ಗಣಪತಿಯ ಸಂಶೋಧಕ ಗೋವರ್ಧನ ಸನ್ಮಾನ
ಅಂಕೋಲೆಕರರ ಜ್ಞಾನ ಮಕ್ಕಳಿಗೆ ಸ್ಫೂರ್ತಿದಾಯಕ: ಬಾಳೇರಿ
Team Udayavani, Sep 26, 2019, 7:01 PM IST
ಹೊನ್ನಾವರ: ಗಣಪತಿಯ ಕುರಿತು ಸಮಗ್ರ ಮಾಹಿತಿಯನ್ನು ಕಲೆಹಾಕಿ, ಅವುಗಳನ್ನು ಮೂರ್ತಿ, ಪುಸ್ತಕ ಮತ್ತು ಛಾಯಾಚಿತ್ರ ರೂಪದಲ್ಲಿ ಪ್ರದರ್ಶಿಸುತ್ತ ಬಂದಿರುವ ಗೋವರ್ಧನ ಅಂಕೋಲೇಕರ್ ಅವರು ಭಾರತದ ಗಣಪತಿಯನ್ನು ವಿದೇಶಕ್ಕೂ, ವಿದೇಶದ ಗಣಪತಿಯನ್ನು ಭಾರತಕ್ಕೂ ಪರಿಚಯಿಸಿ ಮಾಡಿದ ಸಾಧನೆ ಪ್ರಶಂಸನೀಯ ಎಂದು ಜಿ.ಎಸ್. ಯುವವಾಹಿನಿ ಜಿಲ್ಲಾಧ್ಯಕ್ಷ ಹಾಗೂ ಹೊನ್ನಾವರ ಅರ್ಬನ್ ಬ್ಯಾಂಕ ಅಧ್ಯಕ್ಷ ರಾಘವ ಬಾಳೇರಿ ಹೇಳಿದರು.
ಅವರು ಸ್ಥಳೀಯ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಗೋವರ್ಧನ ಅಂಕೋಲೇಕರ್ ಸಂಗ್ರಹಿಸಿದ ಗಣಪತಿ ಛಾಯಾಚಿತ್ರ, ಮೂರ್ತಿ ಮತ್ತು ಗಣೇಶ ಧ್ಯಾನ ಪುಸ್ತಕವನ್ನು ಬಿಡುಗಡೆ ಮಾಡಿ, ಉದ್ಘಾಟಿಸಿ ಮಾತನಾಡಿದರು. ನಮಗೆ ಒಂದೋ ಎರಡೋ ರೂಪದಲ್ಲಿ ಕಂಡ, ದೇಶದಲ್ಲಿ ಮಾತ್ರ ಇದ್ದಾನೆ ಎಂದುಕೊಂಡ ಗಣಪತಿಯ ಸಾವಿರಾರು ರೂ ಮತ್ತು ಜಗತ್ತಿನ ನಾನಾಭಾಗದಲ್ಲಿ ಕಾಣಿಸುವ ಗಣಪತಿ, ಸ್ತ್ರೀ ಗಣಪತಿ ಗಣೇಶಾನಿ, ಮೊದಲಾದ ವಿವರಗಳನ್ನು ತಿಳಿಸಿಕೊಟ್ಟವರು, ಶ್ರೀಗಂಧ ಮತ್ತು ಶಿಲೆಯಲ್ಲಿ ಗಣಪತಿ ಮೂರ್ತಿಯನ್ನು ಒದಗಿಸಿದ ಅಂಕೋಲೇಕರ್ ಕನ್ನಡ ನಾಡಿಗೆ ದೊಡ್ಡ ಉಪಕಾರ
ಮಾಡಿದ್ದಾರೆ ಎಂದು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಉದ್ಯಮಿ ಮತ್ತು ನ್ಯೂ ಇಂಗ್ಲಿಷ್ ಸಂಸ್ಥೆಯ ಅಧ್ಯಕ್ಷ ಜಗದೀಶ ಪೈ ಮಾತನಾಡಿ ನಮ್ಮ ಶಾಲೆಯಲ್ಲಿ 80ರ ಹರೆಯದ ಗೋವರ್ಧನ ಅಂಕೋಲೇಕರ್ ಪ್ರದರ್ಶನ ಏರ್ಪಡಿಸಿರುವುದು, ಗಣಪತಿ ಕುರಿತಾದ ಅವರ ಜ್ಞಾನವನ್ನು ಹಂಚುತ್ತಿರುವುದು ಮಕ್ಕಳಿಗೂ ಸ್ಪೂರ್ತಿದಾಯಕ. ಅವರ ಜೀವನ ಗಣಪತಿಗೆ ಸಮರ್ಪಣೆಯಾಗಿದೆ. ಧಾರ್ಮಿಕ ಕ್ಷೇತ್ರಕ್ಕೆ ಅವರು ಗಣಪತಿಯ ಬಹುರೂಪ ತೋರಿಸಿಕೊಟ್ಟು ಕೊಡುಗಡೆ ನೀಡಿದ್ದಾರೆ ಎಂದರು.
ಕೆಕ್ಕಾರ ಜಿ.ಡಿ. ಭಟ್ ಇವರ ಮೂರ್ತಿಗಳನ್ನು ಷಣ್ಮುಖ ಮತ್ತು ಭವಾನಿ ಇವರು ಛಾಯಾಗ್ರಹಿಸಿದ್ದನ್ನು ಮತ್ತು ಪುಸ್ತಕ, ಮೂರ್ತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ, ಇನ್ನು ಸೆ.26ರವರೆಗೆ ಪ್ರದರ್ಶನವಿದೆ. ಪ್ರಾಂಶುಪಾಲ ಎಸ್.ಜಿ. ಭಟ್, ಆಡಳಿತ ಮಂಡಳಿಯ ಆರ್.ಜಿ. ಶಾನಭಾಗ ಉಪಸ್ಥಿತರಿದ್ದರು.
ಸಾರ್ವಜನಿಕರ ವತಿಯಿಂದ ಅತಿಥಿಗಳು ಅಂಕೋಲೇಕರ್ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ಕಲಾವಿದ ಬಿ.ಜೆ. ನಾಯ್ಕ ಪ್ರದರ್ಶನವನ್ನು ಸಂಘಟಿಸಿದರು. ಶಾಲೆಯ ಮುಖ್ಯಾಧ್ಯಾಪಕ ವಿ.ಎಸ್. ಅವಧಾನಿ ಸ್ವಾಗತಿಸಿದರು. ಎ.ಕೆ. ಭಟ್ ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.