ನಾಲೆ ದುರಸ್ತಿಯಿಂದ ನಳನಳಿಸುತ್ತಿವೆ ಬೆಳೆಗಳು
2017ರಲ್ಲಿ ತುಂಗಾ ಎಡದಂಡೆ ನಾಲೆ ಕಾಮಗಾರಿ ಆರಂಭಅವಳಿ ತಾಲೂಕಲ್ಲಿ ನಾಲೆ ಉದ್ದ 19 ಕಿ.ಮೀ
Team Udayavani, Nov 29, 2019, 11:29 AM IST
ಹೊನ್ನಾಳಿ: ತಾಲೂಕಿನ ಅರ್ಧ ಭಾಗದಲ್ಲಿ ಹಾದು ಹೋಗಿರುವ ತುಂಗಾ ಎಡದಂಡೆ ನಾಲೆ ಕಳೆದ ಎರಡು-ಮೂರು ದಶಕಗಳಿಂದ ಹೂಳು ತುಂಬಿದ ಕಾರಣಕ್ಕೆ ರೈತರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೀಗ, ಜನಪ್ರತಿನಿಧಿ ಗಳು, ಸರಕಾರಗಳ ಇಚ್ಛಾಶಕ್ತಿಯಿಂದಾಗಿ ನಾಲೆಯ ಆಧುನೀಕರಣ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದ್ದು, ತುಂಗಾ ಎಡದಂಡೆ ನಾಲೆಯನ್ನು ಅವಲಂಬಿಸಿರುವ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳ ಹೊಲಗಳಲ್ಲಿ ಈ ಬಾರಿ ಭತ್ತದ ಗದ್ದೆಗಳು ನಳನಳಿಸುತ್ತಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಗಾಜನೂರು ಅಣೆಕಟ್ಟೆಯಿಂದ ತುಂಗಾ ಎಡದಂಡೆ ನಾಲೆ ಕಳೆದ ನಾಲ್ಕೈದು ದಶಕಗಳಿಂದ ನೀರು ಪೂರೈಸುತ್ತಿದ್ದು, ಮೂರು ದಶಕಗಳಿಂದ ಹೂಳಿನ ಸಮಸ್ಯೆ ರೈತರನ್ನು ಬಾಧಿ ಸುತ್ತಿತ್ತು. ಕಳೆದ 2 ವರ್ಷಗಳಿಂದ ನಾಲೆ ಆಧುನೀಕರಣ ಭರದಿಂದ ನಡೆದ ಪರಿಣಾಮ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗಳಿಗೆ ಯಥೇತ್ಛವಾಗಿ ನೀರು ಲಭಿಸಿದೆ. ನ್ಯಾಮತಿ ತಾಲೂಕಿನ ಗೋವಿನಕೋವಿ, ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಸುಂಕದಕಟ್ಟೆ, ಹೊನ್ನಾಳಿ ಪಟ್ಟಣ, ಬಲಮುರಿ, ಕೋನಾಯಕನಹಳ್ಳಿ ಮಗಳ ಮೂಲಕ ಹಾದುಹೋಗಿರುವ ನಾಲೆಗಳಲ್ಲಿ ಹೂಳು ತುಂಬಿ ನೀರಿನ ಸಮಸ್ಯೆ ಅಧಿಕವಾಗಿತ್ತು. ಇದೀಗ, ಸುಂಕದಕಟ್ಟೆ ಗ್ರಾಮದವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಗ್ರಾಮಗಳಲ್ಲಿ ಶೀಘ್ರವೇ ಕಾಮಗಾರಿ ಆರಂಭ ಆಗಲಿದೆ. ನಾಲೆಯಿಂದ ಅವಳಿ ತಾಲೂಕಿನ ಸುಮಾರು 100 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯದೊರಕುತ್ತದೆ.
2017ರಲ್ಲಿ ತುಂಗಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ ಆರಂಭಿಸಲಾಗಿದ್ದು, ಒಟ್ಟು 343 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿದೆ. ಶಿವಮೊಗ್ಗ ತಾಲೂಕಿನ ಗಾಜನೂರಿನಿಂದ ಅಚ್ಚುಕಟ್ಟು ಪ್ರದೇಶದ ಕೊನೆಯವರೆಗೆ ಅಂದರೆ ಹೊನ್ನಾಳಿ ತಾಲೂಕಿನ ಕೋನಾಯಕನಹಳ್ಳಿ, ಬಳ್ಳೇಶ್ವರ ಗ್ರಾಮಗಳವರೆಗೆ ನಾಲೆಯ ಉದ್ದ ಒಟ್ಟು 101 ಕಿಮೀ ಇದ್ದು, ಚೀಲೂರು ಭಾಗದಿಂದ ಮೊದಲುಗೊಂಡ ಹೊನ್ನಾಳಿ ತಾಲೂಕಿನ ವ್ಯಾಪ್ತಿಯಲ್ಲಿ ನಾಲೆಯ ಉದ್ದ ಒಟ್ಟು 19 ಕಿಮೀ ಇದೆ.
2018ರ ಸೆಪ್ಟಂಬರ್-ಅಕ್ಟೋಬರ್ ತಿಂಗಳ ಹೊತ್ತಿಗೆ ಅಕಾಲಿಕ ಮಳೆಯಿಂದ ಕಾಮಗಾರಿಗೆ ಅಡ್ಡಿಯುಂಟಾಯಿತು. ಈಗ ಮುಂಗಾರು ಬೆಳೆಗೆ ನೀರು ಹರಿಸಲಾಗುತ್ತಿದ್ದು, ನೀರು ಹರಿಸುವುದು ನಿಲ್ಲಿಸಿದ ನಂತರ ಮತ್ತೆ ಕಮಗಾರಿ ಆರಂಭಿಸಲಾಗುವುದು.
.ರಘುರೆಡ್ಡಿ,ಯೋಜನಾ ವ್ಯವಸ್ಥಾಪಕ.
ತುಂಗಾ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯನ್ನು ಕಳೆದ ಎರಡು ವರ್ಷಗಳಿಂದ ಅಚ್ಚುಕಟ್ಟಾಗಿ ನಿರ್ವಹಿಸಿರುವ ಪರಿಣಾಮ ನಾಲೆಗಳಲ್ಲಿ ಸರಾಗವಾಗಿ ನೀರು ಹರಿಯುತ್ತಿದ್ದು, ಕಾಮಗಾರಿಯ ಕೊನೆಯ ಹಂತ ಬಾಕಿ ಇದ್ದು, ಅದೂ ಶೀಘ್ರದಲ್ಲಿಯೇ ಪೂರ್ಣಗೊಳ್ಳುತ್ತದೆ.
.ಜಯಮಣಿಕಂಠನ್,
ಚೀಲೂರು ಭಾಗದ ಯೋಜನಾ ವ್ಯವಸ್ಥಾಪಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.