ಸುಣ್ಣ ಬಣ್ಣದಲ್ಲಿ ಕಂಗೊಳಿಸುತ್ತಿದೆ ಸರ್ಕಾರಿ ಶಾಲೆ
ಶಿಕ್ಷಕಿಯ ಕಾರ್ಯಕ್ಕೆ ಸಾಥ್ ನೀಡಿದ ಎಸ್‌ಡಿಎಂಸಿ-ಗ್ರಾಪಂ
Team Udayavani, Dec 16, 2019, 11:32 AM IST
ಹೊನ್ನಾಳಿ: ಸರ್ಕಾರಿ ಕೆಲಸ ಸಿಕ್ಕ ಮೇಲೆ ಇನ್ನೇನು ಕೆಲಸ ಎನ್ನುವ ಈ ಕಾಲದಲ್ಲಿ ಇಲ್ಲೊಬ್ಬ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಉತ್ತಮ ಬೋಧನೆಯೊಂದಿಗೆ ತಮ್ಮ ಸ್ವಂತ ಹಣ ಹಾಗೂ ಗ್ರಾಪಂ ಸಹಕಾರದೊಂದಿಗೆ ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣದ ಬಳಿದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಟ್ಟಣದಿಂದ ಸುಮಾರು ಮೂರು ಕಿ.ಮೀ.ದೂರವಿರುವ ತುಂಗಾ ಮೇಲ್ದಂಡೆ ಕಚೇರಿ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಒಂದು ವರ್ಷದ ಹಿಂದೆ ಮಕ್ಕಳಿಲ್ಲದೆ ಸೊರಗಿತ್ತು. ಇನ್ನೇನು ಇತಿಹಾಸದ ಪುಟ ಸೇರಲಿದೆ ಈ ಶಾಲೆ ಎನ್ನುವಷ್ಟರಲ್ಲಿ ಶಾಲೆಯಲ್ಲಿ ಉತ್ತಮ ವಾತಾವರಣ ಹಾಗೂ ಪರಿಸರ ಸೃಷ್ಟಿಸಿ ಮಕ್ಕಳನ್ನು ಶಾಲೆಗೆ ಬರುವಂತೆ ಆಕರ್ಷಣೀಯವಾಗಿ ಮಾಡಿದ್ದಾರೆ ಶಿಕ್ಷಕಿ ಕೆ.ಸಿ.ಅನಿತಾ.
ಬಹಳ ವರ್ಷಗಳಿಂದ ಸುಣ್ಣ ಬಣ್ಣ ಕಾಣದ ಶಾಲೆ ಕಟ್ಟಡ ಕಳೆಗುಂದಿತ್ತು. ಗ್ರಾ.ಪಂ, ಎಸ್ ಡಿಎಂಸಿ ಸಹಕಾರದಿಂದ ಎರಡು ಕೊಠಡಿಗಳ ಕಟ್ಟಡಕ್ಕೆ ಆಯಿಲ್ ಪೈಂಟ್ ಮಾಡಿಸಿ ಶಾಲಾ ಕಟ್ಟಡ ಮಿರಿ ಮಿರಿ ಮಿಂಚುವಂತೆ ಮಾಡಿದ್ದಾರೆ. ಗ್ರಾಪಂ 9 ಸಾವಿರ ರೂ. ಅನುದಾನ ನೀಡಿದ್ದರೆ ಶಿಕ್ಷಕಿ ಅನಿತಾ 15 ಸಾವಿರ ರೂ. ತಮ್ಮ ಸಂಬಳದಿಂದ ಖರ್ಚು ಮಾಡಿ 24 ಸಾವಿರ ರೂ. ವೆಚ್ಚದಲ್ಲಿ ಬಣ್ಣ ಮಾಡಿಸಿದ್ದಾರೆ. . ಶಾಲಾ ಆವರಣದಲ್ಲಿ ಹೂವಿನ ಗಿಡಗಳು ಹಾಗೂ ಇತರ ಸಸ್ಯ ಸಂಕುಲ ಬೆಳೆಸಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಿದ್ದಾರೆ.
ಸರ್ಕಾರಿ ಲೋಯರ್ ಪ್ರೈಮರಿ ಶಾಲೆಯಲ್ಲಿ 1ರಿಂದ 5ನೇತರಗತಿವರೆಗೆ ಇದ್ದು ಸದ್ಯ 25 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೆ.ಸಿ.ಅನಿತಾ ಸೇರಿದಂತೆ ಇಬ್ಬರು ಶಿಕ್ಷಕಯರು ನಿಯೋಜನೆಯಲ್ಲಿದ್ದಾರೆ.
ಶಿಕ್ಷಕಿ ಕೆ.ಸಿ.ಅನಿತಾ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಬಳಿ ಇರುವ ಸರ್ಕಾರಿ ಶಾಲೆಗೆ ಬಂದ ಮೇಲೆ ಶಾಲೆ ಪುನಶ್ಚೇತನಗೊಂಡು ಮಕ್ಕಳು ಶಾಲೆಗೆ ಬರುವಂತಾಗಿದೆ. ಇಂತಹ ಶಿಕ್ಷಕರು ಇದ್ದರೆ ಸರ್ಕಾರಿ ಶಾಲೆಗಳಿಗೆ ಉತ್ತಮ ಭವಿಷ್ಯವಿದೆ. ಕೈಯಿಂದ ಹಣ ಹಾಕಿ ಶಾಲಾಲ ಕಟ್ಟಡಕ್ಕೆ ಬಣ್ಣ ಬಳಿಸಿದ್ದಲ್ಲದೇ ಉತ್ತಮ ಪರಿಸರ ನಿರ್ಮಿಸಿದ್ದಾರೆ.
ಜಿ.ಇ. ರಾಜೀವ್,
ಬಿಇಒ, ಹೊನ್ನಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.