ಡಾ| ಎಚ್.ಟಿ. ಸ್ಮಾರಕ ಭವನಕ್ಕೆ ಕಾಯಕಲ್ಪ
ಹೊಸ ಸಂಪದ ಸಂಘಟನೆಯಿಂದ ಕಾರ್ಯ •ಓದುಗರ ಆಕರ್ಷಿಸುತ್ತಿದೆ ಗ್ರಂಥಾಲಯ
Team Udayavani, Jun 15, 2019, 10:17 AM IST
ಹೊನ್ನಾಳಿ: ಸುಣ್ಣ ಬಣ್ಣದಿಂದ ಕಂಗೊಳಿಸುತ್ತಿರುವ ಭವನ.
ಹೊನ್ನಾಳಿ: ಸಾರಸ್ವತ ಲೋಕಕ್ಕೆ ಅದ್ಭುತವಾದ ಕೊಡುಗೆ ನೀಡಿದ ಸಾಹಿತಿ ಡಾ| ಎಚ್.ತಿಪ್ಪೇರುದ್ರಸ್ವಾಮಿ ಸ್ಮಾರಕ ಗ್ರಂಥಭವನಕ್ಕೆ ಹೊಸ ಸಂಪದ ಸಂಘದ ಪದಾಧಿಕಾರಿಗಳು ಕಾಯಕಲ್ಪ ನೀಡಿ ಓದುಗರು ಗ್ರಂಥಭವನಕ್ಕೆ ಬರುವಂತೆ ಮಾಡಿದ್ದಾರೆ.
ಡಾ| ಎಚ್. ತಿಪ್ಪೇರುದ್ರಸ್ವಾಮಿ ಅವರು ಬಹು ದೊಡ್ಡ ಸಾಹಿತಿ ಹಾಗೂ ನಾಡು ಕಂಡ ಉತ್ತಮ ಕವಿ. ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಜನಿಸಿ ಮೈಸೂರು ಹಾಗೂ ವಿವಿಧ ಸ್ಥಳಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಕದಳಿ ಕರ್ಪೂರ, ಕರ್ತಾರನ ಕಮ್ಮಟ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದರು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಡಾ| ಎಚ್.ತಿಪ್ಪೇರುದ್ರಸ್ವಾಮಿ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
ಇಂತಹ ಸಾಹಿತಿ ಸ್ಮಾರಕ ಗ್ರಂಥ ಭವನದ ಕಟ್ಟಡ ಸುಣ್ಣ ಬಣ್ಣವಿಲ್ಲದೆ ಸೊರಗಿತ್ತು. ಕಟ್ಟಡದ ಕಿಟಕಿ-ಬಾಗಿಲಗಳು ಮುರಿದು ಹೋಗಿದ್ದವು. ಸ್ಮಾರಕ ಗ್ರಂಥ ಭವನದ ದುಸ್ಥಿತಿ ಕುರಿತು ಉದಯವಾಣಿ ವರದಿ ಪ್ರಕಟಿಸಿತ್ತು. ವರದಿ ಫಲಶೃತಿ ಎಂಬಂತೆ ಡಾ| ಎಚ್.ತಿಪ್ಪೇರುದ್ರಸ್ವಾಮಿ ಗ್ರಂಥ ಭವನಕ್ಕೆ ಹೊಸರೂಪ ನೀಡಲಾಗಿದೆ.
ಹೊಸ ಸಂಪದ ಅಧ್ಯಕ್ಷ, ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ, ಉಪಾಧ್ಯಕ್ಷ ಡಾ| ರಾಜಕುಮಾರ್, ಕಾರ್ಯದರ್ಶಿ ಎಚ್.ಎಂ.ಅರುಣ್‌ಕುಮಾರ್ ಹಾಗೂ ಸದಸ್ಯರು ಡಾ| ಎಚ್.ಟಿ. ಸ್ಮಾರಕಭವನಕ್ಕೆ ಸುಂದರ ರೂಪ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಸ್ಮಾರಕ ಭವನದ ಎಲ್ಲಾ ಕಿಟಕಿ, ಬಾಗಿಲುಗಳನ್ನು ಹೊಸದಾಗಿ ಹಾಕಿಸಿ, ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಸಿ, ಸ್ಮಾರಕ ಭವನದ ಮೇಲಿನ ಹೆಸರನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಒಳಗಿದ್ದ ಮುರಿದ ಕುರ್ಚಿಗಳನ್ನು ತೆರವುಗೊಳಿಸಿ 50 ಹೊಸ ಕುರ್ಚಿಗಳನ್ನು ಹಾಕಿಸಲಾಗಿದೆ.
ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಡಾ| ಎಚ್. ತಿಪ್ಪೇರುದ್ರಸ್ವಾಮಿ ಸ್ಮಾರಕ ಗ್ರಂಥ ಭವನ ಹೊಸರೂಪ ಕಂಡು ಓದುಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ.
ಚಿಂತನ ಸಂಜೆ: ಪ್ರತಿ ಶನಿವಾರ ಮಧ್ಯಾಹ್ನ 3.30ಕ್ಕೆ ಸ್ಮಾರಕ ಗ್ರಂಥ ಭವನದ ಎದುರು ಚಿಂತನ ಸಂಜೆ ಆಯೋಜಿಸಲಾಗುತ್ತದೆ.
ಸಾಹಿತಿಗಳು, ಉಪನ್ಯಾಸಕರು, ಚಿಂತಕರು ಭಾಗವಹಿಸಿ ಒಂದೆರೆಡು ಗಂಟೆ ಕಾಲ ಚಿಂತನ ಮಂಥನ ಕಾರ್ಯದಲ್ಲಿ ತೊಡಗುತ್ತಾರೆ. ಪ್ರತಿ ಶನಿವಾರ ಒಬ್ಬ ಸಾಹಿತಿ ಒಂದು ವಿಷಯದ ಕುರಿತು ಮಾತನಾಡುತ್ತಾರೆ. ನಂತರ ಆ ವಿಷಯದ ಸಮಗ್ರ ವಿಶ್ಲೇಷಣೆ ನಡೆಯುತ್ತದೆ. ಬಲು ಆಸಕ್ತಿಯಿಂದ ಸಾಗುವ ಈ ಕಾರ್ಯಕ್ರಮ ಒಮ್ಮೊಮ್ಮೆ ರಾತ್ರಿ 7.30ರವರೆಗೂ ಮುಂದುವರಿಯುತ್ತದೆ.
ನಮ್ಮ ತಾಲೂಕಿನವರೇ ಆದ ಡಾ| ಎಚ್.ತಿಪ್ಪೇರುದ್ರಸ್ವಾಮಿ ಸ್ಮಾರಕ ಗ್ರಂಥ ಭವನವನ್ನು ಈ ಹಿಂದೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿದ್ದ, ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರ ಕಾಲದಲ್ಲಿ ನಿರ್ಮಿಸಲಾಗಿದೆ. ಇದು ಸದಾ ಚಟುವಟಿಕೆಯಿಂದ ಕೂಡಿರಬೇಕು ಹಾಗೂ ಓದುಗರನ್ನು ಆಕರ್ಷಿಸಬೇಕು ಎಂದು ಕಟ್ಟಡಕ್ಕೆ ಕಾಯಕಲ್ಪ ನೀಡಲಾಗಿದೆ. •ಎಚ್.ಎಂ. ಅರುಣ್‌ಕುಮಾರ್,
ಕಾರ್ಯದರ್ಶಿ, ಹೊಸ ಸಂಪದ, ಹೊನ್ನಾಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.