ಕೃಷಿ ಸಮೃದ್ಧಿ, ಜಾನುವಾರು ಆರೋಗ್ಯಕ್ಕಾಗಿ ಅಜ್ಜಿ ಹಬ್ಬ!
ಅಜ್ಜಿ ಹಬ್ಬವನ್ನು ಹೋಳಿಗೆ ಹಬ್ಬ-ಅಮ್ಮನ ಹಬ್ಬ ಎಂದೂ ಕರೆಯುವುದುಂಟು
Team Udayavani, Jul 20, 2019, 1:21 PM IST
ಹೊನ್ನಾಳಿ: ತಾಲೂಕಿನ ಬಲಮುರಿ, ಎಚ್. ಗೋಪಗೊಂಡನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಶುಕ್ರವಾರ ಸಡಗರ-ಸಂಭ್ರಮಗಳಿಂದ ಅಜ್ಜಿ ಹಬ್ಬ ಆಚರಿಸಿದರು.
ಹಬ್ಬಕ್ಕೆ ಅಗತ್ಯವಾದ ಮಣ್ಣಿನ ಕುಡಿಕೆ, ಬಳೆ ಬಂಗಾರ, ತೆಂಗಿನಕಾಯಿ, ಬಾಳೆಹಣ್ಣು ಮತ್ತಿತರ ಸಾಮಗ್ರಿಗಳನ್ನು ಶುಕ್ರವಾರ ಹೊನ್ನಾಳಿ ಪಟ್ಟಣದಲ್ಲಿ ಜನತೆ ಖರೀದಿಸಲು ಮುಗಿಬಿದ್ದಿದ್ದ ದೃಶ್ಯ ಕಂಡುಬಂತು.
ಅಜ್ಜಿ ಹಬ್ಬದ ದಿನ ಹೋಳಿಗೆ-ಸೀಕರಣೆ ಮತ್ತಿತರ ಅಡುಗೆ ಮಾಡಿ ಊಟ ಮಾಡುವ ವಾಡಿಕೆ. ಅದರಂತೆ, ಸೀಕರಣೆ ಮಾಡಲು ಬೇಕಾದ ಮಾವಿನಹಣ್ಣನ್ನು ಖರೀದಿಸಲು ಜನತೆ ಮುಗಿಬಿದ್ದಿದ್ದರು. ಮಾವಿನಹಣ್ಣಿನ ಕೊನೇ ಸೀಜನ್ ಆದ ಕಾರಣ ಬೆಲೆ ಕೊಂಚ ಹೆಚ್ಚಾಗಿತ್ತು.
ಮಳೆಗಾಲದ ಆಷಾಢ ಮಾಸದಲ್ಲಿನ ಶುಕ್ರವಾರ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಬಲಮುರಿ ಗ್ರಾಮದಲ್ಲಿ ಮೂರನೇ ಆಷಾಢ ಶುಕ್ರವಾರ ಹಬ್ಬ ಆಚರಿಸಲಾಯಿತು.
ಮಳೆಗಾಲದಲ್ಲಿ ಜಾನುವಾರು ಗಳಿಗೆ ಬರುವ ಸಾಮಾನ್ಯ ಕಾಯಿಲೆಗಳಾದ ಗಳಲೆ ರೋಗ, ಕಾಲು-ಬಾಯಿ ಜ್ವರ, ಗದ್ದ ಬಾವು ಮತ್ತಿತರ ಕಾಯಿಲೆಗಳು ಬಾರದಿರಲಿ, ಜಾನುವಾರುಗಳು ಆರೋಗ್ಯದಿಂದ ಇರಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುತ್ತಾರೆ ಬಲಮುರಿ ಗ್ರಾಮದ ಎ.ಇ. ಮಲ್ಲಿಕಾರ್ಜುನ್.
ಅಜ್ಜಿ ಹಬ್ಬದ ದಿನ ಗ್ರಾಮಸ್ಥರು ರಾತ್ರಿ ವೇಳೆ ಗ್ರಾಮದಲ್ಲಿನ ದುರುಗಮ್ಮನ ದೇವಸ್ಥಾನಕ್ಕೆ ತೆರಳುತ್ತಾರೆ. ಹಾಲು, ಅನ್ನ ಮತ್ತಿತರ ಖಾದ್ಯಗಳ ಎಡೆಯನ್ನು ದೇವಿಗೆ ಅರ್ಪಿಸುತ್ತಾರೆ. ನಂತರ, ಮನೆಗೆ ಬಂದು ಅಜ್ಜಿ ಹಬ್ಬದ ವಿಧಿ-ವಿಧಾನಗಳನ್ನು ನೆರವೇರಿಸಿ, ಎಡೆ ಮಾಡಿ ಎಲ್ಲರೂ ಭೋಜನ ಸವಿಯುತ್ತಾರೆ. ಈ ಹಬ್ಬದ ವಿಶೇಷವೇನೆಂದರೆ, ಮನೆಯ ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಎತ್ತುಗಳನ್ನು ಈ ದಿನ ಬೇಸಾಯಕ್ಕೆ ಬಳಸುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.