ಧ, ಬಸವ, ಪೈಗಂಬರ್, ಕ್ರೈಸ್ತರ ಜಾತಿಗಳಾಗಿದ್ದರೆ ಮುಟ್ಟಿಸಿಕೊಳ್ಳದೇ ಇರುವುದು ಎಂದರೆ ಜನರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದಂತೆ ದೂರವಿರುವುದು. ಎಲ್ಲ ಸಮಾಜ ಸುಧಾರಕರು ಅಸ್ಪ್ರಶ್ಯತೆಯ ವಿರುದ್ಧ ಹೋರಾಡಿದರು. ಹಾಗಾಗಿ ಸಮಾಜದ ಕಲ್ಯಾಣಕ್ಕೆ ಶ್ರಮಿಸಿದ ಸರ್ವ ದಾರ್ಶನಿಕರ ಆಚಾರ-ವಿಚಾರಗಳನ್ನು ನೆನಪಿಸುವ ಕೆಲಸವನ್ನು ಮುರುಘಾ ಮಠ ಮಾಡುತ್ತಿದೆ ಎಂದರು.
ಮುರುಘಾ ಮಠ ಕೈಗೊಳ್ಳುತ್ತಿರುವ ಬಸವ ಚಿಂತನೆಯ ‘ಕಲ್ಯಾಣ ದರ್ಶನ’ ಕಾರ್ಯಕ್ರಮ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಮುರುಘಾ ಮಠ ಎಂದಿಗೂ ಎಲ್ಲ ಸಮುದಾಯದವರ ಬಳಿ ಹೋಗುತ್ತಿದೆ. ಸಮಾಜದಲ್ಲಿರುವ ಜಾತಿ ಕಂದಕವನ್ನು ನಿವಾರಣೆ ಮಾಡಲು ಬಸವಣ್ಣನವರ ಚಿಂತನೆಯನ್ನು ಬಿತ್ತರಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ಜಾತೀಯತೆ ಎನ್ನುವುದು ಜೇನುಗೂಡು ಇದ್ದಂತೆ. ಅದನ್ನು ಮುಟ್ಟುವುದು ಸುಲಭದ ಮಾತಲ್ಲ. ಆದರೆ ಅದರಲ್ಲಿ ಒಂದು ಸಮ ಸಮಾಜದ ಕಳಕಳಿ ಇದೆ. ಹಲವಾರು ಸಮಸ್ಯೆಗಳ ಮಧ್ಯೆಯೂ ಮುರುಘಾ ಮಠ ಜಾತ್ಯತೀತ ಸಮಾಜವನ್ನು ಕಟ್ಟುವ ಮೂಲಕ ಬಸವಣ್ಣನ ಚಿಂತನೆಯನ್ನು ಸಾಕಾರಗೊಳಿಸಲು ಯತ್ನಿಸುತ್ತಿದೆ ಎಂದು ತಿಳಿಸಿದರು.
‘ಮೌಡ್ಯಮುಕ್ತ ಸಮಾಜ’ ವಿಷಯದ ಕುರಿತು ಸಾಹಿತಿ ನಿರಂಜನ ದೇವರಮನೆ ಉಪನ್ಯಾಸ ನೀಡಿ, 12ನೇ ಶತಮಾನ ಮಹತ್ವಪೂರ್ಣವಾದುದು. ಸಮಾಜದ ಎಲ್ಲ ಜನರನ್ನು ಒಗ್ಗೂಡಿಸುವುದು ಬಸವಾದಿ ಶರಣರ ಕೆಲಸವಾಗಿತ್ತು. ಅಂದು ಕಾಯಕವೇ ಶ್ರೇಷ್ಠವಾಗಿತ್ತು. ಕಾಯಕದಲ್ಲಿ ದೇವರನ್ನು ಕಾಣಬೇಕು. ಕ್ರಿಯಾ ಶುದ್ಧಿ, ಭಾವ ಶುದ್ಧಿ ನಮ್ಮದಾಗಬೇಕು. ಕೆಲವು ಧಾರ್ಮಿಕರು ಮೌಡ್ಯ, ಕಂದಾಚಾರಗಳನ್ನು ನಮ್ಮಂತಹ ಜ್ಞಾನವಿಲ್ಲದವರ ಮೇಲೆ ಹೇರಿದರು. ಆದರೆ ವಚನಕಾರರು ಇದನ್ನು ಕಿತ್ತೂಗೆದರು. ಕಂದಾಚಾರಗಳಿಂದ ಮುಕ್ತರಾಗಲು ಚಲನಶೀಲರಾಗಬೇಕು. ಸೂತಕಗಳನ್ನು ಬಿಟ್ಟು ಬಿಡಬೇಕು. ಅರಿವನ್ನು ಪಡೆಯಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಉಮಾಪತಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಬಹಳಷ್ಟು ಜನ ಯಾದವ ಸಮುದಾಯಕ್ಕೆ ಸೇರಿದವರು. ನಮ್ಮಲ್ಲಿ ಮೂಢನಂಬಿಕೆ ಜಾಸ್ತಿ ಇದೆ. ಮುರುಘಾ ಶರಣರು ಬರುವುದರಿಂದ ನಮ್ಮ ಊರು ಆವಿನಹಟ್ಟಿ, ಅರಿವಿನ ಹಟ್ಟಿಯಾಗಬೇಕು. ಊರಿನಲ್ಲಿ ಹಸು ಮತ್ತು ಎತ್ತುಗಳನ್ನು ಸಾಕುತ್ತಿದ್ದರು. ನಮ್ಮೂರಿನ ಎತ್ತುಗಳು ದೆಹಲಿಗೆ ಹೋದಾಗ ಮಹಾರಾಜರು ಬಹುಮಾನ ಕೊಟ್ಟ ಪರಂಪರೆ ಇದೆ. ಸಾಕಷ್ಟು ಮೌಡ್ಯ ಇದ್ದ ನಮ್ಮ ಊರಿನಲ್ಲಿ ಇಂದು ಬಹಳಷ್ಟು ಜನ ವಿದ್ಯಾವಂತರಾಗಿದ್ದಾರೆ. ಆದರೂ ಮೌಡ್ಯವಿದೆ. ನಮ್ಮ ಊರಿಗೂ ಮುರುಘಾ ಮಠಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಶ್ರೀ ಕೇತೇಶ್ವರ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ತಿಳುವಳ್ಳಿ ಸ್ವಾಮಿಗಳು, ಮುಖಂಡರಾದ ತಿರುಮಲೇಶ್, ನಾಗರಾಜಪ್ಪ, ಬಿ.ಪಿ. ಓಂಕಾರಪ್ಪ ಮತ್ತಿತರರು ಭಾಗವಹಿಸಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ರಾಮಚಂದ್ರಪ್ಪ ಸ್ವಾಗತಿಸಿದರು. ಶ್ರೀನಿವಾಸ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.